• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಅಗ್ನಿಪಥ್ ಯೋಜನೆಯು ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯಲಿರುವ ಕೊನೆಯ ಮೊಳೆ? ಭಾಗ-೨

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
August 13, 2022
in ಅಭಿಮತ
0
ಅಗ್ನಿಪಥ್ ಯೋಜನೆಯು ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯಲಿರುವ ಕೊನೆಯ ಮೊಳೆ? ಭಾಗ-೧
Share on WhatsAppShare on FacebookShare on Telegram

ಎರಡನೆಯದಾಗಿ, ೨೦೧೫-೧೬ ರಲ್ಲಿ ೭೧,೮೦೦ ಜವಾನರಿಂದ ೫೦-೫೩,೦೦ ಕ್ಕೆ ನಂತರದ ಐದು ವರ್ಷಗಳಲ್ಲಿ ಹೊಸ ನೇಮಕಾತಿಯಲ್ಲಿ ತೀಕ್ಷ್ಣವಾದ ಕಡಿತದ ಮೂಲಕ ಸೇನೆಯ ಶಸ್ತ್ರಾಸ್ತ್ರ ರಹಿತ ಬಜೆಟ್‌ನಲ್ಲಿನ ಈ ಏರಿಕೆಯನ್ನು ಈಗಾಗಲೇ ೨೦೧೬ ರಲ್ಲಿ ಪರಿಹರಿಸಿದೆ. ಆದರೆ ಪ್ರತಿ ವರ್ಷ ೬೦,೦೦೦ ಯೋಧರು ನಿವೃತ್ತರಾಗುತ್ತಲೇ ಇದ್ದಾರೆ. ಒಂದು ಶತಮಾನಕ್ಕೂ ಹೆಚ್ಚು ಕಾಲ ಬ್ರಿಟಿಷರಿಗೆ ಮತ್ತು ನಂತರ ಸ್ವತಂತ್ರ ಭಾರತಕ್ಕೆ ಸೇವೆ ಸಲ್ಲಿಸಿದ ನೇಮಕಾತಿ ವ್ಯವಸ್ಥೆಯನ್ನು ನಾಶಪಡಿಸಲು ಸರಕಾರವು ಈ ಕುಂಟು ನೆಪ ಹೇಳಿತ್ತಿದೆ. ಕಳೆದ ಆರು ವರ್ಷಗಳಿಂದ ವರ್ಷಕ್ಕೆ ಸುಮಾರು ೩೦,೦೦೦ ಸೈನಿಕರ ಸಂಖ್ಯೆಯನ್ನು ರಕ್ಷಣಾ ವ್ಯವಸ್ಥೆ ತಗ್ಗಿಸಿಕೊಳ್ಳುತ್ತಿದೆ. ಹಾಗಾದರೆ ಅಗ್ನಿಪಥ್ ಯೋಜನೆಯ ಹಿಂದೆ ಬೇರೆ ಉದ್ದೇಶವಿದೆಯೇ? ಈ ಸರ್ಕಾರವು ತನ್ನ ಯಾವುದೇ ನಿರ್ಧಾರಗಳನ್ನು ಕಾರ್ಯಗತಗೊಳಿಸುವ ಮೊದಲು ಸಾರ್ವಜನಿಕ ಪರಿಶೀಲನೆಗೆ ಎಂದಿಗೂ ತೆರೆದುಕೊಳ್ಳುವುದಿಲ್ಲವಾದ್ದರಿಂದ, ಇಲ್ಲಿ ನಾವು ವಿದ್ಯಾವಂತ ಊಹೆಗಳನ್ನು ಮಾತ್ರ ಮಾಡಬಹುದು. ಆದರೆ ಈ ಗಂಭೀರ ಸಂಗತಿಯನ್ನು ನಾವು ನಿರ್ಲಕ್ಷಿಸುವಂತಿಲ್ಲ. ಇಂದು ನಾವು ಹೊಂದಿರುವ ಸಾಂಸ್ಕೃತಿಕವಾದ ವೈವಿಧ್ಯಮಯ ಜನಾಂಗೀಯ ಸೈನ್ಯವನ್ನು ನಾಶಪಡಿಸುವುದು ಮತ್ತು ೧೮ ನೇ ಮತ್ತು ೧೯ ನೇ ಶತಮಾನಗಳಲ್ಲಿ ಯುರೋಪ್ ಸಾಂಸ್ಕೃತಿಕ-ರಾಷ್ಟ್ರೀಯವಾದದ ನೆಲೆಗಟ್ಟು ಹೊಂದಿರುವ ಏಕರೂಪದ ‘ರಾಷ್ಟ್ರೀಯ’ ಸೇನೆಯಾಗಿ ಪರಿವರ್ತಿಸುವುದು ಮೋದಿ ಸರ್ಕಾರದ ನಿಜವಾದ ಉದ್ದೇಶವಾಗಿದೆ.

