ಜಾತಿ ಗಣತಿ ಸ್ವೀಕಾರ ಮಾಡ್ತೇವೆ, ಸದನದಲ್ಲಿ ಮಂಡನೆ ಮಾಡ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘಟಾಘೋಷವಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಅದೇ ಜಾತಿಗಣತಿ ಮಗ್ಗುಲ ಮುಳ್ಳಾಗುವ ಲಕ್ಷಣ ಕಾಣಿಸಿದೆ. ದಲಿತ ಸಮುದಾಯಗಳು ಹಾಗು ಸಮುದಾಯದ ಸ್ವಾಮೀಜಿಗಳೂ ಕೂಡ ಸಿಎಂ ಸಿದ್ದರಾಮಯ್ಯ ಒತ್ತಾಯ ಮಾಡುತ್ತಿದ್ದಾರೆ. 2023 – 24ನೇ ಸಾಲಿನ ಕಾಯಕ ಯೋಗಿ ಶ್ರೀ ಸಿದ್ಧಾರಮೇಶ್ವರ ಪ್ರಶಸ್ತಿಯನ್ನ ಮಂಡ್ಯದ ಪಿ.ಎಸ್ ಶಾಮಣ್ಣಗೆ ಪ್ರದಾನ ಮಾಡಲಾಯ್ತು. ಸಿಎಂ ಸಿದ್ದರಾಮಯ್ಯ, ಸಚಿವರಾದ ಶಿವರಾಜ್ ತಂಗಡಗಿ, ಬೈರತಿ ಸುರೇಶ್, ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಶ್ರೀ ಇಮ್ಮಡಿ ಸಿದ್ಧಾರಮೇಶ್ವರ ಸ್ವಾಮೀಜಿ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.
ಭೋವಿ ಸಮುದಾಯಕ್ಕೆ ಒಂದು ಲೋಕಸಭಾ ಟಿಕೆಟ್ ನೀಡುವಂತೆ ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಡ ಹೇರಲಾಯ್ತು. ಸಿಎಂ ಸಿದ್ದರಾಮಯ್ಯಗೆ ವೇದಿಕೆ ಮೇಲೆ ಸಚಿವ ಶಿವರಾಜ್ ತಂಗಡಗಿ ಆಗ್ರಹ ಮಾಡಿದ್ರು. ಇನ್ನು ಇದೇ ಕಾರ್ಯಕ್ರಮದಲ್ಲಿ ಕಾಂತರಾಜು ವರದಿ ಸ್ವೀಕಾರ ಮಾಡಿ ಬಿಡುಗಡೆ ಮಾಡುವಂತೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಿಎಂ ಸಿದ್ದರಾಮಯ್ಯಗೆ ಒತ್ತಾಯ ಮಾಡಿದ್ರು. ಇದ್ರಿಂದ ಭೋವಿ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆದಷ್ಟು ಶೀಘ್ರವಾಗಿ ವರದಿ ಸ್ವೀಕಾರ ಮಾಡಿ, ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.. ಜೊತೆಗೆ ಭೋವಿ ಸಮುದಾಯದವರಿಗೆ ಈ ಬಾರಿಯ ಲೋಕಸಭಾ ಟಿಕೆಟ್ ನೀಡಲೇಬೇಕು.. ಸಮುದಾಯದ ಒಬ್ಬರನ್ನ KPSC ಮೆಂಬರ್ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಕಾಯಕಯೋಗಿ ಸಿದ್ದರಾಮೇಶ್ವರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಕಲ್ಲು ಹೊಡೆದು ದೇವಸ್ಥಾನ ಮಾಡಿ, ಶಿಲೆ ಕೆತ್ತಿ ದೇವಸ್ಥಾನದಲ್ಲಿ ಇಡೋದು ನೀವು.. ದೇವಸ್ಥಾನದ ಒಳಗೆ ನಾವಿರ್ತೀವಿ, ನೀನು ಹೊರಗೆ ನಿಲ್ಲು ಅಂತಾರೆ ಮೇಲ್ಜಾತಿಯವರು.. ಗರ್ಭಗುಡಿಗೆ ನಿಮ್ಮನ್ನ ಬಿಡುವುದಿಲ್ಲ, ಹೊರಗೆ ನಿಲ್ಲಿಸುತ್ತಾರೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ವೇಳೆ ವೇದಿಕೆ ಮೇಲಿದ್ದ ಭೋವಿ ಸಮಾಜದ ನೆಲಮಂಗಲದ ಮಾಜಿ ಬಿಜೆಪಿ ಶಾಸಕ ನಾಗರಾಜ್ ಕಾಲೆಳೆದಿರುವ ಸಿದ್ದರಾಮಯ್ಯ, ಏನಯ್ಯ ನಾಗರಾಜ್ ನಿನ್ನನ್ನ ಗರ್ಭಗುಡಿಗೆ ಬಿಡಲೇ ಇಲ್ಲಾ ಅಲ್ವಾ..? ಎಂದಿದ್ದಾರೆ. ಇದಕ್ಕೆ ಇಲ್ಲ ಎಂದು ತಲೆ ಅಲ್ಲಾಡಿಸಿದ್ದಾರೆ ನಾಗರಾಜ್. ಈ ಗೂಳಿಹಟ್ಟಿ ಆದ್ರು ಬಾಯಿ ಬಿಟ್ಟು ಮಾತನಾಡಿದ, ನೀನು ಏನು ಮಾತನಾಡೋದೇ ಇಲ್ಲ ಎಂದಿದ್ದಾರೆ ಸಿಎಂ. ಈ ಮೂಲಕ ನಾಗಪುರದ RSS ಕಚೇರಿಯಲ್ಲಿ ದಲಿತರಿಗೆ ಪ್ರವೇಶ ಇಲ್ಲ ಎಂಬುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.






