ದೇಶದ ಪ್ರಮುಖ 75 ಕರಾವಳಿ ಪ್ರದೇಶಗಳನ್ನು 75 ದಿನಗಳಲ್ಲಿ ಸ್ವಚ್ಛಗೊಳಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಕರಾವಳಿ ಸ್ವಚ್ಛತಾ ದಿನಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಈ ಘೋಷಣೆ ಮಾಡಿದ ಸಚಿವರು, ವರ್ಷದಲ್ಲಿ 75 ದಿನ ದೇಶದ ಪ್ರಮುಖ 75 ಸಮುದ್ರ ತೀರಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು.

ಸೆಪ್ಟೆಂಬರ್ 17ರಂದು ಅಂತಾರಾಷ್ಟ್ರೀಯ ತೀರ ಪ್ರದೇಶಗಳ ಸ್ವಚ್ಛತೆ ದಿನಾಚರಣೆ ನಡೆಯಲಿದ್ದು, ಈ ವೇಳೆ ದೇಶದ ಅತೀ ದೊಡ್ಡ ಸಮುದ್ರ ತೀರ ಪ್ರದೇಶಗಳ ಸ್ವಚ್ಛತಾ ಅಭಿಯಾನ ನಡೆಯಲಿದ್ದು, ಅತೀ ಹೆಚ್ಚು ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.