ADVERTISEMENT

ಕೋಮುವಾದಿ ಪಿತೂರಿ ಸಿದ್ಧಾಂತಗಳ ಗೀಳನ್ನು ಹೊಂದಿರುವ ಮನಸ್ಸಿನ ಉತ್ಪನ್ನವಾಗಿರುವ ಮೋದಿ ಅವರು ಅಧಿಕಾರದ ಮೇಲೆ ತನ್ನ ಹಿಡಿತವನ್ನು ಬಲಪಡಿಸುವವರೆಗೆ ಮತ್ತು ಶಾಶ್ವತವಾಗಿಸುವವರೆಗೆ ಅವರು ಯಾವುದಕ್ಕೂ ರಾಜಿಯಾಗುವುದಿಲ್ಲ. ಅದನ್ನು ನೀವು ಮೋದಿ ಅವರ ಆಡಳಿತ ಶೈಲಿಯಿಂದ ಖಾತ್ರಿಪಡಿಸಿಕೊಳ್ಳಬಹುದು. ಅವರು ತಮ್ಮನ್ನು ಪ್ರಶ್ನಿಸುವ ಸರಕಾರಿ ಹಾಗು ಪೊಲೀಸ್ ಅಧಿಕಾರಿಗಳಿಗೆ ನೀಡುತ್ತಿರುವ ಅಧಿಕಾರದ ಪ್ರತಿಫಲˌ ವರ್ಗಾವಣೆˌ ಬಡ್ತಿ ನಿರಾಕರಣೆˌ ವಜಾ ಮತ್ತು ಶಿಕ್ಷೆಗಳ ವಿಧಾನವನ್ನು ನೋಡಬಹುದು ಎನ್ನುತ್ತಾರೆ ಝಾ ಅವರು. ಇಂತಹ ನೀಚ ತಂತ್ರಗಳ ಮೂಲಕ ಮೋದಿಯವರು ಮೊದಲು ಗುಜರಾತ್ ಪೊಲೀಸರ ಸ್ವಾತಂತ್ರ್ಯ ಮತ್ತು ಸಮಗ್ರತೆಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದರು. ಪ್ರಧಾನಿಯಾದ ನಂತರ ದೆಹಲಿ ಪೊಲೀಸರು, ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾರೆ. ಅವರು ಸೇನೆ ಮತ್ತು ಸಿಬಿಐನಲ್ಲಿನ ಬಡ್ತಿ ವ್ಯವಸ್ಥೆಯನ್ನು ಬದಿಗಿಟ್ಟು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅನ್ನು ನಾಗರಿಕ ಸಮಾಜದ ವಿರುದ್ಧದ ಅಸ್ತ್ರವನ್ನಾಗಿ ಪರಿವರ್ತಿಸಲು ಅದನ್ನು ತಮ್ಮ ಸರಕಾರದ ವಿರುದ್ಧ ಪ್ರತಿಭಟಿಸುವವರ ಪವಿತ್ರ ಹಕ್ಕಿನ ವಿರುದ್ಧದ ದುರ್ಬಳಕೆಗೆ ತಿದ್ದುಪಡಿ ಮಾಡಿಕೊಂಡರು ಎನ್ನುವುದು ಝಾ ಅವರ ಅಭಿಮತವಾಗಿದೆ.

