
ವಿರಾಜಪೇಟೆ: ವ್ಯಕ್ತಿ ತನ್ನ ಹಣದ ಮೋಹಕ್ಕೆ ಬಲಿಯಾಗಿ ಹಣದ ದಾಹ ತೀರಿಸಲು ನಾನಾ ರೀತಿಯಲ್ಲಿ ದಾರಿ ಕಂಡುಕೊಳ್ಳುತ್ತಾನೆ. ಅದರೇ ಅಡ್ಡ ಮಾರ್ಗದಲ್ಲಿ ಹಣ ಸಂಪಾದನೆಗೆ ಮುಂದಾದಗ ಮೂಲವೇ ವ್ಯಕ್ತಿ ಮುಳುವಾಗುತ್ತದೆ. ಅದೇ ಸತ್ಯ. ಇದಕ್ಕೆ ಸಾಕ್ಷೀಕರಿಸುವಂತೆ ಯುವಕನೊರ್ವ ಅಡ್ಡ ದಾರಿ ಹಿಡಿದು ಬರೋಬ್ಬರಿ ೧೧ ವಾಹನ ಕಳ್ಳತನ ಮಾಡಿ ಇದೀಗಾ ಜೈಲುವಾಸ ಅನುಭವಿಸಲು ಸಿದ್ದನಾಗಿರುವ ಘಟನೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಂದನೇ ಪೆರುಂಬಾಡಿ ಗ್ರಾಮದ ನಿವಾಸಿ ಎನ್ ದರ್ಶನ್ ನಾಯಕ್ ಪ್ರಾಯ ೨೬ ವರ್ಷ ಕೂಲಿ ಕಾರ್ಮಿಕ ವಾಹನ ಕಳ್ಳತನ ಮಾಡಿ ಬಂದಿತನಾದ ವ್ಯಕ್ತಿ.ಘಟನೆ ವಿವರ:ದಿನಾಂಕ ೦೭-೦೭-೨೦೨೪ ರಂದು ವಿರಾಜಪೇಟೆ ಆರ್ಜಿ ಪಂಚಾಯತಿ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಕ್ಕೆ ಯತ್ನಿಸುತಿದ್ದ ನಾಲ್ವರನ್ನು ಬಂದಿಸಿದ್ದ ಪ್ರಕರಣ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತದೆ. ಈ ವೇಳೆಯಲ್ಲಿ ದರ್ಶನ್ ಮತ್ತು ವಿರಾಜಪೇಟೆ ನಗರ ಸಾಧೀಕ್ ಪಾರಾರಿಯಾಗಿರುತ್ತಾರೆ.

ಪೊಲೀಸರು ದರ್ಶನ್ ಮತ್ತು ಸಾಧೀಕ್ ಬಂದನಕ್ಕೆ ಬಲೆ ಬೀಸುತ್ತಾರೆ. ಗಾಂಜಾ ಪ್ರಕರಣದ ವೇಳೆಯಲ್ಲಿ ನಾಲ್ಕು ದ್ವಿಚಕ್ರ ವಾಹನ ಸೇರಿದಂತೆ ಒಂದು ಮಾರೂತಿ ಒಮ್ನಿ ಕೃತ್ಯಕ್ಕೆ ಬಳಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿರುವ ವಾಹನಗಳ ದಾಖಲೆ ಶೋಧನೆ ಗೆ ಮುಂದಾಗುತ್ತಾರೆ ಪೊಲೀಸರು.. ವಶಕ್ಕೆ ಪಡೆದಿರುವ ವಾಹನಗಳಿಗೆ ಯಾವುದೇ ದಾಖಲೆ ಪತ್ರಗಳು ಇಲ್ಲದಿರುವುದು ತನಿಖೆ ವೇಳೆ ಪೊಲೀಸರಿಗೆ ತಿಳಿದು ಬರುತ್ತದೆ. ನಂತರ ತನಿಖೆ ಮುಂದುವರೆಸಲಾಗಿ ಮೂಲ ಹುಡುಕುತ್ತಾ ಸಾಗಿದ ಪೊಲೀಸರೀಗೆ ದೊರಕಿದ್ದು ಸರಣಿ ವಾಹನಗಳ ಕಳ್ಳತನದ ಗುಟ್ಟು.. ಗಾಂಜಾ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ದರ್ಶನ್ ಕತರ್ನಾಕ್ ಕಳ್ಳ ಎಂದು ಗುರುತಿಸಿಕೊಂಡಿದ್ದ ತನ್ನ ಅಪ್ತ ವಲಯದಲ್ಲಿ

