ಟಿ20 ವಿಶ್ವಕಪ್ ನ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ (India vs Bangladesh) ವಿರುದ್ದ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ (Team India) ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು. ರಿಷಬ್ ಪಂತ್ ಅರ್ಧಶತಕ ಸಿಡಿಸಿದರೆ, ಉಪನಾಯಕ ಹಾರ್ದಿಕ್ ಪಾಂಡ್ಯ 40 ಹಾಗೂ ಸೂರ್ಯಕುಮಾರ್ ಯಾದವ್ 31 ರನ್ ಗಳಿಸಿದ್ದರು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 9 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿ ಸೋಲು ಒಪ್ಪಿಕೊಂಡಿತು.
193 ರನ್ ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಕೆಟ್ಟ ಆರಂಭ ಪಡೆಯಿತು. ಸೌಮ್ಯ ಸರ್ಕಾರ್ ಮತ್ತು ನಾಯಕ ನಜ್ಮುಲ್ ಹಸನ್ ಶಾಂಟೊ ಖಾತೆ ತೆರೆಯದೆ ಔಟ್ ಆದರು. ತಂಜಿದ್ ಹಸನ್ 17 ರನ್ ಮತ್ತು ಲಿಟನ್ ದಾಸ್ ಆರು ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಶಕೀಬ್ ಅಲ್ ಹಸನ್ (28) ಮತ್ತು ಮಹಮ್ಮದುಲ್ಲಾ (40) ತಂಡಕ್ಕೆ ಚೇತರಿಕೆ ನೀಡಿದರು. ಆದರೆ, ಅದು ಮುಂದುವರೆಯಲಿಲ್ಲ.
ಭಾರತದ ಪರ ಅರ್ಷದೀಪ್ ಸಿಂಗ್ ಮತ್ತು ಶಿವಂ ದುಬೆ ತಲಾ ಎರಡು ವಿಕೆಟ್ ಪಡೆದರೆ, ಬುಮ್ರಾ, ಸಿರಾಜ್, ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೂ ಉತ್ತಮ ಆರಂಭ ಸಿಕ್ಕಿರಲಿಲ್ಲ. ಸಂಜು ಸ್ಯಾಮ್ಸನ್ ಕೇವಲ ಒಂದು ರನ್ ಗಳಿಸಿ ಔಟ್ ಆದರು. ನಾಯಕ ರೋಹಿತ್ ಕೂಡ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ರಿಷಬ್ ಪಂತ್ 53 ರನ್ ಗಳಿಸಿದರು.