ಎಸ್.ಸಿ ಒಳಮೀಸಲಾತಿ(SC reservation) ವಿಚಾರ ಸಂಪುಟ ಸಭೆಯಲ್ಲಿ (Cabinet meeting) ಅಂತಿಮಗೊಂಡ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi narayana swamy) ಮಾತನಾಡಿದ್ದು, ಕಾಂಗ್ರೆಸ್ ಸರ್ಕಾರದ ಒಳ ಮೀಸಲಾತಿ ವಿಚಾರದಲ್ಲಿ ತೀರ್ಮಾನ ಸಾರ್ವಜನಿಕ ಪರವಾಗಿ ಇಲ್ಲ, ಇದು ಕೇವಲ ರಾಜಕೀಯ ತೀರ್ಮಾನ ಆಗಿದೆ ಎಂದಿದ್ದಾರೆ.

ಒಳಮೀಸಲಾತಿಯಲ್ಲಿ ಈ ರತಿಯ ರಾಜಕೀಯ ತೀರ್ಮಾನ ಕೈಗೊಳ್ಳಲು ಒಂದು ವರ್ಷ ಕಾಯಬೇಕಿರಲಿಲ್ಲ, ಹಲವರನ್ನು ಬೀದಿಗಿಳಿಸಬೇಕಿರಲಿಲ್ಲ. ಇಂತಹ ತೀರ್ಮಾನವನ್ನು ಯಾವತ್ತೋ ಕೊಡಬಹುದಾಗಿತ್ತು.ಈ ರೀತಿಯ ತೀರ್ಮಾನ ಕೈಗೊಳ್ಳುವ ವೇಳೆ ಮೂರು ಗುಂಪುಗಳಾಗಿ ವಿಂಗಡಿಸಿದ್ದೀರಿ, ನಮ್ಮ ಸರ್ಕಾರ ಕೊಟ್ಟ ಮೀಸಲಾತಿಯನ್ನು ನೀವು ಲೇವಡಿ ಮಾಡಿ, ನೀವು ಗೊಂದಲ ಸೃಷ್ಟಿಸಿ ಜನರನ್ನು ಎತ್ತಿ ಕಟ್ಟಿ ವೋಟ್ ಬ್ಯಾಂಕ್ ಗೋಸ್ಕರ ಏನು ಮಾಡಬೇಕೋ ಮಾಡಿ ಲಾಭ ಪಡೆದ್ರಿ ಎಂದಿದ್ದಾರೆ.

ಈಗ ನೀವು ಅದೇ 17% ಆಧಾರದಲ್ಲಿ ನೀವು ತೀರ್ಮಾನ ಕೊಟ್ಟಿದ್ದರೆ ನಿಮ್ಮ ಇಬ್ಬಗೆಯ ನೀತಿಯನ್ನು ನಾವು ಪ್ರಶ್ನೆ ಮಾಡಬೇಕಾಗುತ್ತದೆ. ಅಪವಾದವನ್ನು ಬಿಜೆಪಿಯ ಮೇಲೆ ಹೊರಿಸಿದ್ದಕ್ಕೆ ನೀವು ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಸರ್ಕಾರವನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.