ಟೀಮ್ ಇಂಡಿಯಾದ Star cricketer ಕರ್ನಾಟಕದ ರಣಜಿ ತಂಡದ ಕ್ಯಾಪ್ಟನ್ Mayank Agarwal ತೀವ್ರ ಅಸ್ವಸ್ಥರಾಗಿದ್ದಾರೆ. ತ್ರಿಪುರಾ ದಿಂದ ಸೂರತ್ ಗೆ ವಿಮಾನದಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಮಯಾಂಕ್ ಅಗರ್ವಾಲ್ ಧಿಡೀರ್ ಅಸ್ವಸ್ಥ ರಾದ ಕಾರಣದಿಂದ ಇತರೆ ಆಟಗಾರರು ಶಾಕ್ ಗೆ ಒಳಗಾಗಿದ್ದಾರೆ. ಮಯಾಂಕ್ ಅಗರ್ವಾಲ್ ವಿಮಾನದಲ್ಲಿದ್ದ ನೀರು ಕುಡಿದು ಬಳಿಕ ಅಸ್ವಸ್ಥರಾದ್ರು ಅನ್ನೋ ಮಾಹಿತಿ ಲಭ್ಯವಾಗಿದೆ, ಸದ್ಯ ತ್ರಿಪುರಾದ ಸ್ಥಳೀಯ ಆಸ್ಪತ್ರೆ ICU ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಯಾಂಕ್ ಅಗರ್ವಾಲ್ ಕರ್ನಾಟಕ ರಣಜಿ ತಂಡದ ಕ್ಯಾಪ್ಟನ್ ಮತ್ತು ಟಾಪ್ ಆರ್ಡರ್ ಬ್ಯಾಟ್ಸಮನ್ ಆಗಿ ಸಾಕಷ್ಟು ಯಶಸ್ಸನ್ನು ಕಂಡಿದ್ದಾರೆ. 2018 ಡಿಸೆಂಬರ್ 26ನೇ ತಾರೀಕು ಇಂಟರ್ ನ್ಯಾಷನಲ್ ಕ್ರಿಕೆಟ್ಗೆ ಟೀಂ ಇಂಡಿಯಾದ ಪರ ಪಾದಾರ್ಪಣೆ ಮಾಡಿದ್ರು. ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿ ಮಯಾಂಕ್ ಮಿಂಚಿದ್ರು.

ಈ ಬಾರಿ ಸನ್ರೈಸರ್ಸ್ ಹೈದರಾಬಾದ್ ಮಯಾಂಕ್ ಅವರನ್ನು ಖರೀದಿ ಮಾಡಿದೆ. ಐಪಿಎಲ್ ಗಾಗಿ ಮಾಯಾಂಕ್ ಸಾಕಷ್ಟು ತಯಾರಿ ಕೂಡ ನಡೆಸಿದ್ದಾರೆ. ಇದೀಗ ಧಿಡೀರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅಭಿಮಾನಿಗಳಲ್ಲಿ ನಿರಾಸೆ ಉಂಟಾಗಿದೆ.
#Mayankaagarwal #Crickter #Teamindia #Bcci #Surath