2025ರ ಅಂತ್ಯಕ್ಕೆ ಭಾರತವು 5 ಟ್ರಿಲ್ಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಉತ್ತರಾಖಂಡ್ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ದಕ್ಷ ನಾಯಕತ್ವದೊಂದಿಗೆ ಭಾರತವು 2047ರೊಳಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ನಂಬರ್ 1 ಆಗಲಿದೆ ಎಂದರು.
ಇನ್ನು ಇಡೀ ವಿಶ್ವವೇ ಭಾರತದ ಮೇಲೆ ವಿಶ್ವಾಸದಿಂದ ತಿರುಗಿನೋಡುತ್ತಿದೆ. 2014-2023 ರ ಅವಧಿಯಲ್ಲಿ ವಿಶ್ವದಲ್ಲಿ 11ನೇ ಅತಿ ದೊಡ್ಡ ಆರ್ಥಿಕತೆ ಯಿಂದ 5ನೇ ಸ್ಥಾನಕ್ಕೆ ಏರಿಕೆ ಕಂಡಿರುವ ಹೆಗ್ಗಳಿಕೆ ಭಾರತದ್ದು ಎಂದರು. ಪ್ರಧಾನಿಯವರ ದಕ್ಷ ನಾಯಕತ್ವದಲ್ಲಿ 75 ವರ್ಷಗಳ ಸ್ವಾತಂತ್ರ್ಯ ಕಂಡರೂ ಭಾರತ ಹಿಂದೆದೂ ಕಾಣದ ರೀತಿಯಲ್ಲಿ ಪ್ರಗತಿ ಸಾಧಿಸಿದೆ.
ದೇಶದ ಆರ್ಥಿಕತೆ ಬಲಪಡಿಸಲು ಸರ್ಕಾರ ಸಾಕಷ್ಟು ಶ್ರಮಿಸುತ್ತಿದ್ದು, ಇದರ ಪರಿಣಾಮವಾಗಿ ಕೇವಲ ಐದೇ ವರ್ಷದ ಅವಧಿಯಲ್ಲಿ ದೇಶದ 13 ಕೋಟಿಗೂ ಅಧಿಕ ಮಂದಿ ಬಡತನದಿಂದ ಹೊರಬಂದಿದ್ದಾರೆ ಅಂತ ಅಮಿತ್ ಶಾ ಹೇಳಿದ್ದಾರೆ.