ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಒಂದ್ಯಗಳ ಏಕದಿನ ಸರಣಿ ಗುರುವಾರ ಪ್ರಾರಂಭವಾಗಿದ್ದು ಸರ್ವಾಂಗೀಣ ಪ್ರದರ್ಶನದಿಂದ ಭಾರತ ಮೊದಲ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಭಾರತದ ಬೌಲರ್ಗಳ ದಾಳಿಗೆ ನಲುಗಿ 189 ರನ್ಗಳಿಗೆ ಸರ್ವಪತನ ಕಂಡಿತ್ತು. ಭಾರತದ ಪರ ವೇಗಿಗಳಾದ ದೀಪಕ್ ಚಹರ್ (3 ವಿಕೆಟ್), ಪ್ರಸಿದ್ಧ ಕೃಷ್ಣ (3 ವಿಕೆಟ್), ಸ್ಪಿನರ್ ಅಕ್ಷರ್ ಪಟೇಲ್ ( 3 ವಿಕೆಟ್) ಪಡೆದಿದ್ದಾರೆ.
ನಂತರ ಬ್ಯಾಟಿಂಗಿಳಿದ ಭಾರತ ಆರಂಭಿಕ ಶಿಖರ್ ಧವನ್ (81 ರನ್, 113 ಎಸೆತ, 9 ಬೌಂಡರಿ) ಹಾಗೂ ಶುಭಮಾನ್ ಗಿಲ್ (82 ರನ್, 72 ಎಸೆತ, 10 ಬೌಂಡರಿ, 1 ಸಿಕ್ಸರ್) ನೆರವಿನಿಂದ ಗುರಿಯನ್ನು ಸುಲಭವಾಗಿ ಗುರಿಯನ್ನು 30.5 ಓವರ್ಗಳಲ್ಲಿ ಬೆನ್ನಟ್ಟಿತ್ತು.
