• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಧಾರವಾಡದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರತಿಧ್ವನಿ by ಪ್ರತಿಧ್ವನಿ
July 31, 2026
in Top Story, ಸಿನಿಮಾ
0
ಧಾರವಾಡದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಇಲ್ಲಿದೆ ಸಂಪೂರ್ಣ ಮಾಹಿತಿ
Share on WhatsAppShare on FacebookShare on Telegram

ಧಾರವಾಡ: ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಆಗಸ್ಟ್ 22 ಹಾಗೂ 23ರಂದು ಧಾರವಾಡದ ಆಲೂರು ವೆಂಕಟರಾಯ ಸಭಾ ಭವನದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಚಲನಚಿತ್ರೋತ್ಸವದ ಕುರಿತು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಪದಾಧಿಕಾರಿಗಳು ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡರು.

ADVERTISEMENT
Amit Shah ವಿರುದ್ಧ ಖರ್ಗೆ ಪ್ರಶ್ನೆಗಳಿಗೆ ತಬ್ಬಿಬ್ಬಾದ BJP ಸಂಸದರು..! | Pratidhvani

ಮಂಡಳಿಯ ಅಧ್ಯಕ್ಷ ಮಂಜುನಾಥ್ ಎಲ್. ಹಗೇದಾರ ಮಾತನಾಡಿ, 2014ರಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆರಂಭಗೊಂಡಿದ್ದು, 2022ರಲ್ಲಿ ಅಂತರಾಷ್ಟ್ರೀಯ ಕಿರುಚಿತ್ರೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಇದೀಗ 2026ರಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಹಾಗೂ ಈ ಚಲನಚಿತ್ರೋತ್ಸವಕ್ಕೆ ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ, ಟೆಲಿ ಫಿಲಂ ಹಾಗೂ ವಿಡಿಯೋ ಆಲ್ಬಂ ಸಾಂಗ್ ವಿಭಾಗಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆಗಸ್ಟ್ 5ರೊಳಗೆ ತಮ್ಮ ಚಿತ್ರಗಳನ್ನು ಸಲ್ಲಿಸಬಹುದಾಗಿದೆ. ತೀರ್ಪುಗಾರರು ಪರಿಶೀಲಿಸಿ ಆಯ್ಕೆ ಮಾಡಿದ ಚಿತ್ರಗಳನ್ನು ಆಗಸ್ಟ್ 22 ಮತ್ತು 23ರಂದು ನಡೆಯುವ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ ಎಂದರು.

Paper Leak ತಡೆಯೋದು ಹೇಗೆ ಅನ್ನೋದೆ ಈ ಮಸೂದೆಯಲ್ಲಿ ಇಲ್ಲ..! | Pratidhvani

ಬಹುಮಾನಗಳ ವಿವರ ಹೀಗಿದೆ:

* ಅತ್ಯುತ್ತಮ ಚಲನಚಿತ್ರ (ಫೀಚರ್) – ₹25,000 ನಗದು ಹಾಗೂ ಪ್ರಶಸ್ತಿ
* ಅತ್ಯುತ್ತಮ ಟೆಲಿ ಫಿಲಂ – ₹20,000 ನಗದು ಹಾಗೂ ಪ್ರಶಸ್ತಿ
* ಅತ್ಯುತ್ತಮ ಕಿರುಚಿತ್ರ – ₹15,000 ನಗದು ಹಾಗೂ ಪ್ರಶಸ್ತಿ
* ಅತ್ಯುತ್ತಮ ವಿಡಿಯೋ ಸಾಂಗ್ – ₹10,000 ನಗದು ಹಾಗೂ ಪ್ರಶಸ್ತಿ

ಇದಲ್ಲದೆ, ಚಿತ್ರೋತ್ಸವದಲ್ಲಿ ಭಾಗವಹಿಸುವ ಎಲ್ಲಾ ವಿಭಾಗಗಳ ಚಿತ್ರಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ. 2020ರಿಂದ 2026ರ ಜೂನ್‌ವರೆಗೆ ಬಿಡುಗಡೆಯಾದ ಚಿತ್ರಗಳು ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಅರ್ಹವಾಗಿವೆ ಎಂದು ತಿಳಿಸಲಾಗಿದೆ.

