ಈಗಾಗಲೇ 2023ನೇ ಪುರುಷರ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಪ್ರವೇಶ ಪಡೆದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಿತ್ತು. ಈ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭರ್ಜರಿ 243 ರನ್ಗಳ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ ಎದುರಾಳಿಗೆ 327 ರನ್ಗಳ ದೊಡ್ಡ ಗುರಿ ನೀಡಿದ ಟೀಮ್ ಇಂಡಿಯಾ, ಬಳಿಕ ಬೌಲಿಂಗ್ನಲ್ಲೂ ಆಕ್ರಮಣಕಾರಿ ದಾಳಿ ಸಂಘಟಿಸಿತು. ಸ್ಟಾರ್ ಬ್ಯಾಟರ್ಗಳ ದಂಡನ್ನೇ ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ಭಾರ ತಂಡದ ಬಲಿಷ್ಠ ಬೌಲಿಂಗ್ ವಿಭಾಗದ ಅಕ್ಷರಶಃ ತತ್ತರಿಸಿತು.
ರವೀಂದ್ರ ಜಡೇಜಾ, 9 ಓವರ್ಗಳಲ್ಲಿ 33 ರನ್ ನೀಡಿ 5 ವಿಕೆಟ್ ಪಡೆದರು. ಅವರಿಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ಶಮಿ ಮತ್ತು ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಕೂಡ ಒಂದು ವಿಕೆಟ್ ಪಡೆದು ಭಾರತಕ್ಕೆ ಆರಂಭಿಕ ಯಶಸ್ಸು ತಂದರು.

ನಾಯಕ ರೋಹಿತ್ ಶರ್ಮಾ ಬಿರುಸಿನ 40 ರನ್ ಸಿಡಿಸಿ ಔಟಾದರೆ, ಶ್ರೇಯಸ್ ಅಯ್ಯರ್ (77) ಮತ್ತು ವಿರಾಟ್ ಕೊಹ್ಲಿ 3ನೇ ವಿಕೆಟ್ಗೆ ಶತಕದ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ವಿರಾಟ್ ಅಜೇಯ 101 ರನ್ ಬಾರಿಸಿ ಭಾರತಕ್ಕೆ 50 ಓವರ್ಗಳಲ್ಲಿ 326/5 ರನ್ಗಳ ಬೃಹತ್ ಮೊತ್ತ ತಂದರು.