ಬೆಂಗಳೂರು ಪ್ರೆಸ್ ಕ್ಲಬ್‌ನ ಎಲ್ಲಾ ಸದಸ್ಯರಿಗೆ ಇಸ್ಕಾನ್ ಉಚಿತ ಊಟವನ್ನು ನೀಡುವುದಾಗಿ ಹೇಳಿದ್ದು, ಈ ಕುರಿತು ಬೆಂಗಳೂರು ಪ್ರೆಸ್ ಕ್ಲಬ್ ಹರ್ಷ ವ್ಯಕ್ತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ್, ಇದು ಬೆಂಗಳೂರು ಪ್ರೆಸ್ ಕ್ಲಬ್. ಇಸ್ಕಾನ್ ಇಂದಿನಿಂದ ಸದಸ್ಯರಿಗೆ ಉಚಿತ ಊಟವನ್ನು ನೀಡುತ್ತಿರುವುದಕ್ಕೆ ಪ್ರೆಸ್ ಕ್ಲಬ್ ಹರ್ಷ ವ್ಯಕ್ತಪಡಿಸಿದೆ. ಇದು ಪತ್ರಕರ್ತರ ಬಡತನವೊ ಅಥವಾ ಪತ್ರಿಕೋದ್ಯಮದ ಬಡತನವೊ? ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಸದಸ್ಯರಿಗೆ ಇಸ್ಕಾನ್ ಉಚಿತ ಊಟವನ್ನು ನೀಡುತ್ತಿರುವ ಕುರಿತು ಪ್ರೆಸ್ ಕ್ಲಬ್ ಮೆಸೇಜ್ ಮಾಡಿದ್ದು ಅದನ್ನು ಸ್ಕ್ರೀನ್ ಶಾಟ್ ತೆಗೆದು ಮೇಲಿನ ಹೇಳಿಕೆಯನ್ನು ಟ್ವೀಟ್ ಮಾಡಿದ್ದಾರೆ.
ಸದಸ್ಯರಿಗೆ ಬಂದ ಮೆಸೇಜ್ನಲ್ಲಿ, ವಿನಂತಿಯ ಮೇರೆಗೆ, ಇಸ್ಕಾನ್ ಕ್ಲಬ್ ಆವರಣದಲ್ಲಿ ಸದಸ್ಯರಿಗೆ ಉಚಿತ ಊಟವನ್ನು ನೀಡಲು ಒಪ್ಪಿಕೊಂಡಿದೆ ಎಂದು ನಿಮಗೆ ತಿಳಿಸಲು ನಾವು ಸಂತೋಷಪಡುತ್ತೇವೆ. ಇಂದಿನಿಂದ ಆರಂಭವಾಗುವ ಎಲ್ಲಾ ದಿನಗಳಲ್ಲೂ ಮಧ್ಯಾಹ್ನ 1 ಗಂಟೆಯಿಂದ ಊಟ ಲಭ್ಯವಿರುತ್ತದೆ. ಎಲ್ಲರನ್ನು ಆಹ್ವಾನಿಸಲಾಗಿದೆ ಎಂದು ಬೆಂಗಳೂರು ಪ್ರೆಸ್ ಕ್ಲಬ್ ತಿಳಿಸಿದೆ.