ಗುಜರಾತ್‌ನ ವಿಮಾನ ದುರಂತ (Plane crash) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮಾತನಾಡಿದ್ದಾರೆ.ಇದು ಅತ್ಯಂತ ದುಃಖಕರ ಘಟನೆಯಾಗಿದೆ.ಈ ಘಟನೆ ಬಗ್ಗೆ ಈಗಾಗಲೇ ತನಿಖೆ ನಡೆಸಲಾಗ್ತಿದೆ ಮತ್ತು ಮಾನದ ಬ್ಲಾಕ್ ಬಾಕ್ಸ್ (Black box) ಪತ್ತೆಯಾಗಿವೆ.ಈತರ ವಿಚಾರದಲ್ಲಿ ರಾಜಕಾರಣ ಮಾಡೋದು ಸರಿಯಲ್ಲ ಎಂದಿದ್ದಾರೆ.

ಇದರ ಜೊತೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಲ್ಲಿ ಅಭಿಮಾನಿಗಳ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಈ ಕಾಲ್ತುಳಿತಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಎಂದು ವಾಗ್ದಾಳಿ ನಡೆಸಿದ್ದಾರೆ. ಆದರೆ ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳನ್ನ ಈ ಪ್ರಕರಣದಲ್ಲಿ ಬಲಿ ಕೊಟ್ಟಿದೆ. ಈ ಪೊಲೀಸ್ ಅಧಿಕಾರಿಗಳ ಅಮಾನತು ರಾಜ್ಯ ಸರ್ಕಾರದ ಅವಿವೇಕಿತನಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಕೇವಲ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ಕ್ರೇಡಿಟ್ ಪಡೆಯಲು, ಪ್ರಚಾರ ಪಡೆಯಲು ಸಿಎಂ, ಡಿಸಿಎಂ ಮಧ್ಯೆ ಪೈಪೋಟಿ ನಡೆದಿತ್ತು. ಈ ಸಂಭ್ರಮಾಚರಣೆಗೆ ಬನ್ನಿ..ಎಲ್ಲರೂ ಬನ್ನಿ..ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಅಂತಾ ಸರ್ಕಾರ ಕರೆದಿದೆ. ಹೀಗಾಗಿ ಕಾಲ್ತುಳಿತ ಘಟನೆಗೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದಿದ್ದಾರೆ.
ಅಹಮದಾಬಾದ್ ವಿಮಾನ ದುರಂತಕ್ಕೂ ಕಾಲ್ತುಳಿತ ಘಟನೆಗೂ ತುಲನೆ ಮಾಡೋದು ಸರಿಯಲ್ಲ. ವಿಧಾನಸೌಧದ ಬಳಿ ಆರ್‌ಸಿಬಿ ಫ್ಯಾನ್ಸ್‌ಗಳಿಗೆ ಸಂಭ್ರಮಾಚರಣೆ ನೋಡಲು ಅವಕಾಶ ಕೊಡಲಿಲ್ಲ.ವಿಧಾನಸೌಧದ ಬಳಿ ಸಿಎಂ, ಡಿಸಿಎಂ, ಸಚಿವರ ಕುಟುಂಬಸ್ಥರೆ ನೆರೆದಿದ್ದರು ಎಂದಿದ್ದಾರೆ.











