ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ಗೆ ಭಾರತವಲ್ಲದೇ ವಿಶ್ವದಾದ್ಯಂತ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಇದೀಗ ಅವರ ಅಭಿಮಾನಿಯೊಬ್ಬ ದೂರದ ಅಮೆರಿಕಾದಲ್ಲಿ ಪ್ರತಿಮೆ ಸ್ಥಾಪಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಭಾರತೀಯ ಮೂಲದ ಅಮೆರಿಕದಲ್ಲಿ ಟೆಕ್ಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಗೋಪಿ ಸೇಠ್ ಬರೋಬ್ಬರಿ 60ಲಕ್ಷ ರೂಪಾಯಿ ಖರ್ಚು ಮಾಡಿ ತಮ್ಮ ಮನೆಯ ಮುಂದೆ ಬಿಗ್ ಬಿ ಅಮಿತಾಭ್ ಬಚ್ಚನ್ ಪ್ರತಿಮೆಯನ್ನ ಸ್ಥಾಪಿಸುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.
ಅಮೆರಿಕಾದ ನ್ಯೂ ಜೆರ್ಸಿಯ ಈಡಿಸನ್ ನಗರದಲ್ಲಿ ವಾಸವಾಗಿರುವ ಇಂಟರ್ನೆಟ್ ಸೆಕ್ಯೂರಿಟಿ ಇಂಜಿನಿಯರ್ ಗೋಪಿ ಸೇಠ ವಿಶಿಷ್ಟ ಲೋಹಗಳಿಂ ತಯಾರು ಮಾಡಿರುವ ಅಮಿತಾಬ್ ಪ್ರತಿಮೆಯನ್ನು ತಮ್ಮ ಮನೆಯ ಮುಂದೆ ಸ್ಥಾಪಿಸಿದ್ದಾರೆ.
ಭಾನುವಾರ ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯರೆಲ್ಲರು ಸೇರಿ ಅಮಿತಾಬ್ ಪ್ರತಿಮೆಯನ್ನು ಸ್ಥಾಪಿಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಬಿಗ್ ಬಿ ಹಾಡುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

ಪ್ರತಿಮೆ ಸ್ಥಾಪನೆ ಕುರಿತು ಮಾತನಾಡಿರುವ ಗೋಪಿ ಸೇಠ್ ಅಮಿತಾಬ್ ಬಚ್ಚನ್ ನಮ್ಮ ಕುಟುಂಬದವರಿಗೆ ದೇವರ ಸಮಾನ. ನಾವು ಅವರನ್ನು ಸಿನಿಮಾದಲ್ಲಿ ನೋಡಿ ಪ್ರಭಾವಿತರಾಗಿಲ್ಲ ಅವರನ್ನು ನಿಜ ಜೀವನದಲ್ಲಿ ನೋಡಿ ಪ್ರಭಾವಿತರಾಗಿದ್ದೇವೆ ಎಂದಿದ್ದಾರೆ.
ಅವರು ಸಾರ್ವಜನಿಕರು ಹಾಗೂ ಅಭಿಮಾನಿಗಳ ಜೊತೆ ನಡೆದುಕೊಳ್ಳುವ ರೀತಿ ಮತ್ತು ಸ್ಪಂದಿಸುವ ಪರಿ ನಮ್ಮಗೆ ತುಂಬಾ ಇಷ್ಟ ಬೇರೆ ನಟರ ರೀತಿ ಇವರಲ್ಲ ಎಂದು ತಮ್ಮ ನೆಚ್ಚಿನ ನಟನನ್ನು ಹಾಡಿಹೊಗಳಿದ್ದಾರೆ.
ಮೊದಲಿಗೆ ನಾವು ಪ್ರತಿಮೆಯನ್ನು ಸ್ಥಾಪಿಸುತ್ತಿರುವ ವಿಚಾರ ಅಮಿತಾಭ್ ಅವರಿಗೆ ಗೊತ್ತಾಯ್ತು ಅವರು ಬೇಡ ಎಂದರು ನಾವು ಈ ವಿಚಾರದಲ್ಲಿ ಅವರ ಮಾತು ಕೇಳಲು ಸಾಧ್ಯವಾಗಲಿಲ್ಲ ಎಂದು ಬೇಸರಿಸಿದ್ದಾರೆ.
ಗುಜರಾತ್ನ ದಾಹೋದ್ ಮೂಲದವರಾದ ಗೋಪಿ ಸೇಠ್ 90ರ ದಶಕದಲ್ಲಿ ಅಮೆರಿಕಾಕ್ಕೆ ವಲಸೆ ಹೋಗಿದ್ದರು. ಅಮಿತಾಬ್ ಬಚ್ಚನ್ ಮೇಲಿನ ಪ್ರೀತಿಗಾಗಿ ಬಿಗ್ ಬಿ ಫ್ಯಾಮಿಲಿ ಎಂಬ ಚಾನೆಲ್ ಒಂದನ್ನು ನಡೆಸುತ್ತಿದ್ದಾರೆ.