• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, October 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಫರ್ಜಿ’ ವೆಬ್ ಸೀರೀಸ್ ನೋಡಿ 500 ರೂ. ನಕಲಿ ನೋಟು ದಂಧೆಗೆ ಇಳಿದ ಗ್ಯಾಂಗ್ : 6 ಜನರ ಬಂಧನ

ಪ್ರತಿಧ್ವನಿ by ಪ್ರತಿಧ್ವನಿ
October 26, 2026
in Top Story, ದೇಶ
0
Gang turns to counterfeit ₹500 note racket after watching 'Farzi' web series; 6 arrested
Share on WhatsAppShare on FacebookShare on Telegram

ನವದೆಹಲಿ :  ಜನಪ್ರಿಯ ಹಿಂದಿ ವೆಬ್ ಸೀರೀಸ್ ‘ಫರ್ಜಿ’ (Farzi)ಯಿಂದ ಪ್ರೇರಿತರಾಗಿ ಐದು ರಾಜ್ಯಗಳಲ್ಲಿ ನಕಲಿ 500 (Fake 500) ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಅಂತರರಾಜ್ಯ ಜಾಲವೊಂದನ್ನು ರಾಜಸ್ಥಾನ ಪೊಲೀಸರು ಭೇದಿಸಿದ್ದಾರೆ. ‘ಆಪರೇಷನ್ ನೋಟ್‌ಫ್ಲಿಕ್ಸ್’ ಹೆಸರಿನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ದುಂಗರ್‌ಪುರ ಪೊಲೀಸರು, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಹರಡಿಕೊಂಡಿದ್ದ ಈ ದಂಧೆಯ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಬಂಧನದ ಬೆನ್ನುಹತ್ತಿದಾಗ ಬಯಲಾಯ್ತು ಅಂತರರಾಜ್ಯ ದಂಧೆ

ಸೆಪ್ಟೆಂಬರ್ 29ರಂದು ರಾಜಸ್ಥಾನದ ದುಂಗರ್‌ಪುರ ವ್ಯಾಪ್ತಿಯ ಮಾಡಾ ಶಾಲಾ ಮೈದಾನದ ಬಳಿ ಭಾವೇಶ್ ಖತಿಕ್ ಮತ್ತು ನಯನ್ ಜೋಶಿ ಎಂಬ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಾಗ ಈ ಜಾಲದ ಮೊದಲ ಸುಳಿವು ಸಿಕ್ಕಿತ್ತು. ಇವರಿಂದ ಬರೋಬ್ಬರಿ 4,95,500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಈ ದಂಧೆಯ ಬೇರುಗಳು ಹಲವು ರಾಜ್ಯಗಳಿಗೆ ಹರಡಿರುವುದು ಬೆಳಕಿಗೆ ಬಂದಿದೆ.

Sugarcane Farmers Protest : ಕಾರ್ಖಾನೆಗಳು ಕನಿಷ್ಠ 100 ದಿನಗಳ ಕಾಲ ನಡೆಯಬೇಕು, ಆದ್ರೆ ಇಳುವರಿ ಕಡಿಮೆಯಾಗಿದೆ..