ಹಾಗಾದರೆ ಮೋದಿಯವರು ಇದನ್ನು ಇಲ್ಲಿಗೆ ನಿಲ್ಲಸಬಲ್ಲರೆ? ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಭಾರತೀಯ ಸೇನೆಯನ್ನು ಅಸ್ತ್ರವನ್ನಾಗಿ ಪರಿವರ್ತಿಸಲು ಮೋದಿಯವರು ಪ್ರಯತ್ನಿಸುತ್ತಿಲ್ಲವೆ? ಒಟ್ಟಾರೆಯಾಗಿ, ಅಗ್ನಿಪಥ್ ಯೋಜನೆಯು ಭಾರತೀಯ ಸೇನೆಯನ್ನು ಬಲಪಡಿಸಲಾಗಲಿ ಅಥವಾ ಆಧುನೀಕರಿಸಲಾಗಲಿ ವಿನ್ಯಾಸಗೊಳಿಸಲಾಗಿಲ್ಲ. ಆದರೆ ಈ ಅಗ್ನಿಪಥ್ ಯೋಜನೆಯು ಖಂಡಿತವಾಗಿ ಹಿಂದುತ್ವ ಶಕ್ತಿಯು ಒಂದು ದಿನ ತನ್ನ ಭವ್ಯವಾದ ಹಿಂದೂ ರಾಷ್ಟ್ರದ ವಿನ್ಯಾಸವನ್ನು ಪೂರ್ಣಗೊಳಿಸಲು ಅಗತ್ಯವಿರುವ ಮಾರಕ ಶಕ್ತಿಯನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ ಎನ್ನುತ್ತಾರೆ ಝಾ ಅವರು. ಈ ಹಿನ್ನೆಲೆಯಲ್ಲಿ ನಾವು ಚಿಂತಿಸಬೇಕಿದೆ. ಈ ಹೊಸ ಮಾದರಿಯ ಸೈನ್ಯವು ಈಗಿನ ಸೈನ್ಯ ಮಾಡಲಾಗದ ಯಾವ ವಿಶಿಷ್ಟ ಉದ್ದೇಶವನ್ನು ಪೂರೈಸುತ್ತದೆ? ಆಗ ಮನಸ್ಸಿಗೆ ಹೊಳೆಯುವ ಒಂದೇ ಉತ್ತರವೆಂದರೆ ಕೇಂದ್ರ ಸರಕಾರವು ಒಂದುವೇಳೆ ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದರೆ ರಾಜ್ಯ ಸರ್ಕಾರಗಳ ವಿಧೇಯತೆಯನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ. ಆದರೆ ಕೆಲವು ರಾಜ್ಯ ಸರಕಾರಗಳು ಒಕ್ಕೂಟ ಸರಕಾರದ ನಿರ್ದೇಶನವನ್ನು ಪಾಲಿಸಲು ನಿರಾಕರಿಸಬಹುದು ಎನ್ನುವುದು ಮೋದಿಯ ಅಳುಕಾಗಿದೆ.

೧೯೭೫ ರಲ್ಲಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಈ ಸಮಸ್ಯೆ ಉದ್ಭವಿಸರಲಿಲ್ಲ. ಏಕೆಂದರೆ ಎಲ್ಲಾ ರಾಜ್ಯಗಳು ಆಗ ಕಾಂಗ್ರೆಸ್ ಆಳ್ವಿಕೆಯಲ್ಲಿದ್ದವು. ಆದರೆ ಇಂದಿನ ಭಾರತೀಯ ಒಕ್ಕೂಟ ವ್ಯವಸ್ಥೆಯು ಆಗಿನಕ್ಕಿಂತ ಬಹುತೇಕ ಗುರುತಿಸಲಾಗದಷ್ಟು ಭಿನ್ನವಾಗಿ ಮಾರ್ಪಾಟಾಗಿದೆ. ಪ್ರಬಲ ಪಕ್ಷದ ಪ್ರಜಾಪ್ರಭುತ್ವವು ೧೯೮೯ ರಲ್ಲಿ ಕೊನೆಗೊಂಡಿದೆ. ೧೯೭೮ ರಲ್ಲಿ ಅಂಗೀಕರಿಸಲ್ಪಟ್ಟ ಸಂವಿಧಾನದ ೪೪ ನೇ ತಿದ್ದುಪಡಿಯು ದೇಶವು ಯುದ್ಧ ಅಥವಾ ಆಂತರಿಕ ಸಶಸ್ತ್ರ ದಂಗೆಯನ್ನು ಎದುರಿಸುವ ಸನ್ನಿವೇಷವನ್ನು ಹೊರತುಪಡಿಸಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಘೋಷಣೆಯನ್ನು ವಾಸ್ತವಿಕವಾಗಿ ಅಸಾಧ್ಯವಾಗಿಸಿದೆ. ೧೯೯೪ ರ ಸುಪ್ರೀಂ ಕೋರ್ಟ್‌ನ ಬೊಮ್ಮಾಯಿ ತೀರ್ಪು ೩೫೬ ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯ ಹೇರಿಕೆಯನ್ನು ವಾಸ್ತವಿಕವಾಗಿ ಅಸಾಧ್ಯವಾಗಿಸಿದೆ ಎನ್ನುವುದು ಝಾ ಅವರ ಅಭಿಮತ. ಈ ರೀತಿಯ ಪರಿಸ್ಥಿತಿ ಮೋದಿಯವರಿಗಾಗಲಿ ಅಥವಾ ಸಂಘಕ್ಕಾಗಲಿ ಪೂರಕವಾಗಿಲ್ಲ.