Cauvery Water Dispute : CWRC Orders Release to Tamil Nadu Amid Mandya Protests and Mekedatu Row

ಚಲನಚಿತ್ರೋತ್ಸವದ ಮುಖ್ಯಸ್ಥ ನಾಗೇಂದ್ರ ಮಾಗಡಿ ಮಾತನಾಡಿ, ಪ್ರತಿಭಾವಂತ ಕಲಾವಿದರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಚಲನಚಿತ್ರೋತ್ಸವ ಉತ್ತಮ ವೇದಿಕೆಯಾಗಿದೆ ಎಂದರು. ವಿವಿಧ ವಿಭಾಗಗಳ ಪ್ರಥಮ ಸ್ಥಾನ ಪಡೆದ ಚಿತ್ರಗಳಿಗೆ ಮಾತ್ರ ನಗದು ಬಹುಮಾನ ನೀಡಲಾಗುತ್ತದೆ. ಉಳಿದಂತೆ ಅತ್ಯುತ್ತಮ ನಿರ್ದೇಶಕ, ನಟ, ನಟಿ, ಪೋಷಕ ನಟ-ನಟಿ, ಬಾಲನಟ-ನಟಿ, ಛಾಯಾಗ್ರಾಹಕ, ಸಂಕಲನಕಾರ, ಗೀತರಚನೆಕಾರ, ಸಂಗೀತ ನಿರ್ದೇಶಕ, ಸೌಂಡ್ ಎಂಜಿನಿಯರ್, ಸಂಭಾಷಣೆಕಾರ, ಹಿನ್ನೆಲೆ ಗಾಯಕ-ಗಾಯಕಿ, ತೀರ್ಪುಗಾರರ ವಿಶೇಷ ಪ್ರಶಸ್ತಿ, ಅತ್ಯುತ್ತಮ ಮಕ್ಕಳ ಚಿತ್ರ, ಸಾಮಾಜಿಕ ಕಳಕಳಿಯುಳ್ಳ ಚಿತ್ರ ಹಾಗೂ ಐತಿಹಾಸಿಕ ಸ್ಥಳಗಳನ್ನು ಬಿಂಬಿಸಿದ ಚಿತ್ರಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಗುವುದು. ನಗದು ಬಹುಮಾನ‌ ಮಾತ್ರ ಇರುವುದಿಲ್ಲ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಪ್ರಭು ಬಿ ಹಂಚಿನಾಳ, ಕಾರ್ಯಧ್ಯಕ್ಷರಾದ ಕಲ್ಮೇಶ ಡಿ ಹಾವೇರಿಪೇಟ್, ಪ್ರಧಾನ ಕಾರ್ಯದರ್ಶಿ ರಾಹುಲ್ ದತ್ತಪ್ರಸಾದ್, ಖಜಾಂಚಿ ಕಿರಣ್ ಸಿದ್ದಾಪುರ, ಸಂಘಟನಾ ಕಾರ್ಯದರ್ಶಿ ಪ್ರವೀಣಾ ಕುಲಕರ್ಣಿ , ಸಲಹಾ ಸಮಿತು ಡಾ.ಸುರೇಶ್ ಮುಂತಾದವರು ಉಪಸ್ಥಿತರಿದ್ದು, ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ಮಾಹಿತಿ ನೀಡಿದರು.

Cauvery Protest : ಅನಿವಾರ್ಯ ಆದ್ರೆ ಹೋರಾಟಕ್ಕೆ ಇಳಿಯುತ್ತೇವೆ ಎಂದ Sara Govind | pratidhvani

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತರು https://forms.gle/nSb1UTdHPrLviwDr5 ಮೇಲೆ ನೀಡಿರುವ ಲಿಂಕ್‌ನಲ್ಲಿ ಗೂಗಲ್ ಫಾರ್ಮ್ ಭರ್ತಿ ಮಾಡಬೇಕು. ಬಳಿಕ ಪಾವತಿ ಮಾಡಿದ ಸ್ಕ್ರೀನ್‌ಶಾಟ್ ಹಾಗೂ ಚಿತ್ರದ ಎರಡು ವಿಭಿನ್ನ ಪೋಸ್ಟರ್‌ಗಳನ್ನು 6361892782 ಸಂಖ್ಯೆಯ ವಾಟ್ಸ್‌ಆಪ್‌ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇದೇ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ.

