
IPL ಸೀಸನ್ -17 ಕೊನೆ ಹಂತ ತಲುಪಿದೆ. ಆರ್ಸಿಬಿ(RCB) ಮತ್ತು ಚೆನ್ನೈ(CSK) ನಡುವಣ ಪಂದ್ಯಕ್ಕೆ ಮಳೆ ಭೀತಿ ಇದ್ದರೂ ಅಭಿಮಾನಿಗಳು ಯಾವುದೇ ಚಿಂತೆ ಪಡುವ ಅಗತ್ಯವಿಲ್ಲ. ಎಷ್ಟೇ ಮಳೆಯಾದರೂ ಕೂಡ ಮಳೆ ನಿಂತ ಕೆಲವೇ ಕ್ಷಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(M Chinnaswamy Stadium) ಪಂದ್ಯವನ್ನು ಆರಂಭಗೊಳ್ಳುವಂತೆ ಮಾಡುವ ವಿಶೇಷ ಸಬ್ ಏರ್ ಸಿಸ್ಟಮ್(SubAir facility) ತಂತ್ರಜ್ಞಾನ(SubAir facility Chinnaswamy) ಈ ಮೈದಾನದಲ್ಲಿದೆ.ಸಬ್ ಏರ್ ಸಿಸ್ಟಮ್ ಅಳವಡಿಸಿಕೊಂಡ ವಿಶ್ವದ ಮೊದಲ ಕ್ರಿಕೆಟ್ ಕ್ರೀಡಾಂಗಣ ಎಂಬ ಖ್ಯಾತಿ ಚಿನ್ನಸ್ವಾಮಿ ಕ್ರೀಡಾಂಗಣದ್ದಾಗಿದೆ.

ಅಮೆರಿಕ, ಲಂಡನ್ ಮತ್ತು ಆಸ್ಟ್ರೇಲಿಯಾದ ಗಾಲ್ಫ್ ಸ್ಟೇಡಿಯಂಗಳಲ್ಲಿ ಮಾತ್ರ ಇಂತಹ ಅತ್ಯಾಧುನಿಕ ವ್ಯವಸ್ಥೆ ಇದೆ.2017ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ತಂತ್ರಜ್ಞಾನದ ಪರೀಕ್ಷಾರ್ಥ ಪ್ರದರ್ಶನದ ವೇಳೆ ಸುಮಾರು 5 ಸಾವಿರ ಲೀಟರ್ ನೀರನ್ನು ಮೈದಾನಕ್ಕೆ ಹಾಯಿಸಲಾಗಿತ್ತು. ಕೆಲವೇ ಸೆಕೆಂಡ್(32 ಸೆ.)ಗಳಲ್ಲಿ ಸಬ್ ಏರ್ ಸಿಸ್ಟಮ್‌ನ ಯಂತ್ರ ನೀರನ್ನು ಹೀರಿಕೊಂಡಿತ್ತು. ಹುಲ್ಲುಹಾಸಿನ ತಳಮಟ್ಟದಲ್ಲೂ ನೀರಿನ ಅಂಶ ಉಳಿಯದಂತೆ ಹೀರಿಕೊಂಡಿತ್ತು. ಆ ಮೂಲಕ ಎಷ್ಟೇ ಮಳೆ ಬಂದರೂ, ಮಳೆ ನಿಂತ ನಂತರ ಅತಿ ಶೀಘ್ರದಲ್ಲಿ ಮೈದಾನವನ್ನು ಪಂದ್ಯಕ್ಕೆ ಅಣಿಗೊಳಿಸಲು ತಾನು ಸಿದ್ಧ ಎಂಬುದನ್ನು ಸಬ್ ಏರ್ ಸಿಸ್ಟಮ್ ವ್ಯವಸ್ಥೆ ನಿರೂಪಿಸಿತ್ತು. ಅಂದಿನ ಪರೀಕ್ಷಾರ್ಥ ಪ್ರದರ್ಶನದ ವಿಡಿಯೊ ಈಗ ವೈರಲ್ ಆಗುತ್ತಿದೆ.ಆರ್ಸಿಬಿ ಮತ್ತು ಚೆನ್ನೈ ವಿರುದ್ಧದ ಪಂದ್ಯಕ್ಕೆ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಪ್ಲೇ ಆಫ್ ಪ್ರವೇಶಕ್ಕೆ ಆರ್ಸಿಬಿಗೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಪಂದ್ಯ ನಡೆಯಲಿದೆಯಾ ಎನ್ನುವ ಅನುಮಾನ ಮತ್ತು ಗೊಂದಲ ಆರ್ಸಿಬಿ ಅಭಿಮಾನಿಗಳಲ್ಲಿ ಮೂಡಿದೆ