ತನ್ನ ಸ್ನೇಹಿತರ ಆಸೆಗಳನ್ನು ಪರಿಪೂರ್ಣ ಮಾಡುತಿದ್ದ ಐ. ಮೀನ್ ಗುಂಡು ತುಂಡು ಬಾಡೂಟ ತಿರಿಕೆ ಶೋಕಿ ಹೀಗೆ ಹಲವು…ನೈಜ ಕೆಲಸಕ್ಕೆ ಮನ ಮುಂದಾಗದೆ…ಅಲ್ಪ ಸಮಯದಲ್ಲಿ ಹಣ ಮಾಡಿ ಐಷಾರಾಮಿ ಬದುಕು ಸಾಗಿಸುವ ಬದುಕು ಕಾಣುವ ಯುವಕರಾದ ಗಾಂಜಾ ಪ್ರಕರಣದಲ್ಲಿ ಭಾಗಿ ಎನ್ನಲಾದ ಶಮೀರ್,ಶಫೀಕ್ ಅಲಿಯಾಸ್ ಎಪ್ಪು, ಮುನೀರ್ ಸಾದೀಕ್ ಮತ್ತು ಆಸೀಂ ಮುಂತಾದವರು ಸೇರಿ ಸ್ಕೆಚ್ ಹಾಕುತ್ತಾರೆ. ಮುಂದೆ ಹುಣಸೂರು ವಲಯದ ಬಿಳಿಕೇರಿ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲುಗಡೆಗೊಳಿಸಿದ್ದ ಬಿಳಿ ಬಣ್ಣ ಮಾರೂತಿ ಓಮ್ಮಿ ವಾಹನವನ್ನು ತಮ್ಮ ಚಾಣಾಕ್ಷ ಬುದ್ದಿಯಿಂದ ಕಳ್ಳತನ ಮಾಡುತ್ತಾರೆ.ಕಳ್ಳತನ ಮಾಡಿ ವಿರಾಜಪೇಟೆ ಗೆ ತರುತ್ತಾರೆ. ತನಗೆ ಮನಗೆ ಬಂದ ವ್ಯಕ್ತಿಗೆ ಮಾರಾಟ ಮಾಡುವ ಉದ್ದೇಶವಿರುತ್ತದೆ. ದಿನಾಂಕ ೦೭-೦೭-೨೦೨೪ ರಂದು ಪೆರುಂಬಾಡಿ ಗ್ರಾಮದ ಬಸ್ಸು ತಂಗುದಾಣದ ಬಳಿ ಅನಾಮಧೇಯ ವಾಹನ ಮತ್ತು ಇತರ ವ್ಯಕ್ತಿಗಳು ಗೋಚರಿಸುತ್ತಾರೆ. ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ವಾಹನಗಳು ಮತ್ತು ಗಾಂಜಾದೊಂದಿಗೆ ಯುವಕರನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸುತ್ತಾರೆ.ಈ ವೇಳೆ ಸಾಧೀಕ್ ಮತ್ತು ದರ್ಶನ್ ಸ್ಥಳದಿಂದ ಪರಾರಿಯಾಗಿರುತ್ತಾರೆ. ಗಾಂಜಾ ಪ್ರಕರಣ ದಾಖಲಿಸಿದ ಪೊಲೀಸರು ಮುಂದೆ ಪರಾರಿಯಾಗಿರುವ ಆರೋಪಿಗಳ ಶೋಧಕ್ಕೆ ಮುಂದಾಗುತ್ತಾರೆ. ದಿನಾಂಕ ೧೪-೦೭-೨೦೨೪ ರಂದು ಪರಾರಿಯಾಗಿದ್ದ ದರ್ಶನ್ ಪೆರುಂಬಾಡಿ ಯಲ್ಲಿ ಪ್ರತ್ಯಕ್ಷನಾಗುತ್ತಾನೆ. ಮಾಹಿತಿ ತಿಳಿದ ಪೊಲೀಸರು ದರ್ಶನ್ ನನ್ನು ಬಂದಿಸುತ್ತಾರೆ. ತನಿಖೆಗೆ ಒಳಪಡಿಸಿದ ಪೊಲೀಸರು ತನಿಖೆಯ ವೇಳೆ ದರ್ಶನ್ ನ ಅಪರಾಧ ಜಗತ್ತಿನ ಕರಾಳ ದಿನಗಳ ಮಾಹಿತಿ ಬಹಿರಂಗ ಪಡಿಸುತ್ತಾನೆ. ಹುಣಸೂರು ಬಿಳಿಕೇರೆ ಬಳಿ ರಸ್ತೆ ಬದಿಯಲ್ಲಿ ನಿಲುಗಡೆಗೊಳಿಸಿದ್ದ ಮಾರೂತಿ ಒಮ್ನಿ ಕಾರನ್ನು ತನ್ನ ಸ್ನೇಹಿತರೊಂದಿಗೆ ಸೇರಿ ಕಳ್ಳತನ ಮಾಡುತ್ತಾನೆ. ಇದರೊಂದಿಗೆ ಹುಣಸೂರು, ಹಣಗೋಡು, ಬಿಳಿಕೆರೆ,ರಾಮನಾಥ ಪುರ, ಮತ್ತು ಇತರ ಸ್ಥಳಗಳಲ್ಲಿ ತನ್ನ ಕೈಚಳಕದಿಂದ ಸುಮಾರು 11 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಾನೆ. ಈತನು ಸುಮಾರು 10 ವರ್ಷಗಳ ಹಿಂದೆ ಗಣಪತಿ ದೇವಾಲಯ ದ ಕಾಣಿಕೆ ಹುಂಡಿ ಕಳ್ಳತನ ವೆಸಗಿ ಪೊಲೀಸರ ಬಂದಿಯಾಗುತ್ತಾನೆ.

