ಭಾರತ(India) ಹಾಗೂ ಇಂಗ್ಲೆಂಡ್(England) ನಡುವಿನ 4ನೇ ಟೆಸ್ಟ್ ಪಂದ್ಯ(Test Match) ಇಂದಿನಿಂದ ಆರಂಭಗೊಳ್ಳಲಿದೆ. ರಾಂಚಿಯಲ್ಲಿ(Ranchi) ನಡೆಯುವ ಪಂದ್ಯಕ್ಕಾಗಿ ಉಭಯ ತಂಡಗಳು(Teams) ಭರ್ಜರಿ ತಯಾರಿ ಮಾಡಿಕೊಂಡಿದ್ದು, ಜಿದ್ದಾಜಿದ್ದಿನ ಹಣಾಹಣಿ ನಡೆಸಲು ಸಜ್ಜಾಗಿವೆ.

ಐದು ಪಂದ್ಯಗಳ ಸರಣಿಯಲ್ಲಿ(Series) 2-1ರ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ(Test Series) ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೆ. ಮೊದಲ ಪಂದ್ಯದಲ್ಲಿ ಗೆದ್ದರೂ ನಂತರದ ಎರಡು ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡಿರುವ ಇಂಗ್ಲೆಂಡ್(England), 4ನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿ ಜೀವಂತ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಬೆನ್ ಸ್ಟೋಕ್ಸ್(Ben Stokes) ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಇಂಗ್ಲೆಂಡ್ ಪ್ರಸ್ತುತ ಅಳವಡಿಸಿಕೊಂಡಿರುವ ʻಬಜ್‌ಬಾಲ್ʼ(Bazball) ತಂತ್ರಗಾರಿಕೆಯಲ್ಲಿ ಒಂದು ಟೆಸ್ಟ್ ಸರಣಿಯನ್ನು ಸೋತಿಲ್ಲ. ಆದರೆ ಕಳೆದ 3ನೇ ಟೆಸ್ಟ್‌ನಲ್ಲಿ 434 ರನ್‌ಗಲ ಭಾರೀ ಅಂತರದ ಸೋಲಿನ ಆಘಾತ ಅನುಭವಿಸಿರುವ ಆಂಗ್ಲರಿಗೆ ಇದೀಗ ಸರಣಿ(Series) ಸೋಲಿನ ಆತಂಕ ಎದುರಾಗಿದೆ. ಹೀಗಾಗಿಯೇ ನಾಲ್ಕನೇ ಟೆಸ್ಟ್‌ನಲ್ಲಿ ಬಲಿಷ್ಠ ಕಮ್‌ಬ್ಯಾಕ್(Come Back) ಮಾಡುವ ತವಕದೊಂದಿಗೆ ಇಂಗ್ಲೆಂಡ್ ಕಣಕ್ಕಿಳಿಯುತ್ತಿದೆ.

ಇನ್ನೂ ಬ್ಯಾಟಿಂಗ್(Batting) ಹಾಗೂ ಬೌಲಿಂಗ್(Bowling)ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾ(Team India) ಗೆಲುವಿನ ಆತ್ಮವಿಶ್ವಾಸದಲ್ಲಿದೆ. ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಸರ್ಫರಾಜ್ ಖಾನ್ ಅವರುಗಳು ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ನಿಂದ ಮಿಂಚಿದ್ದರೆ. ಬೌಲಿಂಗ್‌ನಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ, ಆರ್. ಅಶ್ವಿನ್, ಜಸ್ಪ್ರೀತ್ ಬುಮ್ರಾ ಅವರುಗಳು ಸಂಘಟಿತ ಪ್ರದರ್ಶನದಿಂದ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಆದರೆ ಇಂದಿನ ಪಂದ್ಯಕ್ಕೆ ಅನುಭವಿ ವೇಗಿ ಬುಮ್ರಾ ಇಲ್ಲದಿರುವುದು ತಂಡಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದ್ದರೂ, ಮೊಹಮ್ಮದ್ ಸಿರಾಜ್ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಅಲ್ಲದೇ ಬುಮ್ರಾ ಅನುಪಸ್ಥಿತಿಯಲ್ಲಿ 2ನೇ ಬೌಲರ್ ಆಗಿ ಯಾರು ಕಣಕ್ಕಿಳಿಯುತ್ತಾರೆ ಕಾದುನೋಡಬೇಕಿದೆ.
#TeamIndia #England #TestSeries #4thTest #BazBall #RohitSharma #BenStokes









