
ಕೋಲಾರ: ಕೋಲಾರ ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿರುವುದನ್ನು ಜೆಡಿಎಸ್ ಶಾಸಕರೇ ಬಹಿರಂಗ ಮಾಡಿದ್ದಾರೆ. ಕಾಂಗ್ರೆಸ್ ಸೇರಲು, ದೊಡ್ಡ ನಾಯಕರಿಂದಲೇ ಬಂದಿದೆಯಂತೆ ಆಹ್ವಾನ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮುಳಬಾಗಿಲು JDS ಶಾಸಕ ಸಮೃದ್ದಿ ಮಂಜುನಾಥ್ ಹೇಳಿಕೆ ನೀಡಿದ್ದಾರೆ. ಇತ್ತೀಚಿಗಷ್ಟೇ ಕೋಲಾರದ JDS ಶಾಸಕರು ಕಾಂಗ್ರೆಸ್ ಸೇರ್ತಾರೆ ಆಗ್ತಾರೆ ಎಂದಿದ್ದರು ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ. ಇದೀಗ ಕೋಲಾರದ ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಆಹ್ವಾನ ಬಂದಿರುವುದನ್ನು ಬಹಿರಂಗ ಮಾಡಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಆಹ್ವಾನ ಬಗ್ಗೆ ಸಮೃದ್ದಿ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿಲ್ಲ, ಸದ್ಯಕ್ಕೆ ಜೆಡಿಎಸ್ ಪಕ್ಷದಲ್ಲಿ ಇದ್ದೇನೆ. ಕಾಂಗ್ರೆಸ್ ಗುಂಪುಗಾರಿಕೆಯಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದಿರುವ ಸಮೃದ್ಧಿ ಮಂಜುನಾಥ್, ಶಾಸಕ ಕೆವೈ ನಂಜೇಗೌಡ ಯಾವ ಆಧಾರದಲ್ಲಿ ಹೇಳಿದ್ದಾರೊ ಗೊತ್ತಿಲ್ಲ. ಕಾಂಗ್ರೆಸ್ ಸೇರಲು ದೊಡ್ಡ ವ್ಯಕ್ತಿಗಳೇ ಆಹ್ವಾನ ನೀಡಿದ್ದಾರೆ. ಕಾಂಗ್ರೆಸ್ ಆಹ್ವಾನ ಬಂದಿರೊದು ಸತ್ಯ, ಜೆಡಿಎಸ್ ಬಿಟ್ಟು, ಕಾಂಗ್ರೆಸ್ ಸೇರುವ ಯಾವುದೇ ನಿರ್ಧಾರ ಮಾಡಿಲ್ಲ. ಮುಳಬಾಗಿಲು ಜನತೆಯ ನಂಬಿಕೆ ಉಳಿಸಿಕೊಳ್ಳೋದೆ ನನ್ನ ಜವಾಬ್ದಾರಿ ಎಂದಿದ್ದಾರೆ

.
H.D ಕುಮಾರಸ್ವಾಮಿ ಕೇಂದ್ರ ಸರ್ಕಾರದಲ್ಲಿ ಮಂತ್ರಿ ಆದ್ಮೇಲೆ ನಮ್ಮನ್ನು ಅನಾಥ ಮಾಡಿದ್ದಾರೆ. ಕೇಂದ್ರ ಮಂತ್ರಿ ಆದ್ಮೇಲೆ ಸಾಕಷ್ಟು ಕೆಲಸ ಕಾರ್ಯಗಳಲ್ಲಿ ಅವರೂ ಬ್ಯುಸಿ ಆಗಿದ್ದಾರೆ, ಅವರಿಗೂ ಬಿಡುವಿಲ್ಲ. ಸೋತಿರೊ ವ್ಯಕ್ತಿಗಳೇ H.D ಕುಮಾರಸ್ವಾಮಿ ಜೊತೆಗಿದ್ದಾರೆ ಅನ್ನೊ ನೊವು ಕೆಲವು ಶಾಸಕರಲ್ಲಿದೆ. ಆ ನೋವನ್ನು ನನ್ನ ಬಳಿಯೂ ಕೆಲವು ಶಾಸಕರು ವ್ಯಕ್ತಪಡಿಸಿದ್ದಾರೆ . ನಮ್ಮ ನೊವು ಕುಮಾರಸ್ವಾಮಿ ಅವ್ರಿಗೆ ಮುಂದಿನ ದಿನಗಳಲ್ಲಿ ಅರ್ಥವಾಗಲಿ ಎಂದು ಭಾವಿಸಿದ್ದೇನೆ. ಶಾಸಕರಾಗಿ ಆಯ್ಕೆ ಆದ್ಮೇಲೆ, ಶಾಸಕರ ಭಾವನೆಗೂ ಸ್ಪಂದಿಸಬೇಕು ಎಂದು ಕುಮಾರಸ್ವಾಮಿಗೂ ಪರೋಕ್ಷವಾಗಿ ಮನವಿ ಮಾಡಿದ್ದಾರೆ.
.