ಯುರೋಪಿಯನ್ ರಾಜ್ಯದ ಮಾದರಿಯಲ್ಲಿ ಏಕೀಕೃತ ಹಿಂದೂ ರಾಷ್ಟ್ರವನ್ನು ರಚಿಸುವ ಪರಿವರ್ತಕ ಕಾರ್ಯಸೂಚಿಯೊಂದಿಗೆ ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಸಂಘ ಅಧಿಕಾರಕ್ಕೆ ಬಂದಿವೆ. ಹಾಗಾಗಿ ಅಧಿಕಾರಕ್ಕೆ ಬಂದ ಮೊದಲ ವರ್ಷದಿಂದ ಮೊದಲ್ಗೊಂಡು ಬಿಜೆಪಿಯು ಲಂಚದಿಂದ ಹಿಡಿದು ರಾಜಿ ಸಂಧಾನˌ ಕೊಡು-ತಗೊ ವ್ಯವಹಾರˌ ಪೋಲೀಸ್ ಫೈಲ್‌ಗಳನ್ನು ಹಾಗು ತನಿಖಾ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುವವರೆಗೆ ವಿರೋಧಿಗಳನ್ನು ಮಣಿಸಲು ವಿವಿಧ ತಂತ್ರಗಳನ್ನು ಆಶ್ರಯಿಸುತ್ತಿದೆ. ಕಾಂಗ್ರೆಸ್ ಮಾತ್ರವಲ್ಲದೆ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯಂತಹ ಇತರ ಬಲಿಷ್ಠ ಸರ್ಕಾರಗಳನ್ನು ಅನೈತಿಕ ಮಾರ್ಗಗಳಿಂದ ಬಿಜೆಪಿ ಉರುಳಿಸಲು ಪ್ರಯತ್ನಿಸಿ ಬಹುತೇಕ ಯಶಸ್ಸು ಕಂಡಿದೆ. ಸ್ವಾತಂತ್ರ್ಯದ ನಂತರದ ನಾಲ್ಕು ದಶಕಗಳ ಕಾಂಗ್ರೆಸ್ ಅನುಭವಿಸಿದ ರಾಷ್ಟ್ರೀಯ ಪ್ರಾಬಲ್ಯವನ್ನು ತೊಡೆದುಹಾಕುವುದು ಬಿಜೆಪಿ ಮತ್ತು ಸಂಘದ ಗುರಿಯಾಗಿದೆ. ಈ ರೀತಿಯಲ್ಲಿ ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸಲು ವಿಫಲಪಡಿಸದೆ ಹೋದರೆ ಹಿಂದೂ ರಾಷ್ಟ್ರ ಸ್ಥಾಪಿಸುವುದು ಅಸಾಧ್ಯವೆನ್ನುವ ಸಂಗತಿ ಮೋದಿ ಮತ್ತು ಸಂಘಕ್ಕೆ ತಿಳಿದಿದೆ.

