• Home
  • About Us
  • ಕರ್ನಾಟಕ
Friday, August 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇದೀಗ

ಚಂದ್ರನ ಮೇಲೆ ಮತ್ತೆ ಬೆಳಗಾಯಿತು; ನಿದ್ರೆಯಿಂದ ಏಳುವುದೇ ಲ್ಯಾಂಡರ್‌, ರೋವರ್?‌

Any Mind by Any Mind
September 21, 2023
in ಇದೀಗ, ದೇಶ
0
ಚಂದ್ರನ ಮೇಲೆ  ಮತ್ತೆ ಬೆಳಗಾಯಿತು; ನಿದ್ರೆಯಿಂದ ಏಳುವುದೇ ಲ್ಯಾಂಡರ್‌, ರೋವರ್?‌
Share on WhatsAppShare on FacebookShare on Telegram

ಹೊಸದಿಲ್ಲಿ: ಚಂದ್ರನ ಮೇಲೆ ರಾತ್ರಿ (moon night) ಮುಗಿದು (ಭೂಮಿಯ ಹದಿನಾಲ್ಕು ದಿನ, ಚಂದ್ರನ ಒಂದು ದಿನಕ್ಕೆ ಸಮ) ಬುಧವಾರ ಮುಂಜಾನೆಯಾಗಿದೆ. ಸೂರ್ಯನ ಬೆಳಕಿನ ಅನುಪಸ್ಥಿತಿಯಲ್ಲಿ ಕಾರ್ಯಾಚರಣೆ ನಿಲ್ಲಿಸಿದ್ದ ಇಸ್ರೋದ (ISRO) ಚಂದ್ರಯಾನ- 3 (Chandrayaan 3) ಮಿಷನ್‌ನ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್‌ಗಳು ಮತ್ತೆ ಕಾರ್ಯಾರಂಭಿಸಲಿವೆಯೇ ಎಂಬ ಕುತೂಹಲ ಎದುರಾಗಿದೆ.

ADVERTISEMENT

ಚಂದ್ರನ ಮೇಲೆ ಈಗ ಅತ್ಯಂತ ಶೀತ ವಾತಾವರಣವಿದ್ದು, ಇವುಗಳನ್ನು ನಿದ್ರೆಯಿಂದ ಎಚ್ಚರಗೊಳಿಸಲು ಇಸ್ರೋ ಪ್ರಯತ್ನಿಸುತ್ತಿವೆ. ಗುರುವಾರ ಅಥವಾ ಶುಕ್ರವಾರ ಹೆಚ್ಚಿನ ಬಿಸಿಲು ಲಭ್ಯವಾಗಬಹುದು. ನಂತರ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್‌ಗಳಲ್ಲಿರುವ ಆನ್‌ಬೋರ್ಡ್ ಉಪಕರಣಗಳು ಸೋಲಾರ್‌ ಶಕ್ತಿಯಿಂದ ಪುನರುಜ್ಜೀವನಗೊಳ್ಳಬಹುದು ಎಂಬ ನಿರೀಕ್ಷೆಯಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲ್ಯಾಂಡರ್‌ ಹಾಗೂ ರೋವರ್‌ಗಳು ಮರಳಿ ಕೆಲಸ ಮಾಡುವ ಸ್ಥಿತಿಗೆ ಬರುವ ಸಾಧ್ಯತೆಗಳು ತುಂಬಾ ಹೆಚ್ಚೇನೂ ಇಲ್ಲ. ಆದರೆ ಹತಾಶ ಪರಿಸ್ಥಿತಿಯೂ ಇಲ್ಲ. ಲ್ಯಾಂಡರ್ ಅಥವಾ ರೋವರ್ ಮಾಡ್ಯೂಲ್ ಎಚ್ಚರಗೊಳ್ಳುವ ಸಾಧ್ಯತೆಯಿದೆ. ಆದರೆ ಮೊದಲ ʼದಿನʼದಂತೆ ಸಂಪೂರ್ಣ ಶಕ್ತಿಯಿಂದ ಕ್ರಿಯಾಶೀಲವಾಗಲು ಸಾಧ್ಯವಿಲ್ಲ ಎಂದು ಇಸ್ರೋ ಹೇಳಿದೆ.

ಸೌರಶಕ್ತಿ ಚಾಲಿತ ಚಂದ್ರಯಾನ- 3 ಮಾಡ್ಯೂಲ್‌ಗಳು ಕೇವಲ ಒಂದು ಚಂದ್ರನ ದಿನದ ಮಿಷನ್ ಜೀವನಾವಧಿಯನ್ನು ಹೊಂದಿವೆ. ಇದು ಭೂಮಿಯ ಮೇಲೆ ಸುಮಾರು 14 ದಿನಗಳಿಗೆ ಸಮ. ಚಂದ್ರಯಾನ- 3 ಬಂದಿಳಿದ ದಕ್ಷಿಣ ಧ್ರುವದ ಬಳಿ ರಾತ್ರಿಯ ತಾಪಮಾನ ಅತ್ಯಂತ ಶೀತಮಯವಾಗಿದ್ದು, -200 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗಿಳಿದಿದೆ. ಇದನ್ನು ತಡೆದುಕೊಳ್ಳಲು ಈ ಮಾಡ್ಯೂಲ್‌ಗಳಲ್ಲಿರುವ ಎಲೆಕ್ಟ್ರಾನಿಕ್‌ ಸಾಧನಗಳಿಗೆ ಸಾಧ್ಯವಿಲ್ಲ. ಚಂದ್ರನ ಮೇಲೆ ರಾತ್ರಿಯೂ ಕಾರ್ಯಾಚರಿಸುವಂತೆ ವಿನ್ಯಾಸಗೊಳಿಸಲಾಗಿರುವ ಕೆಲವು ಬಾಹ್ಯಾಕಾಶ ನೌಕೆಗಳಲ್ಲಿ ಆನ್‌ಬೋರ್ಡ್ ಸಾಧನಗಳು ಈ ತಾಪಮಾನ ತಡೆಯಲು ಸಾಧ್ಯವಾಗುವಂತಿದೆ. ಚಂದ್ರನ ಮೇಲೆ ಇಳಿಯಲು ವಿಫಲವಾದ ರಷ್ಯಾದ ಲೂನಾ -25ರಲ್ಲಿ ಅಂತಹ ವ್ಯವಸ್ಥೆಯಿತ್ತು. ಆದರೆ ಚಂದ್ರಯಾನ-3ಯ ವಿನ್ಯಾಸ ಕೇವಲ ಒಂದು ದಿನಕ್ಕೆ ಮಾತ್ರವಿತ್ತು.

ಆದರೂ, ಚಂದ್ರಯಾನ-3ರ ಮುಖ್ಯ ವೈಜ್ಞಾನಿಕ ಪ್ರಯೋಗದ ಉದ್ದೇಶಗಳು ಮುಗಿದ ನಂತರ, ಇಸ್ರೋ ಒಂದು ಚಾನ್ಸ್‌ ತೆಗೆದುಕೊಳ್ಳಲು ನಿರ್ಧರಿಸಿತು. ಲ್ಯಾಂಡರ್ ಮತ್ತು ರೋವರ್‌ನ ಜೀವಿತಾವಧಿಯನ್ನು ವಿಸ್ತರಿಸಲು ಪ್ರಯತ್ನಿಸಿತು. ಹೀಗಾಗಿ ಸೂರ್ಯಾಸ್ತಕ್ಕಿಂತ ಸ್ವಲ್ಪ ಮುಂಚಿತವಾಗಿ ಎಲ್ಲಾ ಉಪಕರಣಗಳ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿತು ಮತ್ತು ಅವುಗಳನ್ನು ಸ್ಲೀಪ್ ಮೋಡ್‌ನಲ್ಲಿ ಇರಿಸಿತು. ಆ ಹೊತ್ತಿಗೆ ಸಂಪೂರ್ಣವಾಗಿ ಚಾರ್ಜ್ ಆಗಿದ್ದ ಬ್ಯಾಟರಿಗಳು ರಾತ್ರಿಯಲ್ಲಿ ಸುಸ್ಥಿತಿಯಲ್ಲಿ ಉಳಿಯಲು ಬೇಕಾದಷ್ಟು ಶಕ್ತಿಯನ್ನು ಸಂಗ್ರಹಿಸಿದ್ದು, ಸಾಕಷ್ಟು ಬೆಚ್ಚಗಾಗಿರಲಿವೆ ಎಂದು ಆಶಿಸಲಾಗಿದೆ.

ಇಸ್ರೋದ ಈ ಪ್ರಯೋಗ ಸಫಲಗೊಂಡರೆ, ಲ್ಯಾಂಡರ್ ಮತ್ತು ರೋವರ್ ಮತ್ತೆ ಕನಿಷ್ಠ 14 ಭೂಮಿಯ ದಿನಗಳವರೆಗೆ ಕಾರ್ಯನಿರ್ವಹಿಸಲಿವೆ. ಅವು ಈಗಾಗಲೇ ಇಲ್ಲಿಗೆ ಕಳುಹಿಸಿರುವ ವೈಜ್ಞಾನಿಕ ಡೇಟಾ ಮತ್ತು ಅವಲೋಕನಗಳನ್ನು ಪುಷ್ಟೀಕರಿಸಬಹುದು. ಈಗಾಗಲೇ, ಚಂದ್ರಯಾನ-3 ಚಂದ್ರನ ಪರಿಸರಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಡೇಟಾಗಳನ್ನು ಸಂಗ್ರಹಿಸಿದೆ.

