ಊಟ ನೀರು ಇಲ್ಲದೇ ನರಳುತಿದ್ದ ವಿದ್ಯಾರ್ಥಿಗಳಿಗಾಗಿ ಹೊರಬಂದ ನವೀನ್ ಅವರು ಸಾವನಪ್ಪಿದ್ದಾರೆ ಎಂಬ ವಿಷಯ ನಮ್ಮನ್ನು ಆಘಾತಗೊಳಿಸಿತು. ʼನಮ್ಮ ಮೇಲಿನ ಕಾಳಜಿಯೇ ಆತನ ಜೀವವನ್ನು ಬಲಿತೆಗೆದುಕೊಂಡಿದೆ’ ಎಂದು ಉಕ್ರೇನ್‌ನಲ್ಲಿ ನವೀನ್ ಜೊತೆ ಓದುತಿದ್ದ ಸ್ನೇಹಿತರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಮಾರ್ಚ್ 1 ರಂದು, ಯುದ್ಧಪೀಡಿತ ಉಕ್ರೇನ್‌ನಲ್ಲಿ ರಷ್ಯಾದ ಶೆಲ್ ದಾಳಿಗೆ ಕರ್ನಾಟಕದ ನವೀನ್ ಎಸ್‌ಜಿ ಎಂಬ ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿದಾಗ, ನವೀನ್ ಸ್ನೇಹಿತಾರಾದ ಅಮಿತ್ ವೈಶ್ಯರ್ ಅವರ ಫ್ಲ್ಯಾಟ್‌ನೊಳಗಿನ ಬಂಕರ್‌ನಲ್ಲಿ ಕೆಲವೇ ಕೆಲವು ಮೀಟರ್‌ಗಳಷ್ಟು ದೂರದಲ್ಲಿ ಇದ್ದರೆ, ಮತ್ತೊರ್ವ ಸ್ನೇಹಿತ ಸುಮನ್ ಶ್ರೀಧರ್ ಎಂಬುವವರು ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಗುಂಪಿನ ಜೊತೆ ಕೆಲವೇ ಕೆಲವು ಕಿಲೋಮೀಟರ್ ದೂರದಲ್ಲಿ ಇದ್ದು, ಈ ಇಬ್ಬರೂ ಕರ್ನಾಟಕದ ಬೆಂಗಳೂರಿನಿಂದ 300 ಕಿಮೀ ದೂರದಲ್ಲಿರುವ ಚಳಗೇರಿ ಎಂಬ ಹಳ್ಳಿಯಿಂದ ಬಂದವರಾಗಿದ್ದು, ನವೀನ್ ದಿಢೀರ್ ಸಾವಿನ ವಿಷಯ ತಿಳಿದ ನಮಗೆ ನಿಜಕ್ಕೂ ಆಘಾತವಾಗಿತ್ತು ಎಂದು ಬೇಸರ ವ್ಯಕ್ತಪಡಿದ್ದಾರೆ.
“ಘಟನೆ ನಡೆದಾಗ, ನಾನು ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿದ್ದೆ, ಆದರೆ ನಾನು ಹೋಗಿ ಅವರ ದೇಹವನ್ನು ನೋಡಲು ಬಯಸಿದ್ದೆ. ಆದರೆ ನಾನು ಜೀವಂತವಾಗಿ ಹಿಂತಿರುಗಲು ಸಾಧ್ಯವಾಗದಿರಬಹುದು ಎಂದು ಉಕ್ರೇನಿಯನ್ ಅಧಿಕಾರಿಗಳು ನನಗೆ ಎಚ್ಚರಿಕೆ ನೀಡಿದರು. ವಿಶ್ವವಿದ್ಯಾನಿಲಯದ ಬಂಕರ್‌ಗಳಲ್ಲಿ ಅಡಗಿಕೊಂಡಿದ್ದ ಹಲವಾರು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವ ಜವಾಬ್ದಾರಿ ನನ್ನ ಮೇಲಿತ್ತು. ಅಷ್ಟರಲ್ಲಿ ನವೀನ್ ಅವರ ದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು ಶವಾಗಾರದಲ್ಲಿ ಇರಿಸಲಾಗಿದೆ ”ಎಂದು ತಿಳಿಯಿತು ಎಂದು ಉಕ್ರೇನ್‌ನ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಹಾಗೂ ನವೀನ್ ಸ್ನೇಹಿತ ಶ್ರೀಧರ್ ಬುಧವಾರ ಬೆಳಿಗ್ಗೆ ಭಾರತಕ್ಕೆ ತಲುಪಿದರು.