ದೇಶದಲ್ಲಿ ಒಕ್ಕೂಟ ವ್ಯವಸ್ಥೆಯು ಅಸ್ಥಿತ್ವದಲ್ಲಿದ್ದರೆ ಮಿಲಿಟಲಿ ಬಲವನ್ನು ಬಳಸಿ ವಿರೋಧಿಗಳನ್ನು ಹತ್ತಿಕ್ಕುವಾಗ ಇಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಪ್ರಾದೇಶಿಕ ಪೊಲೀಸ್ ಪಡೆಗಳು ಸಹ ೨.೬ ಮಿಲಿಯನ್ ಬಲಶಾಲಿಯಾಗಿರುವುದರಿಂದ ಮಿಲಿಟರಿ ದುರ್ಬಳಕೆ ದುಸ್ತರವಾಗುವುದೆಂದು ಮೋದಿ ಮತ್ತು ಸಂಘಕ್ಕೆ ತಿಳಿದಿದೆ. ಆ ಕಾರಣದಿಂದ ಸೈನ್ಯವನ್ನು ಸಂಘಿ ಸಿದ್ಧಾಂತಕ್ಕೆ ತಕ್ಕಂತೆ ವಿನ್ಯಾಸಗೊಳಿಸುವುದು ಇವರ ಗುಪ್ತ ಕಾರ್ಯತಂತ್ರವಾಗಿದೆ ಎನ್ನುತ್ತಾರೆ ಝಾ ಅವರು. ಎಲ್ಲಾ ಮೂರು ಸಶಸ್ತ್ರ ಪಡೆಗಳು ಒಕ್ಕೂಟ ಸರಕಾರಕ್ಕೆ ನಿಷ್ಟರಾಗುವಂತೆ ಮಾಡಲಾಗುತ್ತಿದೆ. ಅಗ್ನಿಪಥ್‌ ಯೋಜನೆಯ ದೀರ್ಘಕಾಲೀನ ಉದ್ದೇಶವೆಂದರೆ ಇಂದಿನ ಸಾಂಸ್ಕೃತಿಕ ಹಾಗು ಜನಾಂಗೀಯ ವೈವಿಧ್ಯಮಯ ಭಾರತೀಯ ಸೇನೆಯನ್ನು ಸೈದ್ಧಾಂತಿಕವಾಗಿ ಏಕರೂಪದ ಮತ್ತು ಕೇಂದ್ರೀಕೃತ ಸೈನ್ಯವನ್ನಾಗಿ ಪರಿವರ್ತಿಸಿˌ ಅದು ಸರಕಾರದ ನಿರ್ಧಾರವನ್ನು ಪ್ರಶ್ನಿಸದಂತೆ ಮಾಡುವುದಾಗಿದೆ. ಈ ರೂಪಾಂತರದ ಉದ್ದೇಶ ಈಡೇರಲು ಒಂದು ದಶಕಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಹಿಂದುತ್ವವಾದಿ ಗುಂಪುಗಳು ಬಯಸಿದಷ್ಟು ಬೇಗ ಅವರ ಉದ್ದೇಶ ಪೂರ್ಣಗೊಳ್ಳುವುದಿಲ್ಲ. ಆದರೆ ಇದು ಸಂಘಕ್ಕೆ ತಕ್ಷಣದ ಲಾಭವನ್ನು ನೀಡಬಲ್ಲುದು.

ಈ ಯೋಜನೆಯ ಮೂಲಕ ಹೆಚ್ಚಿನ ಶಿಸ್ತು ಹೊಂದಿರುವ ಮತ್ತು ಶಸ್ತ್ರಾಸ್ತ್ರಗಳ ಬಗ್ಗೆ ಅಗತ್ಯ ಮಾಹಿತಿ ಪಡೆಯುವ ಯುವಕರನ್ನು ಬಿಜೆಪಿ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳಕ್ಕೆ ಬೇಕಾಗುವಂತೆ ಅತ್ಯುತ್ತಮ ಮಿಲಿಟರಿ ಕಾರ್ಯಕರ್ತರನ್ನು ತಯ್ಯಾರು ಮಾಡಬಲ್ಲುದು. ಆರ್‌ಎಸ್‌ಎಸ್ ಶಾಖೆಗಳು ಮತ್ತು ವಿದ್ಯಾಭಾರತಿ ಶಾಲೆಗಳಿಂದ ಈಗಾಗಲೇ ಅನೇಕರನ್ನು ಅಗ್ನಿವೀರರನ್ನಾಗಿ ಆಯ್ಕೆ ಮಾಡಿರಬಹುದು. ಈ ರೀತಿಯಲ್ಲಿ ಶಸ್ತ್ರಾಸ್ತ್ರಗಳ ಬಳಕೆಯಲ್ಲಿ ತರಬೇತಿ ಪಡೆದವರು ಮುಂದಿನ ದಿನಗಳಲ್ಲಿ ದೇಶದ ಪ್ರತಿ ಪಟ್ಟಣ ಮತ್ತು ಹಳ್ಳಿಯಾದ್ಯಂತ ಹರಡಿಕೊಳ್ಳುತ್ತಾರೆ. ಈ ಸಂಘಿ ಸಿದ್ಧಾಂತದ ಅಗ್ನಿವೀರರು ವಿರೋಧ ಪಕ್ಷದ ಕಾರ್ಯಕರ್ತರನ್ನು ನಾಶಮಾಡುವಲ್ಲಿ ಮತ್ತು ಭಾರತದಲ್ಲಿ ಹಿಂದುತ್ವ ಶಕ್ತಿಯ ದೀರ್ಘಾವಧಿಯ ಸುಸ್ಥಿರತೆಯನ್ನು ಸೃಷ್ಟಿಸುವಲ್ಲಿ ಸಹಾಯವಾಗಬಲ್ಲರು. ಎಲ್ಲಕ್ಕಿಂತ ಹೆಚ್ಚಾಗಿ, ಬಿಜೆಪಿ ಮತ್ತು ಸಂಘ ತಮಗೆ ಬೇಕಾಗುವ ಹಿಂದುತ್ವದ ಸೈನಿಕರನ್ನು ಈ ದೇಶದ ಮುಗ್ಧ ತೆರಿಗೆದಾರರ ವೆಚ್ಚದಲ್ಲಿ ಸೈಷ್ಟಿಸಿಕೊಳ್ಳಲಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳದೆ ಹಿಂದುತ್ವದ ನಶೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿರುವ ಭಾರತದ ಜನರು ನಮ್ಮ ಸ್ವಂತ ಪ್ರಜಾಪ್ರಭುತ್ವವನ್ನು ಕಳೆದುಕೊಂಡು ಬ್ರಾಹ್ಮಣ್ಯದ ಗುಲಾಮರಾಗಿ ಬದುಕಬೇಕಾಗಬಹುದು ಎನ್ನುವುದು ಝಾ ಅವರ ಅಂಕಣ ಬರಹದ ಒಟ್ಟಾರೆ ಅಭಿಮತವಾಗಿದೆ.

ಪ್ರೇಮ್ ಶಂಕರ್ ಝಾ ಅವರು ಸರಿಯಾದ್ದನ್ನೆ ಊಹಿಸಿದ್ದಾರೆ. ಅಧಿಕಾರ ಇಲ್ಲದೆಯೆ ಸಂಘ ಮತ್ತು ಬಿಜೆಪಿ ಕಳೆದ ೭೫ ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಹುಟ್ಟುಹಾಕಿದ ಅರಾಜಕತೆಯನ್ನು ಜ್ಞಾಪಿಸಿಕೊಂಡರೆ ಮುಂದಿನ ದಿನಗಳಲ್ಲಿ ಇವರು ಮಾಡಬಹುದಾದ ಅನಾಹುತಗಳನ್ನು ನಾವು ಸರಿಯಾಗಿಯೆ ಅಂದಾಜಿಸಬಹುದಾಗಿದೆ. ಜನತಂತ್ರ ˌ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗಳನ್ನು ನಾವು ಸಧ್ಯದಲ್ಲೆ ಕಳೆದುಕೊಳ್ಳಲಿದ್ದೇವೆ ಎನ್ನುವ ಅಪಾಯಕಾರಿ ಸಂಗತಿ ನಮಗೆ ಎಚ್ಚರಿಕೆಯ ಗಂಟೆಯಾಗಬೇಕಿದೆ.

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ನಗ್ನ ಚಿತ್ರ ವಿವಾದ; ನಟ ರಣವೀರ್‌ಗೆ ಸಮನ್ಸ್ ಜಾರಿ

Next Post

ಸ್ಟೀಲ್ ಬ್ರಿಡ್ಜ್ ಕಾಮಾಗರಿ ಮತ್ತಷ್ಟು ವಿಳಂಬ : ಸ್ವಾತಂತ್ರ್ಯ ದಿನದಂದು ಉದ್ಘಾಟನೆಯಾಗಲ್ಲ ಚೊಚ್ಚಲ ಉಕ್ಕಿನ ಸೇತುವೆ

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ಸ್ಟೀಲ್ ಬ್ರಿಡ್ಜ್ ಕಾಮಾಗರಿ ಮತ್ತಷ್ಟು ವಿಳಂಬ : ಸ್ವಾತಂತ್ರ್ಯ ದಿನದಂದು ಉದ್ಘಾಟನೆಯಾಗಲ್ಲ ಚೊಚ್ಚಲ ಉಕ್ಕಿನ ಸೇತುವೆ

ಸ್ಟೀಲ್ ಬ್ರಿಡ್ಜ್ ಕಾಮಾಗರಿ ಮತ್ತಷ್ಟು ವಿಳಂಬ : ಸ್ವಾತಂತ್ರ್ಯ ದಿನದಂದು ಉದ್ಘಾಟನೆಯಾಗಲ್ಲ ಚೊಚ್ಚಲ ಉಕ್ಕಿನ ಸೇತುವೆ

Please login to join discussion

Recent News

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!
Top Story

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

by ಪ್ರತಿಧ್ವನಿ
December 14, 2025
“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

December 14, 2025
“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada