ಭಾರತ-ಬಾಂಗ್ಲಾದೇಶ ವಿರುದ್ದ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್‌ಗಳ ಜಯಗಳಿಸುವ ಮೂಲಕ ಭಾರತ ಅತಿಥೇಯರಿಗೆ ಮಣ್ಣು ಮುಕ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಢಾಕಾದ ಶೇರ್ೆ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಬಾಂಗ್ಲಾದೇಶ ತಂಡವು ಮೊದಲ ಇನ್ನಿಂಗ್ಸ್ ಹಾಗೂ ಎರಡನೇ ಇನ್ನಿಂಗ್ಸ್ 227-231 ರನ್‌ಗಳಿಸಿ ಆಲೌಟ್ ಆಗಿತ್ತು.
ಗುರಿಬೆನ್ನತ್ತಿದ್ದ ಭಾರತ ತಂಡವು ಮೊದಲ ಇನ್ನಿಂಗಸ್‌ನಲ್ಲಿ 87ರನ್‌ಗಳ ಅಮೂಲ್ಯ ಮುನ್ನಡೆಯನ್ನ ಸಾಧಿಸಿ ಅತೀಥೇಯರಿಗೆ ಸವಾಲ್ ಹಾಕಿತ್ತು ಮತ್ತು ಎರಡನೇ ಇನ್ನಿಂಗ್ಸ್ ಆರಂಭಿಸಿದ ಅತಿಥೇಯರು 145ರನ್‌ಗಳ ಗುರಿಯನ್ನ ಭಾರತಕ್ಕೆ ನೀಡಿದ್ದರು.
ಗುರಿಬೆನ್ನಟ್ಟಿದ್ದ ಭಾರತ ತಂಡವು ಆರ್.ಅಶ್ವಿನ್(42 ರನ್, 62 ಎಸೆತ, 4 ಬೌಂಡರಿ, 1 ಸಿಕ್ಸರ್), ಶ್ರೇಯಸ್ ಅಯ್ಯರ್ (29ರನ್, 46 ಎಸೆತ, 4 ಬೌಂಡರಿ), ಅಕ್ಷರ್ ಪಟೇಲ್ (34 ರನ್, 69 ಎಸೆತ, 4 ಬೌಂಡರಿ) ಉಪಯುಕ್ತ ಆಟದ ಫಲವಾಗಿ 7 ವಿಕೆಟ್ ನಷ್ಟಕ್ಕೆ 145 ರನ್‌ಗಳಿಸಿ ಗೆಲುವಿನ ನಗೆ ಬೀರುವ ಮೂಲಕ ಎಕದಿನ ಸರಣಿ ಸೋಲಿನ ಸೇಡನ್ನು ತೀರಿಸಿಕೊಂಡಿತ್ತು.













