ಬಾಂಗ್ಲಾದೇಶದಲ್ಲಿ ಮುಂದಿನ ತಿಂಗಳು ನಡೆಯಲಿರುವ ವನಿತೆಯರ ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ.
ಅಕ್ಟೋಬರ್ 1ರಿಂದ ನಡೆಯಲಿರುವ ಪ್ರತಿಷ್ಠಿತ ಟೂರ್ನಿಗೆ ಪ್ರಕಟಿಸಲಾದ 15 ಸದಸ್ಯರ ಭಾರತ ತಂಡವನ್ನು ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಸ್ಮೃತಿ ಮಂದಾನ ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ.
ಭಾರತ ತಂಡ ಇಬ್ಬರು ಮೀಸಲು ಆಟಗಾರ್ತಿಯನ್ನು ಆಯ್ಕೆ ಮಾಡಿದ್ದು, ತಾನಿಯಾ ಭಾಟಿಯಾ ಮತ್ತು ಸಿಮ್ರಾನ್ ದಿಲ್ ಬಹದ್ದೂರ್ ಸ್ಥಾನ ಗಳಿಸಿದ್ದಾರೆ.

ಭಾರತ ಅಕ್ಟೋಬರ್ 1ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಅಕ್ಟೋಬರ್ 3ರಂದು ಮಲೇಷ್ಯಾ ವಿರುದ್ಧ, ಅಕ್ಟೋಬರ್ 4ರಂದು ಯುಎಇ ವಿರುದ್ಧ ಹಾಗೂ ಅಕ್ಟೋಬರ್ 7ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಭಾರತ ವನಿತೆಯರ ತಂಡ:
ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ದೀಪ್ತಿ ಶರ್ಮ, ಶೆಫಾಲಿ ವರ್ಮಾ, ಜೆಮಿಹ ರೋಡ್ರಿಗಜ್, ಶೆಬಾನೆನಿ ಮೇಘನಾ, ರಿಚಾ ಘೋಷ್ (ವಿ.ಕೀ.), ಸ್ನೇಹ ರಾಣಾ, ದಯಾಲನ್ ಹೇಮಲತಾ, ಮೇಘನಾ ಸಿಂಗ್, ರೇಣುಕಾ ಥಾಕೂರ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್, ಕೆಪಿ ನವ್ಗೇರಿ.