ಬೈರುತ್:ಇಸ್ರೇಲ್ (Israel) ತನ್ನ ದೊಡ್ಡ ಶತ್ರುಗಳಲ್ಲಿ ಒಬ್ಬನಾದ ಹಸನ್ ನಸ್ರಲ್ಲಾನನ್ನು (Hassan Nasrallah) ಕೊಂದಿದೆ. ಕಳೆದ ನಾಲ್ಕು ದಶಕಗಳಿಂದ ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದ್ದ ನಸ್ರಲ್ಲಾ, ಇಸ್ರೇಲ್ ಮೇಲೆ ಹಲವಾರು ದಾಳಿಗಳನ್ನು ನಡೆಸಿದ್ದ. ಅವುಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
ಇಸ್ರೇಲಿ ಪಡೆಗಳು (Israeli Forces) ಇದೇ ಮಾರಣಾಂತಿಕ ನಸ್ರಲ್ಲಾನನ್ನು ನಿರ್ಮೂಲನೆ ಮಾಡಿವೆ. ಹಿಜ್ಬುಲ್ಲಾ (Hezbollah) ತನ್ನ ಮುಖ್ಯಸ್ಥ ನಸ್ರಲ್ಲಾ ಹತ್ಯೆಯನ್ನು ದೃಢೀಕರಿಸುವ ಹೇಳಿಕೆಯನ್ನೂ ನೀಡಿದೆ. ಹಿಜ್ಬುಲ್ಲಾ ಮುಖ್ಯಸ್ಥನನ್ನು ನಿರ್ಮೂಲನೆ ಮಾಡಲು ಇಸ್ರೇಲ್ ವಿಶೇಷ ರೀತಿಯ ಬಾಂಬ್ ಅನ್ನು ಬಳಸಿತ್ತು. ತಜ್ಞರ ಪ್ರಕಾರ, ಒಂದು ಬಾಂಬ್ನ ತೂಕ 1000 ಕೆಜಿ ಮತ್ತು ಅದು 33 ಮೀಟರ್ ಸುತ್ತಲಿನ ಎಲ್ಲಾ ಪ್ರದೇಶವನ್ನೂ ನಾಶಮಾಡುವ ಸಾಮರ್ಥ್ಯ ಹೊಂದಿದೆ.
ಕಳೆದ ಸೋಮವಾರದಿಂದ ಲೆಬನಾನ್ ರಾಜಧಾನಿ ಬೈರುತ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಇಸ್ರೇಲ್ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದೆ. ಇಸ್ರೇಲಿ ಪಡೆಗಳು ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ಜೊತೆಗೆ, ಅನೇಕ ಇತರ ಉನ್ನತ ಕಮಾಂಡರ್ಗಳು ಹೆಜ್ಬುಲ್ಲಾದ ಪ್ರಧಾನ ಕಚೇರಿಯಲ್ಲಿ ಒಟ್ಟುಗೂಡಿದ್ದರು ಎಂದು ಹೇಳಿದೆ. ಇಸ್ರೇಲ್ ಗುಪ್ತಚರ ಸಂಸ್ಥೆಗಳು ಐಡಿಎಫ್ ಹಾಗೂ ದೇಶದ ಉನ್ನತ ಕಮಾಂಡರ್ಗಳಿಗೆ ಈ ಬಗ್ಗೆ ನಿಖರ ಮಾಹಿತಿ ನೀಡಿವೆ.
ಮರುಭೂಮಿಯಂತಾದ ನಗರ ಮಾಹಿತಿ ನಂತರ, ಇಸ್ರೇಲಿ ಏರ್ ಫೋರ್ಸ್, ಯೋಜನೆಯ ಪ್ರಕಾರ ಬೈರುತ್ನಲ್ಲಿರುವ ಹೆಜ್ಬುಲ್ಲಾದ ಪ್ರಧಾನ ಕಚೇರಿಯ ಮೇಲೆ ಬಾಂಬ್ ದಾಳಿ ಪ್ರಾರಂಭಿಸಿತು. ಒಂದೇ ಕ್ಷಣದಲ್ಲಿ, ಹಿಜ್ಬುಲ್ಲಾದ ಪ್ರಧಾನ ಕಚೇರಿಯು ಶಿಲಾಖಂಡ ರಾಶಿಳಂತೆ ಕುಸಿಯಿತು. ಕಟ್ಟಡಗಳು ನಿಂತ ಸ್ಥಳ ಮರುಭೂಮಿಯಂತಾಯಿತು. ಇದರಲ್ಲಿ ನಸ್ರಲ್ಲಾ ಕೂಡ ಹತನಾಗಿದ್ದಾನೆ ಎಂದು ವರದಿಯಾಗಿದೆ.
ವಿಶೇಷ ಮತ್ತು ಅಪಾಯಕಾರಿ ಬಾಂಬ್ ತಜ್ಞರ ಪ್ರಕಾರ, ಇಸ್ರೇಲಿ ವಾಯುಪಡೆಯು ನಿಖರವಾದ ದಾಳಿಯನ್ನು ನಡೆಸಿತು. ದಾಳಿಯಲ್ಲಿ ಅತ್ಯಂತ ಅಪಾಯಕಾರಿ ಬಾಂಬ್ ಬಳಸಲಾಗಿದೆ. ಒಂದು ಬಾಂಬ್ನ ತೂಕ 1000 ಕೆ ಜಿ. ಈ ಬಾಂಬ್ 33 ಮೀಟರ್ ವ್ಯಾಪ್ತಿಯೊಳಗೆ ವಿನಾಶವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಅರ್ಥ ಬಾಂಬ್ ಸ್ಫೋಟದ ಕೇಂದ್ರದ 33 ಮೀಟರ್ ವ್ಯಾಪ್ತಿಯೊಳಗೆ ಬರುವ ಯಾವುದೇ ವ್ಯಕ್ತಿ ಬದುಕಲು ಸಾಧ್ಯವಿಲ್ಲ. ಇಸ್ರೇಲ್ ಅಂತಹ 85 ಬಾಂಬ್ಗಳನ್ನು ಒಂದರ ನಂತರ ಒಂದರಂತೆ ಹಿಜ್ಬುಲ್ಲಾದ ಪ್ರಧಾನ ಕಚೇರಿ ಮೇಲೆ ಬೀಳಿಸಿತು ಮತ್ತು ಅಲ್ಲಿದ್ದ ಒಬ್ಬ ವ್ಯಕ್ತಿಯೂ ತಪ್ಪಿಸಿಕೊಳ್ಳದಂತೆ ನೋಡಿಕೊಂಡಿತು. ಈ ರೀತಿಯಾಗಿ ವಾಯುಪಡೆಯು ಒಟ್ಟು 85,000 ಕೆಜಿ ಗನ್ ಪೌಡರ್ ಅನ್ನು ಹಿಜ್ಬುಲ್ಲಾದ ಪ್ರಧಾನ ಕಚೇರಿಯ ಮೇಲೆ ಬೀಳಿಸಿತು.