“ನಾನು ಎಲ್ಲರನ್ನು ಸುರಕ್ಷಿವ ಮತ್ತು ಸುರಕ್ಷತವಾಗಿ ಮತ್ತೆ ನಮ್ಮ ತಾಯ್ನಾಡಿಗೆ ಹೋಗಲು ಬಯಸಿದ್ದೆವು, ಆದರೆ ನನ್ನ ಸ್ವಂತ ಊರಿನ ಹುಡುಗನೇ ಸಾಯುತ್ತಾನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಅವನ ಮರಣದ ನಂತರ ನಮಗೆಲ್ಲ ಭಯವಾಯಿತು. ಮುಂದಿನ ಸಹಾಯಕ್ಕಾಗಿ ಕಾಯದೆ ಹತ್ತಿರದ ಅಂತರಾಷ್ಟ್ರೀಯ ಗಡಿಯ ಕಡೆಗೆ ಪ್ರಯಾಣವನ್ನು ಪ್ರಾರಂಭಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ. ನಾವು ಖಾರ್ಕಿವ್ ರೈಲು ನಿಲ್ದಾಣಕ್ಕೆ ಹೋದೆವು ಆದರೆ ಅದು ಉಕ್ರೇನಿಯನ್ ಪ್ರಜೆಗಳಿಗೆ ಮೀಸಲಾಗಿದ್ದರಿಂದ ನಮಗೆ ರೈಲಿನಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಪಿಸೋಚಿನ್ ತಲುಪಲು ನಾವು ಭಾರತದ ಧ್ವಜವನ್ನು ಹಿಡಿದು 12 ಕಿಲೋಮೀಟರ್ ನಡೆದಿದ್ದೇವೆ. ನಾವು ನಡೆದುಕೊಂಡು ಹೋಗುತ್ತಿದ್ದ ರಸ್ತೆಯಲ್ಲೇ ಟ್ಯಾಂಕರ್‌ಗಳು ಚಲಿಸುತ್ತಿದ್ದವು ಮತ್ತು ಸುತ್ತಲೂ ಬಾಂಬ್ ಸ್ಫೋಟಗಳು ಸಂಭವಿಸುತಿದ್ದವು. ಈ ಕರಾಳ ಕ್ಷಣಗಳು ನನ್ನ ಜೀವನದುದ್ದಕ್ಕೂ ಉಳಿಯುತ್ತವೆ” ಎಂದು ಅವರು ಹೇಳಿದರು.

ಗುರುವಾರ ಶ್ರೀಧರ್ ಮತ್ತು ವೈಶ್ಯರ್ ಸೇರಿದಂತೆ 15 ವಿದ್ಯಾರ್ಥಿಗಳ ತಂಡ ಚಳಗೇರಿಯಲ್ಲಿರುವ ನವೀನ್ ಅವರ ಮನೆಯಲ್ಲಿ ಅವರ ಪೋಷಕರನ್ನು ಭೇಟಿ ಮಾಡಿ 11 ನೇ ದಿನದ ಶೋಕಾಚರಣೆಯಲ್ಲಿ ಪಾಲ್ಗೊಂಡರು.
ಉಕ್ರೇನ್‌ನಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ವೈಶ್ಯರ್, indianexpress.com ಜೊತೆ ಮಾತನಾಡಿದ್ದು, “ನವೀನ್ ನನಗೆ ಸಹೋದರನಿಗಿಂತ ಹೆಚ್ಚು. ಫೆಬ್ರವರಿ 24 ರಂದು ಸುಮನ್ ಅವರ ಹುಟ್ಟುಹಬ್ಬವನ್ನು ಆಚರಿಸಬೇಕಾಗಿತ್ತು ಮತ್ತು ನವೀನ್ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಂಡು ಕೆರೆಯ ಬದಿಯ ಟೆಂಟ್ ಅನ್ನು ಬುಕ್ ಮಾಡಿದ್ದರು. ನಾವು ಅಲ್ಲಿಗೆ ಹೋಗಬೇಕಿತ್ತು, ಆದರೆ ಅಷ್ಟರೊಳಗೆ ಕರ್ಫ್ಯೂ ಹೇರಿದರು. ಅವರ ಸಾವು ನನ್ನ ಇಡೀ ಜೀವನವನ್ನು ಕಾಡಲಿದೆ,” ಎಂದು ಹೇಳಿದರು.
ಊಟ ನೀರು ಇಲ್ಲದೇ ನರಳುತಿದ್ದ ಭಾರತೀಯ ವಿದ್ಯಾರ್ಥಿಗಳಿಗಾಗಿ ಹೊರಬಂದ ನವೀನ್ –
ವಿಶ್ವವಿದ್ಯಾನಿಲಯದೊಳಗೆ ಇದ್ದ ನೂರಾರು ಭಾರತೀಯ ವಿದ್ಯಾರ್ಥಿಗಳಿಗಾಗಿ ಹೊರಬಂದ ನವೀನ್‌ಗೆ ಹಲವಾರು ಮಂದಿ ಯಾಕೆ ಹೊರಬಂದ್ರಿ ಎಂದು ಪ್ರಶ್ನಿಸಿದ್ದರು. ಆದರೆ “ಊಟ ನೀರು ಇಲ್ಲದೇ ನರಳುತಿದ್ದೇವೆ. ನಮಗೆ ಹೊರಬರದೇ ಬೇರೆ ಯಾವುದೇ ಆಯ್ಕೆ ಇರಲಿಲ್ಲ. ಅವನು ಬೆಳಿಗ್ಗೆ ಆಹಾರ ತರಲು ಹೋದನು. ನಮ್ಮ ಬಗೆಗಿನ ಕಾಳಜಿಯೇ ಅವರ ಜೀವವನ್ನೇ ಬಲಿತೆಗೆದುಕೊಂಡಿತು. ಸಾಮಾನ್ಯವಾಗಿ, ಇಬ್ಬರು ಜನರು ಆಹಾರವನ್ನು ತರಲು ಹೋಗುತ್ತಾರೆ, ಆದರೆ ಆ ದಿನ ಅವರು ಒಬ್ಬರೇ ಹೋಗಿದ್ದರು.











