ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲವಾಗಿರುವ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಹಾದಿ ಬಹುತೇಕ ಮುಚ್ಚಿದೆ.
ಮುಂಬೈ ಇಂಡಿಯನ್ಸ್ ಸತತ ಸೋಲುಗಳಿಂದ ಕಂಗೆಟ್ಟಿದೆ. ಇಲ್ಲಿಯವರೆಗೆ ಆಡಿದ 11 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಗೆದ್ದಿರುವುದು ಕೇವಲ 3 ಮ್ಯಾಚ್ ಗಳಲ್ಲಿ ಮಾತ್ರ. 8 ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಇದೀಗ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಹೀಗಾಗಿ ಮುಂಬೈಗೆ ಇನ್ನುಳಿದಿರುವುದು ಕೇವಲ 3 ಪಂದ್ಯಗಳು ಮಾತ್ರ. ಮೂರು ಪಂದ್ಯಗಳಲ್ಲಿ ಗೆದ್ದರೂ ತಂಡದ ಒಟ್ಟು ಪಾಯಿಂಟ್ಸ್ 12 ಆಗಲಿದೆ. ಹೀಗಾದರೆ ಪ್ಲೇ ಆಫ್ ಪ್ರವೇಶ ಬಲು ಕಷ್ಟ. ಪ್ಲೇ ಆಫ್ ಗೆ ಅವಕಾಶವಿರುವುದು 0.0006% ರಷ್ಟು ಅವಕಾಶ ಮಾತ್ರ ಎನ್ನಲಾಗುತ್ತಿದೆ.
ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಅಂಕ ಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸುವ ತಂಡವು 12 ಅಂಕಗಳಲ್ಲಿ ಉಳಿದರೆ ಮಾತ್ರ ಉತ್ತಮ ನೆಟ್ ರನ್ ರೇಟ್ನೊಂದೊಗೆ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶಿಸಬಹುದು. ಆದರೆ, ಸದ್ಯದ ಪಾಯಿಂಟ್ ಪಟ್ಟಿ ನೋಡುವುದಾದರೆ ರಾಜಸ್ಥಾನ್ ರಾಯಲ್ಸ್ 16 ಅಂಕಗಳನ್ನು ಕಲೆ ಹಾಕಿದರೆ, ಕೊಲ್ಕತ್ತಾ ನೈಟ್ ರೈಡರ್ಸ್ 14 ಅಂಕಗಳನ್ನು ಪಡೆದುಕೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ತಲಾ 12 ಅಂಕ ಗಳಿಸಿವೆ. ಹೀಗಾಗಿ ಮುಂಬೈ ಪ್ಲೇ ಆಫ್ ಹಾದಿ ಬಹುತೇಕ ಅಂತ್ಯ ಎಂದೇ ಹೇಳಲಾಗುತ್ತಿದೆ. ಮುಂಬೈ ಮುಂದಿನ ಪಂದ್ಯಗಳಲ್ಲಿ ಹೈದರಾಬಾದ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ.