ಸ್ವಾತಂತ್ರ ದಿನೋತ್ಸವದಂದು ಸುಧಾರಿತ ಸ್ಪೋಕಟಗಳನ್ನು ಬಳಸಿ ವಿದ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಉಗ್ರನನ್ನು ಉತ್ತರಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಯುಪಿಯ ಅಜಂಗಢದ ಮುಬಾರಕ್ಪುರದ ನಿವಾಸಿಯಾದ ಆರೋಪಿಯು ನಿಷೇಧಿತ ಉಗ್ರ ಸಂಘಟನೆ ಐಸಿಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂದು ತಿಳಿದು ಬಂದಿದೆ.
ಬಂದಿತ ಉಗ್ರ ಅಸಾದುದೀನ್ ನೇತೃತ್ವದ ಎಐಎಂಐಎಂ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಎಂದು ತಿಳಿದು ಬಂದಿದೆ. ಬಂಧಿತನ್ನು ಸಬಾವುದೀನ್ ಅಜ್ಮಿ ಉರುಫ್ ದಿಲಾವರ್ ಖಾನ್ ಅಲಿಯಾಸ್ ಬೈರಾಮ್ ಖಾನ್ ಉರುಫ್ ಅಜರ್ ಎಂದು ಗುರುತಿಸಲಾಗಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.