ಬೆಂಗಳೂರು: ಚರ್ಚ್ ಸ್ಟ್ರೀಟ್ ಬಳಿ ಇರುವ ನಟಿ ಶಿಲ್ಪ ಶೆಟ್ಟಿ( Shilpa Shetty) ಒಡೆತನದ ಬ್ಯಾಸ್ಟಿಯನ್ ಪಬ್(Bastian Garden City) ಮೇಲೆ ಐಟಿ ಅಧಿಕಾರಿಗಳು ದಾಳಿ(IT Raid) ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಅತಿ ದುಬಾರಿ ಪಬ್ ಎನಿಸಿರುವ ಬ್ಯಾಸ್ಟಿಯನ್ ಪಬ್ ಮೇಲೆ ಆದಾಯ ತೆರಿಗೆ ಸರಿಯಾಗಿ ಕಟ್ಟಿಲ್ಲದ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಐಟಿ ಅಧಿಕಾರಿಗಳು ಬೆಳಗ್ಗೆಯೇ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 5 ಇನ್ನೋವಾ ಕಾರಿನಲ್ಲಿ ಬಂದಿರುವ 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ತೆರಿಗೆ ವಂಚನೆ ಸಂಬಂಧ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಕೇಂದ್ರ ಭದ್ರತಾ ಪಡೆಯಿಂದ ಐಟಿ ದಾಳಿಗೆ ಭದ್ರತೆ ನೀಡಲಾಗಿದೆ. ಐಟಿ ಅಧಿಕಾರಿಗಳ ದಾಳಿ ಮತ್ತು ಪರಿಶೀಲನೆ ವೇಳೆ ಚಿತ್ರೀಕರಣ ಮಾಡುವಾಗ ಪಬ್‌ನ ಬೌನ್ಸರ್ ಗಳು ಗಲಾಟೆ ನಡೆಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶ ಮಾಡಿದ ಕಬ್ಬನ್ ಪಾರ್ಕ್ ಪೊಲೀಸರು ಮತ್ತು ಐಟಿ ಅಧಿಕಾರಿಗಳು ಬೌನ್ಸರ್ ಗಳಿಗೆ ಎಚ್ಚರಿಕೆ ನೀಡಿ ಹೆಚ್ಚುವರಿ ಭದ್ರತೆ ಒದಗಿಸಿದ್ದಾರೆ.