ಫರ್ಜಿ ಸೀರೀಸ್, ಯೂಟ್ಯೂಬ್ ಮತ್ತು ಫೋಟೋಶಾಪ್ ಬಳಕೆ

ದುಂಗರ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕುಮಾರ್ ನೀಡಿದ ಮಾಹಿತಿ ಪ್ರಕಾರ, ಹರಿಯಾಣದ ಅಂಬಾಲಾ ಮೂಲದ ಆನಂದ್ ರಜಪೂತ್ ಎಂಬಾತ ‘ಫರ್ಜಿ’ ವೆಬ್ ಸೀರೀಸ್ ನೋಡಿ ನಕಲಿ ನೋಟು ಮುದ್ರಿಸುವ ಯೋಜನೆ ರೂಪಿಸಿದ್ದನು. ನೋಟುಗಳ ವಿನ್ಯಾಸ ಸಿದ್ಧಪಡಿಸಲು ಫೋಟೋಶಾಪ್ ತಂತ್ರಾಂಶ ಮತ್ತು ಯೂಟ್ಯೂಬ್ ವಿಡಿಯೋಗಳ ಸಹಾಯ ಪಡೆದುಕೊಂಡಿದ್ದರು. ಪ್ರಕರಣದ ಪ್ರಮುಖ ಆರೋಪಿ ರವಿ ಕುಮಾರ್ ಪೊಲೀಸರ ಕಾರ್ಯಾಚರಣೆಯ ಸುಳಿವು ಸಿಗುತ್ತಿದ್ದಂತೆ ಪದೇ ಪದೇ ಮೊಬೈಲ್ ಸಂಖ್ಯೆ ಮತ್ತು ಸ್ಥಳ ಬದಲಾಯಿಸುತ್ತಾ ತಲೆಮರೆಸಿಕೊಂಡಿದ್ದನು. ಕೊನೆಗೆ ಪೊಲೀಸರು ದುಂಗರ್‌ಪುರದಿಂದ ಸುಮಾರು 1,300 ಕಿಲೋಮೀಟರ್ ದೂರದ ಪಂಜಾಬ್‌ನ ಲುಧಿಯಾನ ರೈಲ್ವೆ ನಿಲ್ದಾಣದಲ್ಲಿ ಆತನನ್ನು ಬಂಧಿಸಿದ್ದಾರೆ.

ಟೆಲಿಗ್ರಾಂ ಮೂಲಕ ಕಾಗದ, ಆನ್‌ಲೈನ್ ಮೂಲಕ ಡಿಜಿಟಲ್ ಫೈಲ್ ಸಂಗ್ರಹ

ನಕಲಿ ನೋಟು ಮುದ್ರಣಕ್ಕೆ ಬೇಕಾದ ಅತ್ಯಾಧುನಿಕ ಗುಣಮಟ್ಟದ ಕಾಗದವನ್ನು ಉತ್ತರ ಪ್ರದೇಶದ ಕಾನ್ಪುರ ಮೂಲದ ಮೊಹಮ್ಮದ್ ಆರಿಫ್ ಎಂಬಾತ ಒದಗಿಸುತ್ತಿದ್ದನು. ಇದಕ್ಕಾಗಿ ಆತ ಟೆಲಿಗ್ರಾಂನಲ್ಲಿ ಕಾರ್ಯಾಚರಿಸುತ್ತಿದ್ದ ‘ಅಂಕಿತ್ ಪೇಪರ್ ಸೆಲ್ಲರ್’ ಎಂಬ ಚಾನೆಲ್ ಅನ್ನು ಬಳಸಿಕೊಂಡಿದ್ದನು. ಇನ್ನೊಬ್ಬ ಆರೋಪಿ ಛತ್ತೀಸ್‌ಗಢದ ದುರ್ಗ್ ಮೂಲದ ತರುಣ್ ಮಲೇಕರ್ ಎಂಬಾತ 500 ರೂಪಾಯಿ ನೋಟಿನ ನಕಲು ತಯಾರಿಕೆಗೆ ಅಗತ್ಯವಿದ್ದ ಡಿಜಿಟಲ್ ಫೈಲ್ ಅನ್ನು ಪೂರೈಸಿದ್ದನು.

ಐದು ರಾಜ್ಯಗಳ 6 ಆರೋಪಿಗಳು ಪೊಲೀಸ್ ವಶಕ್ಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪ್ರತಾಪ್‌ಗಢದ ರವಿ ಕುಮಾರ್, ಹರಿಯಾಣದ ಆನಂದ್ ರಜಪೂತ್, ಉತ್ತರ ಪ್ರದೇಶದ ಮೊಹಮ್ಮದ್ ಆರಿಫ್, ಛತ್ತೀಸ್‌ಗಢದ ತರುಣ್ ಮಲೇಕರ್ ಹಾಗೂ ರಾಜಸ್ಥಾನದ ದುಂಗರ್‌ಪುರದ ಭಾವೇಶ್ ಖತಿಕ್ ಮತ್ತು ನಯನ್ ಜೋಶಿ ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ಇದುವರೆಗೆ ಎಷ್ಟು ಪ್ರಮಾಣದ ನಕಲಿ ಕರೆನ್ಸಿಯನ್ನು ಮಾರುಕಟ್ಟೆಗೆ ಬಿಟ್ಟಿದೆ ಮತ್ತು ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ : ನಾಡಿನ ಸುಖ-ಶಾಂತಿಗೆ ಪ್ರಾರ್ಥನೆ

