ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ದಕ್ಷಿಣ ದ್ರುವ ಸೇರಿದೆ. ಲ್ಯಾಂಡರ್ನಿಂದ ಹೊರಬಂದ ರೋವರ್ ತನ್ನ ಕಾರ್ಯ ಆರಂಭಿಸಿದ್ದು ವಿಕ್ರಮ್ ಲ್ಯಾಂಡರ್ನಿಂದ ಪ್ರಗ್ಯಾನ್ ರೋವರ್ ಇಳಿಯುವ ಮೊದಲ ದೃಶ್ಯವನ್ನು ಇಸ್ರೊ ಶುಕ್ರವಾರ (ಆಗಸ್ಟ್ 25) ಹಂಚಿಕೊಂಡಿದೆ.
ವಿಕ್ರಮ್ ಲ್ಯಾಂಡರ್ನಿಂದ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಮೇಲೆ ಚಲನೆ ಆರಂಭಿಸಿದೆ ಎಂದು ಇಸ್ರೊ ಮಾಹಿತಿ ನೀಡಿತ್ತು.
ಇದೀಗ ಲ್ಯಾಂಡರ್ನಿಂದ ಪ್ರಗ್ಯಾನ್ ರೋವರ್ ಯಾವ ರೀತಿ ಹೊರಗಡೆ ಬಂದಿದೆ ಎನ್ನುವುದರ ವಿಡಿಯೊವನ್ನು ಇಸ್ರೊ ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ.
`ಚಂದ್ರಯಾನ 3 ರೋವರ್ ಲ್ಯಾಂಡರ್ನಿಂದ ಚಂದ್ರನ ಮೇಲ್ಮನಲ್ಲಿ ಹೊರಬಂದು ಹೇಗೆ ರಾಂಪ್ ಮಾಡಿತು ಎಂಬುದು ಇಲ್ಲಿದೆ’ ಎಂದು ವಿಡಿಯೊಗೆ ಕ್ಯಾಪ್ಟನ್ ನೀಡಿದೆ.
ಲ್ಯಾಂಡರ್ನಿಂದ ರೋವರ್ ಹೊರಬರುವ ದೃಶ್ಯ ಅಚ್ಚರಿ ಮೂಡಿಸುವಂತಿದೆ. ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಬಿದ್ದ ಸೂರ್ಯನ ಬೆಳಕಿನಲ್ಲಿ ಚಲಿಸಿದೆ. ಅದರ ನೆರಳು ಮೂಡಿರುವುದು ವಿಡಿಯೊದಲ್ಲಿ ಕಾಣಿಸಿದೆ.