ಉತ್ತರ ಅಟ್ಲಾಂಟಾ: ಟೈಟಾನಿಕ್ ಹಡಗಿನ ಅವಶೇಷಗಳಿರುವ ಸಮುದ್ರದಾಳಕ್ಕೆ ಪ್ರವಾಸಿಗರ ಹೊತ್ತಯ್ದು ಬಳಿಕ ನಾಪತ್ತೆಯಾದ ಜಲಂತರ್ಗಾಮಿ ನೌಕೆಯಲ್ಲಿ ಒಟ್ಟು ಐವರು ಪ್ರವಾಸಿಗರಿದ್ದು, ಅದರಲ್ಲಿ ಪಾಕಿಸ್ತಾನದ ಅತ್ಯಂತ ಶ್ರೀಮಂತ ಉದ್ಯಮಿ ಹಾಗೂ ಅವರ ಮಗನೂ ಇದ್ದರೂ ಎಂಬ ಮಾಹಿತಿ ಲಭ್ಯವಾಗಿದೆ. 1912 ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಟೈಟಾನಿಕ್ ಹಡಗಿನ ಅವಶೇಷಗಳಿರುವ ಸಮುದ್ರದಾಳಕ್ಕೆ ಪ್ರವಾಸ ಹೋದ ಜಲಂತರ್ಗಾಮಿ ಪ್ರವಾಸಿ ನೌಕೆ ಬಳಿಕ ನಾಪತ್ತೆಯಾಗಿತ್ತು. ಈ ನತದೃಷ್ಟ ಜಲಂತರ್ಗಾಮಿ ನೌಕೆ ಐವರು ಪ್ರವಾಸಿಗರನ್ನು ಹೊತ್ತುಕೊಂಡು ಭಾನುವಾರ ಅಟ್ಲಾಂಟಾದ ಸಮುದ್ರದಾಳಕ್ಕೆ ಜಿಗಿದಿತ್ತು. ಹೀಗೆ ಹೊರಟ ನೌಕೆ ಬಳಿಕ ಸಂಪರ್ಕ ಕಳೆದುಕೊಂಡಿದ್ದು, ಈ ನೌಕೆಯ ಪತ್ತೆಗಾಗಿ ಭಾರೀ ಹುಡುಕಾಟ ನಡೆಯುತ್ತಿದೆ.
ಹುಡುಕಲ್ಪಡುತ್ತಿರುವ ನೌಕೆಯಿಂದ ಪ್ರತಿ ಅರ್ಧಗಂಟೆಗೊಮ್ಮೆ ಬಡಿಯುವ ಶಬ್ಧ ಕೇಳಿಬರುತ್ತಿದೆ ರಕ್ಷಣಾ ತಂಡಗಳು ತಿಳಿಸಿವೆ. ಯುಎಸ್ ಕರಾವಳಿ ಪಡೆ, ಕೆನಡಾದ ಜಂಟಿ ರಕ್ಷಣಾ ಕೇಂದ್ರ ಮತ್ತು ಫ್ರಾನ್ಸ್ನ ಸಂಶೋಧನಾ ಹಡಗುಗಳು ಕಾಣೆಯಾಗಿರುವ ಆರ್ಕಾ (ಸಾಗರದ ಡಾಲ್ಫಿನ್ ಕುಟುಂಬಕ್ಕೆ ಸೇರಿದ ಹಲ್ಲಿನ ತಿಮಿಂಗಿಲವಾಗಿದ್ದು, ಇದನ್ನು ಕಿಲ್ಲರ್ ತಿಮಿಂಗಲ ಎಂದು ಕರೆಯಲಾಗುತ್ತದೆ) ಗಾತ್ರದ ಜಲಾಂತರ್ಗಾಮಿ ನೌಕೆಯ ಪತ್ತೆಗೆ ನಿರಂತರವಾಗಿ ಶ್ರಮಿಸುತ್ತಿವೆ.
ಪಾಕ್ ಉದ್ಯಮಿ
ಜಲಾಂತರ್ಗಾಮಿ ಹಡಗಿನಲ್ಲಿದ್ದ ಐವರ ಪೈಕಿ ಪಾಕಿಸ್ತಾನದ ಪ್ರಮುಖ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಪುತ್ರ ಸೇರಿದ್ದಾರೆ. ಆಕ್ಷನ್ ಏವಿಯೇಷನ್‌ನ ಅಧ್ಯಕ್ಷ ಹಮೀಶ್ ಹಾರ್ಡಿಂಗ್ ಕೂಡ ನಾಪತ್ತೆಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ತುಂಬಾ ಹತ್ತಿರದಿಂದ ವಸ್ತು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ವೈಟ್ ಹೌಸ್ನ ನ್ಯಾಷನಲ್ ಸೆಕ್ಯುರಿಟಿ ಸಲಹೆಗಾಗ ಜಾನ್ ಕಿರ್ಬಿ ತಿಳಿಸಿದ್ದಾರೆ.
ನ್ಯೂಫೌಂಡ್‌ಲ್ಯಾಂಡ್‌ನಲ್ಲಿ 40 ವರ್ಷಗಳಲ್ಲೇ ಅತ್ಯಂತ ಕೆಟ್ಟದೆನಿಸಿದ ಚಳಿಗಾಲದ ಕಾರಣ, ಈ ಪ್ರವಾಸವೂ 2023 ರಲ್ಲಿ ಟೈಟಾನಿಕ್‌ಗೆ ತೆರಳುತ್ತಿರುವ ಮೊದಲ ಮತ್ತು ಏಕೈಕ ಮಾನವಸಹಿತ ನೌಕೆ ಆಗಿರಬಹುದು ಎಂದು ಅವರು ಪ್ರವಾಸದ ಆರಂಭದಲ್ಲಿ ಹಾಕಿದ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಾರ್ಡಿಂಗ್ ಹೇಳಿದ್ದರು. 1912 ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಟೈಟಾನಿಕ್ ಹಡಗಿನ ಅವಶೇಷಗಳಿರುವ ಸಮುದ್ರದಾಳಕ್ಕೆ ಪ್ರವಾಸ ಹೋದ ಜಲಂತರ್ಗಾಮಿ ಪ್ರವಾಸಿ ನೌಕೆ ಭಾನುವಾರ ನಾಪತ್ತೆಯಾಗಿತ್ತು. ಸಮುದ್ರದಾಳಕ್ಕೆ ಪ್ರವಾಸ ಆರಂಭಿಸಿ ಒಂದು ಮುಕ್ಕಾಲು ಗಂಟೆಯ ನಂತರ ಈ ಅವಘಡ ಸಂಭವಿಸಿದೆ ಎಂದು ಅಮೆರಿಕಾದ ಕೋಸ್ಟ್ ಗಾರ್ಡ್ ಸಿಬ್ಬಂದಿಯೊಬ್ಬರು ತಿಳಿಸಿದ್ದರು.
ಟೈಟಾನಿಕ್ ಅವಶೇಷಗಳ ವೀಕ್ಷಣೆಗೆ ಅವಕಾಶ ಸೇರಿದಂತೆ 3,800m (12,500 ಅಡಿ) ಆಳ ಸಮುದ್ರದಲ್ಲಿ 8 ದಿನಗಳ ಈ ಪ್ರವಾಸಕ್ಕೆ ಒಬ್ಬರಿಗೆ ತಗಲುವ ವೆಚ್ಚ 250,000 ಡಾಲರ್ ಅಂದರೆ 2,05,11,575 ಭಾರತೀಯ ರೂಪಾಯಿಗಳು. ಇಷ್ಟೊಂದು ವೆಚ್ಚ ಮಾಡಿ ಟೈಟಾನಿಕ್ ಅವಶೇಷಗಳ ನೋಡುವ ಕನಸಿನೊಂದಿಗೆ ತೆರಳಿದ ಪ್ರವಾಸಿಗರನ್ನು ಹೊತ್ತೊಯ್ದ ಜಲಂತರ್ಗಾಮಿ ನೌಕೆ ನಾಪತ್ತೆಯಾಗಿದ್ದು ಎಲ್ಲರಲ್ಲಿ ಆತಂಕ ಮೂಡಿಸಿದೆ.
ಈ ಹಡಗಿನಲ್ಲಿದ್ದ ಎಲ್ಲಾ ಐದು ಜನರನ್ನು ರಕ್ಷಿಸಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಈ ಪ್ರವಾಸ ಆಯೋಜಿಸಿರುವ ಪ್ರವಾಸಿ ಸಂಸ್ಥೆ ಓಷನ್‌ಗೇಟ್ ಹೇಳಿದೆ. ಈ ಸಮುದ್ರದಾಳದ ಪ್ರವಾಸ ಯೋಜನೆಗಾಗಿ ಸಂಸ್ಥೆ ಒಬ್ಬರಿಂದ 250,000 ಡಾಲರ್ ಹಣ ಪಡೆದಿದೆ. ನಾಪತ್ತೆಯಾದ ಜಲಂತರ್ಗಾಮಿ ನೌಕೆಗಾಗಿ ಅಮೆರಿಕಾದ ಸರ್ಕಾರಿ ಏಜೆನ್ಸಿಗಳು, ಯುಎಸ್ (US) ಮತ್ತು ಕೆನಡಾದ ನೌಕಾಪಡೆಗಳು (Canadian navies) ಮತ್ತು ಆಳ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುವ ವಾಣಿಜ್ಯ ಸಂಸ್ಥೆಗಳು ಸಹಾಯ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1912 ರಲ್ಲಿ ಮುಳುಗಿದ ಟೈಟಾನಿಕ್ ಹಡಗಿನ ಅವಶೇಷವೂ ಸೇಂಟ್ ಜಾನ್ಸ್‌ನ (St John) ದಕ್ಷಿಣಕ್ಕೆ ನ್ಯೂಫೌಂಡ್‌ಲ್ಯಾಂಡ್‌ನ (Newfoundland)ಸುಮಾರು 435 ಮೈಲಿ (700 ಕಿಮೀ) ದೂರದಲ್ಲಿ ಇದೆ.