ಏಕಾಂಗಿಯಾಗಿ ಹಸಮಣೆ ಏರಿದ ರಾಜಸ್ಥಾನ್ ನ 24 ವರ್ಷದ ಯುವತಿ ಗುರುವಾರ ಸಂಪ್ರದಾಯಬದ್ಧವಾಗಿ ತನ್ನನ್ನು ತಾನೇ ಮದುವೆ ಆಗಿದ್ದಾರೆ.
ಬಿಜೆಪಿ ಸ್ಥಳೀಯ ನಾಯಕಿ ಸ್ವಯಂ ಮದುವೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಿಗದಿಯಾದ ದಿನಾಂಕಕ್ಕಿಂತ ೫ ದಿನ ಮುಂಚಿತವಾಗಿಯೇ ಮೆಹಂದಿ ಸೇರಿದಂತೆ ಹಲವು ಶಾಸ್ತ್ರಗಳನ್ನು ಪೂರೈಸುವ ಮೂಲಕ ಕ್ಷಮಾ ಬಿಂದು ಮದುವೆ ಆದರು.
ಮದುವೆ ಸಮಾರಂಭ ಮುಕ್ತಾಯಗೊಂಡ ನಂತರ ವೀಡಿಯೋದಲ್ಲಿ ಈ ಮದುವೆಗೆ ಸಹಕರಿಸಿದ ಎಲ್ಲಾ ಸ್ನೇಹಿತರು, ಕುಟುಂಬದವರಿಗೆ ಧನ್ಯವಾದಗಳು.ಹಲವಾರು ಜನರು ಕರೆ ಮೂಲಕ ಸಂದೇಶದ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಇದರಿಂದ ನಾನು ನಂಬಿದ ತತ್ವದ ಪರ ಹೋರಾಟಕ್ಕೆ ಶಕ್ತಿ ಬಂದಿದೆ ಎಂದು ತಿಳಿಸಿದ್ದಾರೆ.