ಅಂದಿನಿಂದ ಅಪರಾಧ ಲೋಕದ ವ್ಯಕ್ತಿಯಾಗುತ್ತಾನೆ. ಪೊಲೀಸ್ ಪಡೆಯು ಸರ್ವ ಮಾಹಿತಿ ಪಡೆದು ೧೧ ದ್ವೀಚಕ್ರ ವಾಹನ ಸೇರಿದಂತೆ ಒಂದು ಮಾರೂತಿ ಓಮ್ನಿ ವಾಹನ ವಶಕ್ಕೆ ಪಡೆದಿದ್ದಾರೆ. ಕಳ್ಳತನ ಮಾಡಿದ ವಾಹನಗಳನ್ನು ಅಲ್ಪ ಬೆಲೆಗೆ ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಐಷಾರಾಮಿ ಜೀವನ ಸಾಗಿಸುತಿದ್ದ. ಅದರೋಂದಿಗೆ ತನ್ನ ಅತ್ಮೀಯ ಸ್ನೇಹಿತರಿಗೆ ಗಾಂಜಾ ಮತ್ತು ಮೋಜು ಮಸ್ತಿಗಾಗಿ ಹಣ ನೀಡುತಿದ್ದ ಇ ಕಾರ್ತನಾಕ್ ಕಳ್ಳ. ಗಾಂಜಾ ಮತ್ತು ಇತರ ಪ್ರಕರಣದಲ್ಲಿ ಸಾಧೀಕ್ ವಿರಾಜಪೇಟೆ ನಗರ ವ್ಯಕ್ತಿಯು ಪರಾರಿಯಾಗಿದ್ದು ಶೋಧ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.ವಿರಾಜಪೇಟೆ ನಗರದ ಪೊಲೀಸ್ ಠಾಣೆಯಲ್ಲಿ 454,457,ಮತ್ತು380 ಐ.ಪಿ.ಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ವಿರಾಜಪೇಟೆ ಉಪ ವಿಭಾಗ ಪೊಲೀಸ್ ಅಧೀಕ್ಷಕರಾದ ಮೋಹನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನೀರಿಕ್ಷಕರಾದ ಬಿ.ಎಸ್ ಶಿವರುದ್ರ ನೇತೃತ್ವದಲ್ಲಿ ವಿರಾಜಪೇಟೆ ನಗರ ಪ್ರಬಾರ ಠಾಣಾಧಿಕಾರಿ ಶ್ರೀಮತಿ ವಾಣಿಶ್ರಿ, ಎ.ಎಸ್.ಐ . ಮಂಜು, ಸಿಬ್ಬಂದಿ ಗಳಾದ ಎಸ್.ಟಿ. ಗಿರೀಶ್, ಧರ್ಮ ಕೆ.ಎಂ. ಗ್ರಾಮಾಂತರ ಪೊಲೀಸ್ ಠಾಣೆಯ ಜೋಸ್ ನಿಶಾಂತ್, ಮೋಹನ್,ಸತೀಶ್,ಸುರೇಶ್ ಅವರುಗಳು ಆರೋಪಿಯ ಕಾರ್ಯಚರಣೆಯಲ್ಲಿ ಭಾಗಿಗಳಾದರು.