ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ ಯಾವಗ ಆರಂಭವಾಗುತ್ತೆ ಅಂತ ಇಷ್ಟು ದಿನ ಕಾಯತ್ತಾ ಇದ್ದ ಕ್ರೀಡಾ ಅಭಿಮಾನಿಗಳು (Sports fans) ಈಗಾಗಾಲೇ ಐಪಿಎಲ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿಕೊಂಡಿದ್ದಾರೆ. 16ನೇ ಆವೃತ್ತಿಯ ಐಪಿಎಲ್ (IPL) ಮಾರ್ಚ್ 31 ರಿಂದ ಆರಂಭವಾಗಲಿದೆ (Starting from March 31) ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (The defending champions are Gujarat Titans) ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು (Chennai Super Kings teams) ಮುಖಾಮುಖಿಯಾಗಲಿವೆ. ನರೇಂದ್ರ ಮೋದಿ ಮೈದಾನದ ಸ್ಟೇಡಿಯಂನಲ್ಲಿ (Narendra Modi Maidan Stadium) ಪಂದ್ಯ ನಡೆಯಲಿದೆ.
ಬೆಂಗಳೂರು, ಮುಂಬೈ, ಚೆನ್ನೈ ಸೇರಿದತೆ 12 ನಗರದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ ಆಯೋಜನೆಗೊಂಡಿದೆ. ಮೇ 28ರಂದು ಫೈನಲ್ ಪಂದ್ಯ ನಡೆಯಲಿದೆ. 16ನೇ ಆವೃತ್ತಿಯ ಐಪಿಎಲ್ನಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿದೆ. ಇದರಲ್ಲಿ 18 ಡಬಲ್ ಹೆಡ್ಡರ್ ಇರಲಿವೆ. ಲೀಗ್ನ ಪ್ರತಿ ತಂಡ 7 ಪಂದ್ಯಗಳನ್ನು ತವರಿನಲ್ಲಿ ಹಾಗೂ 7 ಪಂದ್ಯಗಳನ್ನು ಹೊರಗೆ ಆಡಲಿದೆ. ಮೇ 21ಕ್ಕೆ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದೆ. ಬಳಿಕ ಪ್ಲೇ ಆಫ್ ಹಂತದ ಪಂದ್ಯಗಳು ನಡೆಯಲಿದ್ದು, ಮೇ 28ರಂದು ಫೈನಲ್ ಮುಖಾಮುಖಿ ನಡೆಯಲಿದೆ.