
ಐಪಿಎಲ್ 2025 ಗಾಗಿ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ಅಕ್ಷರ್ ಪಟೇಲ್ ಗೆ ನೀಡಲಾಗಿದೆ. ಇದನ್ನು ಕ್ರಿಕೆಟಿಗ ದಿನೇಶ್ ಕಾರ್ತಿಕ್ ಘೋಷಿಸಿದ್ದು, ಅಕ್ಷರ್ ಅವರ ನಾಯಕತ್ವ ಕೌಶಲ್ಯ ಮತ್ತು ತಂಡವನ್ನು ಪರಿಣಾಮಕಾರಿಯಾಗಿ ಮುನ್ನಡೆಸುವ ಸಾಮರ್ಥ್ಯವನ್ನು ಪ್ರಶಂಸಿಸಿದ್ದಾರೆ.ಇದೀಗ ಆರನೆಯ ಸೀಸನ್ ದೆಹಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಅಕ್ಷರ್, ಪ್ರಮುಖ ಆಲ್‌ರೌಂಡರ್ ಆಗಿ ತಂಡಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ರಿಷಭ್ ಪಂತ್ ಅನುಪ ಸ್ಥಿತಿಯಲ್ಲಿದ್ದಾಗ ಅವರು ಕೆಲ ಪಂದ್ಯಗಳಿಗೆ ನಾಯಕತ್ವ ವಹಿಸಿದ್ದ ಅನುಭವವಿದೆ.

ಆದರೆ ಈ ನೇಮಕ ಅಚ್ಚರಿ ತಂದಿದ್ದು, ಕೇಎಲ್ ರಾಹುಲ್ ನಾಯಕರಾಗುವ ನಿರೀಕ್ಷೆ ಇತ್ತು. ತಂಡದ ವ್ಯವಸ್ಥಾಪಕರು ಅನುಭವ ಮತ್ತು ನಾಯಕತ್ವ ಗುಣಗಳ ಆಧಾರದ ಮೇಲೆ ಅಕ್ಷರ್ ಪಟೇಲ್ ನೆಯ ನೇಮಕ ಮಾಡಿದ್ದಾರೆ. ರೂ.14 ಕೋಟಿ ಮೌಲ್ಯಕ್ಕೆ ದೆಹಲಿ ಕ್ಯಾಪಿಟಲ್ಸ್ ರಾಹುಲ್ ಅವರನ್ನು ಖರೀದಿಸಿದರೂ, ಅವರು ಈಗ ತಮ್ಮ ಬ್ಯಾಟಿಂಗ್ ಮೇಲೆ ಗಮನ ಕೇಂದ್ರಿಕರಿಸಿ, ಅಕ್ಷರ್ ಗೆ ಬೆಂಬಲ ನೀಡಲಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಸಹ ಅಕ್ಷರ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ ಕ್ರಮವನ್ನು ಬೆಂಬಲಿಸಿ, ಅವರ ಒತ್ತಡ ನಿರ್ವಹಣಾ ಸಾಮರ್ಥ್ಯ ಮತ್ತು ನಾಯಕತ್ವವನ್ನು ಪ್ರಶಂಸಿಸಿದ್ದಾರೆ. ಅಕ್ಷರ್ ನೇತೃತ್ವದಲ್ಲಿ, ದೆಹಲಿ ಕ್ಯಾಪಿಟಲ್ಸ್ ಐಪಿಎಲ್ 2025 ರಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.