Previous Post

ಬಾಕ್ಸ್ ಆಫೀಸಲ್ಲಿ ವಿಜಯ್ ‘ಜನ ನಾಯಗನ್’ ಅಬ್ಬರ:  250 ಕೋಟಿಗೂ ಹೆಚ್ಚು ಗಳಿಕೆ?

Next Post

ಕಾವೇರಿ ನೀರು ಹಂಚಿಕೆ ವಿವಾದ: ಸರ್ವಪಕ್ಷ ಸಭೆಯಲ್ಲಿ ದೃಢ ನಿಲುವು ಎಂದ ಬಸವರಾಜ ಬೊಮ್ಮಾಯಿ

Related Posts

ನಿಮ್ಮ ಮನೆಯ ಸುತ್ತಲಿನ ಗಾಳಿ ಎಷ್ಟು ಶುದ್ಧವಾಗಿದೆ? ಮೊಬೈಲ್‌ನಲ್ಲೇ AQI ತಿಳಿಯಲು 5 ಸುಲಭ ಮಾರ್ಗಗಳು!
Top Story

ನಿಮ್ಮ ಮನೆಯ ಸುತ್ತಲಿನ ಗಾಳಿ ಎಷ್ಟು ಶುದ್ಧವಾಗಿದೆ? ಮೊಬೈಲ್‌ನಲ್ಲೇ AQI ತಿಳಿಯಲು 5 ಸುಲಭ ಮಾರ್ಗಗಳು!

by Shivakumar
November 10, 2026
0

ನಾವು ಪ್ರತಿದಿನ ಉಸಿರಾಡುವ ಗಾಳಿ ಶುದ್ಧವಾಗಿದೆಯೇ ಅಥವಾ ಮಾಲಿನ್ಯದಿಂದ ಕೂಡಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯ. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ, ಕಚೇರಿಗೆ ತೆರಳುವಾಗ ಅಥವಾ...

Read moreDetails
Why was ₹2,000 in drought relief credited to farmers' accounts? Here is the clarification from DCM Parameshwara

ರೈತರ ಖಾತೆಗೆ ₹2,000 ಬರ ಪರಿಹಾರ ಬಂದಿದ್ದೇಕೆ? ಉಳಿದ ಹಣ ಯಾವಾಗ? ಇಲ್ಲಿದೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ!

November 10, 2026
Why do you feel nauseous when looking at your phone while traveling in a car? Here is the scientific reason

ಕಾರಿನಲ್ಲಿ ಪ್ರಯಾಣಿಸುವಾಗ ಫೋನ್ ನೋಡಿದರೆ ವಾಕರಿಕೆ ಬರುವುದು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ

November 10, 2026
War with Iran has ended: Donald Trump's significant statement

ಇರಾನ್ ಜೊತೆಗಿನ ಯುದ್ಧ ಅಂತ್ಯಗೊಂಡಿದೆ : ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ

November 10, 2026
Thick smoke blankets India and Pakistan: Scene captured by NASA satellite

ಭಾರತ-ಪಾಕಿಸ್ತಾನವನ್ನು ಆವರಿಸಿರುವ ದಟ್ಟವಾದ ಹೊಗೆ: ನಾಸಾ ಉಪಗ್ರಹದಲ್ಲಿ ದೃಶ್ಯ ಸೆರೆ

November 10, 2026
Next Post
ಕಾವೇರಿ ನೀರು ಹಂಚಿಕೆ ವಿವಾದ: ಸರ್ವಪಕ್ಷ ಸಭೆಯಲ್ಲಿ ದೃಢ ನಿಲುವು ಎಂದ ಬಸವರಾಜ ಬೊಮ್ಮಾಯಿ

ಕಾವೇರಿ ನೀರು ಹಂಚಿಕೆ ವಿವಾದ: ಸರ್ವಪಕ್ಷ ಸಭೆಯಲ್ಲಿ ದೃಢ ನಿಲುವು ಎಂದ ಬಸವರಾಜ ಬೊಮ್ಮಾಯಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada