ಅಮೆರಿಕದ (America) ಬೆದರಿಕೆಗೂ ಜಗ್ಗದೇ ರಷ್ಯಾದಿಂದ ತೈಲ (Russia crude oil) ಖರೀದಿಸುವುದನ್ನು ಭಾರತ ಮುಂದುವರೆಸಿರುವ ಹಿನ್ನಲೆಯಲ್ಲಿ, ಈ ಕೂಡಲೇ ಭಾರತ ತೈಲ ಖರೀದಿ ನಿಲ್ಲಿಸಬೇಕು ಎಂದು ಮತ್ತೆ ಅಮೆರಿಕ ಬೆದರಿಕೆ ಹಾಕಿದೆ. ಈ ಬಗ್ಗೆ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿಕೆ ಕೊಟ್ಟಿದ್ದಾರೆ.

ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದ್ರೆ ಮಾತ್ರ ಅಮೆರಿಕ ಹೆಚ್ಚಿನ ಸುಂಕ ಮತ್ತು ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸಲು ಸಾಧ್ಯವಿದೆ. ನಾವು ಭಾರತದೊಂದಿಗಿನ ವ್ಯಾಪಾರ ಒಪ್ಪಂದವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆವೆ ಎಂದು ಲುಟ್ನಿಕ್ ಹೇಳಿದ್ದಾರೆ.

ಒಂದ್ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ನಮ್ಮ ವಿಶೇಷ ಸ್ನೇಹಿತ ಅಂತ ಕರೆಯುತ್ತಿದ್ದರೆ.. ಮತ್ತೊಂದೆಡೆ ಟ್ರಂಪ್ ಕ್ಯಾಬಿನೆಟ್ ಸಚಿವರು ಭಾರತದ ವಿರುದ್ದದ ಹೇಳಿಕೆ ನೀಡುವುದನ್ನು ಮುಂದುವರೆಸಿದ್ದಾರೆ.











