ಆಸ್ಕರ್ ಪ್ರಶಸ್ತಿ ಖ್ಯಾತಿಯ ದಿ ಎಲಿಫಂಟ್ ವಿಸ್ಪರಸ್ ಚಿತ್ರದ ನಿರ್ಮಾಪಕಿ ಹಾಗೂ ಆನೆಯ ಪೋಷಕರಿಗೆ ಎಂ.ಎಸ್ ಧೋನಿ ವಿಶೇಷ ಗೌರವ ನೀಡಿದ್ದಾರೆ. ಮಂಗಳವಾರ ಚೆಪಾಕ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಬೊಮ್ಮನ್ ಹಾಗೂ ಬೆಳ್ಳಿ ದಂಪತಿ ಮತ್ತುನಿರ್ಮಾಪಕಿ ಕಾರ್ತಿಕಿ ಗೊನ್ಸಾಲ್ವಿನ್ಗೆ ಎಂಎಸ್ ಧೋನಿ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಚೆಪಾಕ್ ಸ್ಟೇಡಿಎಂನಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ವತಿಯಿಂದ ಈ ತಂಡಕ್ಕೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮೂವರಿಗೆ ಸಿಎಸ್‌ಕೆ ತಂಡದ ಜೆರ್ಸಿಯನ್ನು ಎಂಎಸ್ ಧೋನಿ ಉಡುಗೊರೆಯಾಗಿ ನೀಡಿದ್ದಾರೆ.
ಈ ಮೂವರಿಗೆ ಎಂಎಸ್ ಧೋನಿ 7ನೇ ನಂಬರ್ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಜೊತೆಯಲ್ಲಿ ಹುಲಿ ಸಂರಕ್ಷಣಾ ಪ್ರತಿಷ್ಠಾನಕ್ಕೆ ದೇಣಿಗೆ ನೀಡಿದ್ದಾರೆ.