ಹೆಚ್ಚು ಜನ ಮನೆಯ ಅಕ್ಕ-ಪಕ್ಕ ಅಥವಾ ಸುತ್ತಮುತ್ತ ಗಿಡಮರಗಳನ್ನು ಬೆಳೆಸುತ್ತಾರೆ. ಆದರೆ ಸಿಟಿಗಳಲ್ಲಿ ಮನೆಯಿಂದ ಹೊರಗಡೆ ಹೆಚ್ಚು ಜಾಗವಿರುವುದಿಲ್ಲ ಎನ್ನುವ ಕಾರಣಕ್ಕೆ ಪಾಟ್ ಗಳಲ್ಲಿ ಗಿಡವನ್ನು ಬೆಳೆಸುತ್ತಾರೆ. ಅದೇ ರೀತಿ ಕೆಲವೊಂದಿಷ್ಟು ಜನ ಮನೆಯೊಳಗೂ ಕೂಡ ಪಾಟ್ ಗಳನ್ನ ಇಟ್ಟು ಸಸ್ಯಗಳನ್ನ ಬೆಳೆಸುತ್ತಾರೆ. ಆದರೆ ಹೆಚ್ಚು ಜನ ಮನೆಯಲ್ಲಿ ಪೆಟ್ಸ್ ಸಾಕಿರುತ್ತಾರೆ..ನಾಯಿ ಬೆಕ್ಕು ಸಾಕಿದ ಮನೆಯಲ್ಲಿ ಈ ಗಿಡಗಳನ್ನು ಬೆಳೆಸುದುವುದರಿಂದ ಪೆಟ್ಸ್ ಗೆ ತೊಂದರೆಯಾಗುತ್ತದೆ..ಮನೆಯಲ್ಲಿ ಯಾವ ಯಾವ ಗಿಡಗಳನ್ನ ಬೆಳೆಸುವುದರಿಂದ ತೊಂದರೆ ಅನ್ನೋದರ ಮಾಹಿತಿ ಹೀಗಿದೆ.

ಸ್ನೇಕ್ ಪ್ಲಾಂಟ್
ಅತ್ತೆಯ ನಾಲಿಗೆ , ಸ್ನೇಕ್ ಪ್ಲಾಂಟ್ ಹೀಗೆ ಒಂದಿಷ್ಟು ಹೆಸರುಗಳು ಈ ಗಿಡಕ್ಕೆ ಇದ್ದು,ಈ ಸಸ್ಯವು ಕ್ಯಾಲ್ಸಿಯಂ ಆಕ್ಸಲೇಟ್ ಎಂಬ ವಿಷಕಾರಿ ಸಂಯುಕ್ತವನ್ನು ಹೊಂದಿರುತ್ತದೆ.ಈ ವಿಷಕಾರಿ ಅಂಶ ಪ್ರಾಣಿಗಳಿಗೆ ಒಳ್ಳೆಯದಲ್ಲ.

ಪೀಸ್ ಲಿಲಿ
ನೋಡಲು ಸುಂದರವಾಗಿದ್ದರೂ, ಪೀಸ್ ಲಿಲ್ಲಿಗಳಲ್ಲಿ ಕರಗದ ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳಿವೆ, ಇದು ಸಾಕುಪ್ರಾಣಿಗಳಿಗೆ ಹಾನಿ ಮಾಡುತ್ತದೆ.

ಒಲಿಯಾಂಡರ್
ಒಲಿಯಾಂಡರ್ ಸಸ್ಯದ ಎಲ್ಲಾ ಭಾಗಗಳು ಸಾಕುಪ್ರಾಣಿಗಳು ಮತ್ತು ಮನುಷ್ಯರಿಗೆ ವಿಷಕಾರಿಯಾಗಿದ್ದು, ಹೃದಯ ಸಮಸ್ಯೆಗಳನ್ನು ಉಂಟುಮಾಡಬಹುದು.ಹಾಗಾಗಿ ತಿಳಯದೆ ಈ ಗಿಡಗಳನ್ನು ಮನೆಯಲ್ಲಿ ಬೆಳೆಸುವುದು ಉತ್ತಮವಲ್ಲ

ಸೈಕ್ಲಾಮೆನ್
ಸೈಕ್ಲಾಮೆನ್ ಸಸ್ಯಗಳ ಬೇರುಗಳು ಮತ್ತು ಎಲೆಗಳು ವಿಷಕಾರಿ ಸಂಯುಕ್ತಗಳನ್ನು ಹೊಂದಿರುತ್ತವೆ, ಇದು ವಾಂತಿ, ಅತಿಸಾರ ಮತ್ತು ಹೃದಯ ಸಮಸ್ಯೆಗಳನ್ನು ಉಂಟುಮಾಡಬಹುದು.