ದೇಶದಲ್ಲಿ ಉನ್ನತ ಹುದ್ದೆಗೆ ಗುಡ್ ಬೈ ಹೇಳಿ ರಾಜಕೀಯ ಜೀವನಕ್ಕೆ ಕಾಲಿಡುತ್ತಿರುವ ಐಪಿಎಸ್ ಐಎಎಸ್ ಅಧಿಕಾರ ಸಂಖ್ಯೆ ಹೆಚ್ಚುತ್ತಲೇ ಇದೆ ಎನ್ನಬಹುದು. ಅದಕ್ಕೆ ತಾಜ ಉದಾಹರಣೆಗೆ ಎಂದರೆ, ಕರ್ನಾಟಕ ಕೇಡಾರ್ ಐಪಿಎಸ್ ಅಧಿಕಾರಿ ಅಣ್ಣ ಮಲೈ ರಾಜಿನಾಮೆ ನೀಡಿ ರಾಜಕೀಯ ಜೀವನಕ್ಕೆ ಕಾಲಿಡುವುದಾಗಿ ಹೇಳಿದ್ದರು. ಕೆಲ ದಿನಗಳ ನಂತರ ಅವರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ಅರವಕುರಿಚಿಯಿಂದ ಸ್ಪರ್ಧಿಸಿ ಸೋತಿದ್ದರು. ಸೋತ ನಂತರ ಅವರನ್ನು ತಮಿಳುನಾಡಿನ ರಾಜ್ಯಾಧ್ಯಕ್ಷರನ್ನಗಿ ಮಾಡಿದ್ದಾರೆ.
ಈಗ ಅಣ್ಣ ಮಲೈ ದಾರಿಯಲ್ಲೆ ಮತ್ತೊರ್ವ ಐಪಿಎಸ್ ಅಧಿಕಾರಿ ಇದ್ದು ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಡಿ ಮಾಡಿದ್ದಾರೆ ಎನ್ನಲಾಗಿದೆ. ಯಾರು ಈ ಅಧಿಕಾರಿ ಅಂತಿರ ಗದಗ ಮೂಲದ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್. ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಡಿಯಾದ ರವಿ ಚನ್ನಣ್ಣನವರ್, ಇವರು ಈಗ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಚರ್ಚೆ ಮುನ್ನಲೆಗೆ ಬಂದಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಬಿಎಲ್. ಸಂತೋಷ್ ಅವರನ್ನು ಕಳೆದ ಮಂಗಳವಾರ ದೆಹಲಿಯಲ್ಲಿ ರವಿ ಡಿ ಚನ್ನಣ್ಣನವರ್ ಭೇಟಿಯಾಗಿ ಪಕ್ಷ ಸೇರುವ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ವಿಶೇಷವೇನೆಂದ ಈ ವೇಳಗೆ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡಲು ಅವರು ಕೂಡ ದೆಹಲಿಯಲ್ಲಿದ್ದರು. ಈ ವೇಳೆಯೇ ರವಿ ಚನ್ನಣ್ಣನವರ್ ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಸ್ .ಮಹೇಶ್ ಕೂಡ ಪಕ್ಷಕ್ಕೆ ಸೇರುವ ಮುನ್ನ ದೆಹಲಿಯಲ್ಲಿ ಬಿಎಲ್. ಸಂತೋಷ್ ಅವರನ್ನು ಭೇಟಿಯಾಗಿದ್ದರು. ತದನಂತರ ಅವರು ಬಿಜೆಪಿಗೆ ಸೇರುವುದಾಗಿ ಘೋಷಿಸಿಕೊಂಡದ್ದು ಗಮನಿಸಿದರೆ ಇಲ್ಲಿ ದೊಡ್ಡ ರಾಜಕೀಯ ಬೆಳೆವಣಿಗೆ ಗರಿಗೆದರಿದಂತೆ ಕಾಣಿಸುತ್ತಿದೆ.

ಈಗಾಗಲೇ ಸರ್ಕಾರಿ ಪರೀಕ್ಷೆ ಕುರಿತು ಅನೇಕ ಮಾಹಿತಿಯನ್ನು ಯುವಜನರಿಗೆ ಬೇರೆ ಬೇರೆ ವೇದಿಕೆಯಲ್ಲಿ ಇನ್ಸ್ಪೈರ್ ಆಗುವಂತಹ ಮಾತುಗಳನ್ನಾಡಿ ರವಿ ಚನ್ನಣ್ಣನವರ್ ಜನಮನ್ಮಣೆ ಗಿಟ್ಟಿಸಿಕೊಂಡಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ಅವರು ಮಾತಾಡಿದ ಅನೇಕ ವಿಡಿಯೋ, ವೈರಲ್ ಆಗಿವೇ. ಮತ್ತು ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ಸಕ್ರಯರಾಗಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಹಳೆ ಮೈಸೂರಿನ ಭಾಗದಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ ಎನ್ನಲಾಗಿದ್ದು, ತನ್ನ ವರ್ಚಸ್ಸನ್ನೆ ಬಳಸಿಕೊಂಡು ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.
ಇತ್ತೀಚೆಗೆ ಒಂದಷ್ಟು ಮಠಗಳ ಸ್ವಾಮಿಜಿಗಳನ್ನು ಭೇಟಿಯಾಗಿದ್ದು ತದನಂತರ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದಾರೆ. ರವಿ ಡಿ ಚನ್ನಣ್ಣನವರ ಅವರ ಈ ನಡೆ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಚರ್ಚೆಗೆ ಈಗ ಎಡೆಮಾಡಿಕೊಟ್ಟಿದೆ.