Tags: Chandrayaan 3IndiaISROPragyan RovarVikram Lander
Previous Post

ಕುಡಿಯುವ ನೀರು ಬಿಡುಗಡೆಗೆ ನಿರ್ಧಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Next Post

ಸುಪ್ರೀಂ ಕೋರ್ಟ್ ಗೆ ತುರ್ತಾಗಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಆಗ್ರಹ: ಹೆಚ್‌ ಡಿ ಕುಮಾರಸ್ವಾಮಿ

Related Posts

Top Story

ಹೊಸ ಚಿತ್ರ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾದ ನಮ್ ಋಷಿ ..

by ಪ್ರತಿಧ್ವನಿ
August 20, 2025
0

ಹಾಡಿನೊಂದಿಗೆ ಬಂದ "ಫ್ರಾಡ್ ಋಷಿ" ಈವರೆಗೂ ಮೂವತ್ತು ಕೋಟಿ ಜನರು ವೀಕ್ಷಣೆ ಮಾಡಿ,‌ ಇಂದಿಗೂ ಟ್ರೆಂಡಿಂಗ್ ನಲ್ಲಿರುವ "ಒಳಿತು ಮಾಡು ಮನುಸ. ನೀ ಇರೋದು ಮೂರು ದಿವಸ"...

Read moreDetails

K V Prabhakar: ವೃತ್ತಿಪರತೆ-ಕರ್ತವ್ಯ ನಿಷ್ಠೆ ನನ್ನನ್ನು ಕೈ ಹಿಡಿದು ನಡೆಸಿವೆ: ಕೆ.ವಿ.ಪ್ರಭಾಕರ್

August 20, 2025

DK Shivakumar: ಕಾಂಗ್ರೆಸ್ ಯೋಜನೆಗಳಿಂದ ಬಡವರ ಜೇಬಿಗೆ 1 ಲಕ್ಷ ಕೋಟಿ ಹಾಕುತ್ತಿದ್ದೇವೆ..!!

August 20, 2025
ಬೆಂಗಳೂರಿಗೆ ಬಸ್ ಗಳ ಬದಲಿಗೆ ಹಡಗುಗಳನ್ನು ಖರೀದಿಸಿ – ಬೆಂಗಳೂರು ಕಸದ ಗುಂಡಿಯಾಗಿದೆ : ಆರ್.ಅಶೋಕ್ 

ಬೆಂಗಳೂರಿಗೆ ಬಸ್ ಗಳ ಬದಲಿಗೆ ಹಡಗುಗಳನ್ನು ಖರೀದಿಸಿ – ಬೆಂಗಳೂರು ಕಸದ ಗುಂಡಿಯಾಗಿದೆ : ಆರ್.ಅಶೋಕ್ 

August 20, 2025
ಒಳಮೀಸಲಾತಿ ಜನರ ಪರವಾಗಿಲ್ಲ – ರಾಜಕೀಯ ಲಾಭವಷ್ಟೇ ಉದ್ದೇಶ : ಛಲವಾದಿ ನಾರಾಯಣಸ್ವಾಮಿ

ಒಳಮೀಸಲಾತಿ ಜನರ ಪರವಾಗಿಲ್ಲ – ರಾಜಕೀಯ ಲಾಭವಷ್ಟೇ ಉದ್ದೇಶ : ಛಲವಾದಿ ನಾರಾಯಣಸ್ವಾಮಿ

August 20, 2025
Next Post
ಸುಪ್ರೀಂ ಕೋರ್ಟ್ ಗೆ ತುರ್ತಾಗಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಆಗ್ರಹ: ಹೆಚ್‌ ಡಿ ಕುಮಾರಸ್ವಾಮಿ

ಸುಪ್ರೀಂ ಕೋರ್ಟ್ ಗೆ ತುರ್ತಾಗಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಆಗ್ರಹ: ಹೆಚ್‌ ಡಿ ಕುಮಾರಸ್ವಾಮಿ

Please login to join discussion

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
Top Story

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

by ಪ್ರತಿಧ್ವನಿ
August 21, 2025
Top Story

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

by ಪ್ರತಿಧ್ವನಿ
August 21, 2025
Top Story

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

by ಪ್ರತಿಧ್ವನಿ
August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ
Top Story

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

by ಪ್ರತಿಧ್ವನಿ
August 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

August 21, 2025

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada