ಈ ದುನಿಯಾದಲ್ಲಿ ಎಲ್ಲಾನೂ ಕಾಸ್ಟ್ಲಿನೇ, ಯಾವುದು ಫ್ರೀ ಸಿಗೋದಿಲ್ಲ . ಒಂದ್ವೇಳೆ ಫ್ರೀ ಸಿಕ್ರೆ ಜನ ಅದನ್ನ ಯಾವುದೇ ಕಾರಣಕ್ಕೂ ಬಿಡೋದಿಲ್ಲ. ಈಗ ಫೋನ್ ಪೇ ಗೂಗಲ್ ಪೇ ವಿಚಾರದಲ್ಲೂ ಇದೇ ಆಗಿರೋದು ಅನ್ನಿಸುತ್ತದೆ. ಇಷ್ಟೂ ದಿನ ಇದನ್ನ ಉಚಿತವಾಗಿ ಪ್ರತಿಯೊಬ್ಬರೂ ಬಳಸಿಕೊಳ್ತಿದ್ವಿ. ಆದ್ರೆ ಇನ್ಮುಂದೆ ಈ ವ್ಯವಸ್ಥೆ ಬಳಕೆ ಮಾಡೋದಕ್ಕೂ ಹಣ ಪಾವತಿ ಮಾಡಬೇಕಾ ? ಎಂಬ ಪ್ರಶ್ನೆ ಮೂಡಿದೆ.
ಈ ಆ್ಯಪ್ಗಳು ಯಾಕೆ ಅಷ್ಟು ಬೇಗ ಜನರಿಗೆ ಪ್ರಿಯವಾದವು ಅಂದ್ರೆ, ಮೊದಲನೆಯದಾಗಿ ಬಳಸಲು ಇದು ತುಂಬಾ ಸುಲಭ ಮತ್ತೊಂದು ಇದಕ್ಕೆ ಶುಲ್ಕ ಇಲ್ಲ ಎಂಬ ಕಾರಣಕ್ಕೆ. ಆದ್ರೆ ಸಂಸ್ಥೆಯೊಂದು ಇಂಥಹ ಆ್ಯಪ್ಗಳನ್ನ ನಮಗಾಗಿ ಡೆವಲಪ್ ಮಾಡುತ್ವೆ. ನಾವು ಅದನ್ನ ಬಳಕೆ ಮಾಡೋದ್ರ ಮೂಲಕ ಉಪಯೋಗ ಪಡೆದುಕೊಳ್ತೀವಿ. ಆದ್ರೆ ಇದಕ್ಕೆ ನಾವು ಯಾವುದೇ ಶುಲ್ಕ ಪಾವತಿ ಮಾಡಲ್ಲ. ಆದ್ರೆ ಆ್ಯಪ್ ನ ನಿರ್ವಹಿಸೋಕೆ ಕಂಪೆನಿಗಳಿಗೆ ಸಾಕಷ್ಟು ಖರ್ಚು ವೆಚ್ಚಗಳಿರುತ್ತವೆ. ಈ ಹಣ ಕಂಪೆನಿಗಳಿಗೆ ಎಲ್ಲಿಂದ ಬರಲು ಸಾಧ್ಯ ? ಹೀಗಾಗಿ ಇನ್ಮುಂದೆ ಪ್ರತಿ ಟ್ರಾನ್ಸಾಕ್ಷನ್ಗೂ ಇಂತಿಷ್ಟು ಎಂದು ಚಾರ್ಜ್ ಮಾಡಲು ಅವಕಾಶ ಮಾಡಿಕೊಡಿ ಎಂದು ಈ ಕಂಪೆನಿಗಳು ಸರ್ಕಾರಕ್ಕೆ ಮನವಿ ಮಾಡಿವೆ.
ಆದ್ರೆ ಕೇಂದ್ರ ಸರ್ಕಾರ ಇದಕ್ಕೆ ಇನ್ನೂ ಸಕಾರಾಥ್ಮಕವಾಗಿ ಸ್ಪಂದಿಸಿಲ್ಲ. ಗ್ರಾಹಕರ ಹಿತದೃಷ್ಟಿಯಿಂದ ಇದು ಸಾಧ್ಯವಿಲ್ಲ ಎಂದು ಹೇಳಿದ್ರೂ , ಕಂಪೆನಿಗಳ ಪರಿಸ್ಥಿತಿಯನ್ನೂ ಅವಲೋಕಿಸಬೇಕಿದೆ. ಹೀಗಾಗಿ ಸದ್ಯಕ್ಕೆ ನಾವು ಈ ಎಲ್ಲಾ ಸೇವೆಗಳನ್ನ ಉಚಿತವಾಗಿ ಬಳಸ್ತಿದ್ರೂ ಕೂಡ ಇನ್ಮುಂದೆ ಇದಕ್ಕೂ ಪಾವತಿ ಮಾಡಬೇಕಾಗಿ ಬಂದ್ರೂ ಅಚ್ಚರಿಯಿಲ್ಲ ಅನ್ಸತ್ತೆ.