ದೇಶದಲ್ಲಿ ದಿನದಿಂದ ದಿನಕ್ಕೆ ಮಂಕಿಪಾಕ್ಸ್ ಸೋಂಕು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು ದೇವರನಾಡು ಕೇರಳದಲ್ಲಿ ತುಸು ಹೆಚ್ಚು ಎಂದು ಹೇಳಬಹುದು.
ಈ ಮಧ್ಯೆ ಕೇರಳದ ತ್ರಿಶ್ರೂರ್ ಜಿಲ್ಲೆಯಲ್ಲಿ ಮಂಕಿಪಾಕ್ಸ್ ಸೋಂಕಿತ ಒಬ್ಬ ಶನಿವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಜಿಲ್ಲೆಯ ಚಾವಾಕ್ಕಾಡ್ನ 22 ವರ್ಷದ ಯುವಕನಿಗೆ ಯುಎಇಯಲ್ಲಿ ಸೋಂಕು ತಗುಲಿತ್ತು. ಈ ವಿಚಾರವನ್ನ ಮುಚ್ಚಿಟ್ಟು ಆತ ತನ್ನ ಊರಿಗೆ ವಾಪಸ್ಸಾಗಿದ್ದರು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಜುಲೈ 21ರಂದು ಭಾರತಕ್ಕೆ ಬಂದಿಳಿದ್ದ ಯುವಕನನ್ನು ಜುಲೈ27ರಂದು ಪ್ರತಿಷ್ಠಿತ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಯುವಕನ ಮಾದರಿಗಳನ್ನು ಪುಣೆಯ NIVಗೆ ಕಳುಹಿಸಲಾಗಿದ್ದು ವರದಿ ಇನ್ನಷ್ಟೇ ಬರಬೇಕಿದೆ.






