ಭಾರತಕ್ಕೆ ಭಾರೀ ಪ್ರಮಾಣದಲ್ಲಿ ನಕಲಿ ನೋಟುಗಳ ಸರಬರಾಜು ಮಾಡುತ್ತಿದ್ದ ಪಾಕಿಸ್ತಾನದ ಐಎಸ್ ಐ ಏಜೆಂಟ್ ನೇಪಾಳದಲ್ಲಿ ಗುಂಡಿನ ದಾಳಿಯಲ್ಲಿ ಹತ್ಯೆಗೊಳಗಾಗಿದ್ದಾನೆ.
ಐಎಸ್ ಐ ಏಜೆಂಟ್ ಲಾಲ್ ಮೊಹಮದ್ (55) ಅಲಿಯಾಸ್ ಮೊಹಮದ್ ಧೀರಜ್ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸೆಪ್ಟೆಂಬರ್ 19ರಂದು ಹತ್ಯೆಗೊಳಗಾಗಿದ್ದಾನೆ. ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಸಿಸಿಟಿವಿ ದೃಶ್ಯಗಳು ಭಾರತದ ಮಾಧ್ಯಮಗಳಿಗೆ ಲಭ್ಯವಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ತಯಾರಿಸುತ್ತಿದ್ದ ನಕಲಿ ನೋಟುಗಳನ್ನು ನೇಪಾಳಕ್ಕೆ ರವಾನಿಸಿ, ಅಲ್ಲಿಂದ ಭಾರತಕ್ಕೆ ತಲುಪಿಸುವ ಕೆಲಸವನ್ನು ಲಾಲ್ ಮೊಹಮದ್ ಮಾಡುತ್ತಿದ್ದ.
ಲಾಲ್ ಮೊಹಮದ್ ಕೇವಲ ಐಎಸ್ ಐ ಏಜೆಂಟ್ ಮಾತ್ರ ಆಗಿರಲಿಲ್ಲ. ಬದಲಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಕೂಡ ಸಂಪರ್ಕ ಹೊಂದಿದ್ದ.