Tags: 6 arrestedFarzi web series₹500 note
Previous Post

ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ : ನಾಡಿನ ಸುಖ-ಶಾಂತಿಗೆ ಪ್ರಾರ್ಥನೆ

Next Post

`ಬೆಂಕಿ ಇಲ್ಲದೇ ಹೊಗೆಯಾಡಲ್ಲ’ : ಪ್ರಧಾನಿ ಮೋದಿ ತಂದೆ ಬಗ್ಗೆ ಮಲ್ಲಿಕಾರ್ಜನ್ ಖರ್ಗೆ ಹೇಳಿಕೆಗೆ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ!

Related Posts

Significant surge in women's travel due to free bus services: Statistics from 4 states, including Karnataka, revealed
Top Story

ಉಚಿತ ಬಸ್ ನಿಂದ ಮಹಿಳೆಯರ ಪ್ರಯಾಣದಲ್ಲಿ ಭಾರೀ ಏರಿಕೆ :  ಕರ್ನಾಟಕ ಸೇರಿ 4 ರಾಜ್ಯಗಳ ಅಂಕಿಅಂಶಗಳು ಬಹಿರಂಗ

by ಪ್ರತಿಧ್ವನಿ
October 26, 2026
0

ನವದೆಹಲಿ : ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ (Free Bus) ಪ್ರಯಾಣ  ಕಲ್ಪಿಸಿರುವ ರಾಜ್ಯಗಳಲ್ಲಿ ಮಹಿಳೆಯರ ಓಡಾಟ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿಯ...

Read moreDetails
Why was Vijay asked to get married 100 times? Rashmika gives a sharp reply to trolls!

100 ಬಾರಿ ಮದುವೆಯಾಗುವಂತೆ ವಿಜಯ್‌ಗೆ ಕೇಳಿದ್ದೇಕೆ? ಟ್ರೋಲಿಗರಿಗೆ ರಶ್ಮಿಕಾ ಖಡಕ್ ಉತ್ತರ!

October 26, 2026
'There’s no smoke without fire': B.K. Hariprasad reacts to Mallikarjun Kharge’s statement regarding PM Modi’s father!

`ಬೆಂಕಿ ಇಲ್ಲದೇ ಹೊಗೆಯಾಡಲ್ಲ’ : ಪ್ರಧಾನಿ ಮೋದಿ ತಂದೆ ಬಗ್ಗೆ ಮಲ್ಲಿಕಾರ್ಜನ್ ಖರ್ಗೆ ಹೇಳಿಕೆಗೆ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ!

October 26, 2026
CM D.K. Shivakumar offers special prayers at the shrine of Savadatti Yellamma

ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ : ನಾಡಿನ ಸುಖ-ಶಾಂತಿಗೆ ಪ್ರಾರ್ಥನೆ

October 26, 2026
Government decides to file an appeal in the Supreme Court to protect reservation: DCM Dr. G. Parameshwara

ಮೀಸಲಾತಿ ರಕ್ಷಣೆಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ : ಡಿಸಿಎಂ ಡಾ. ಜಿ. ಪರಮೇಶ್ವರ್

October 26, 2026
Next Post
'There’s no smoke without fire': B.K. Hariprasad reacts to Mallikarjun Kharge’s statement regarding PM Modi’s father!

`ಬೆಂಕಿ ಇಲ್ಲದೇ ಹೊಗೆಯಾಡಲ್ಲ’ : ಪ್ರಧಾನಿ ಮೋದಿ ತಂದೆ ಬಗ್ಗೆ ಮಲ್ಲಿಕಾರ್ಜನ್ ಖರ್ಗೆ ಹೇಳಿಕೆಗೆ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada