ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 8,013 ಕೋವಿಡ್ ಪ್ರಕರಣಗಳು (Covid Cases) ಪತ್ತೆಯಾಗಿದ್ದು, 119 ಮಂದಿ ಮೃತಪಟ್ಟಿ ದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 16,765 ಮಂದಿ ಕೋವಿಡ್ನಿಂದ ಚೇತರಿಸಿಕೊಂಡು ಆಸ್ಪ ತ್ರೆ ಗಳಿಂದ ಬಿಡುಗಡೆಯಾಗಿದ್ದಾರೆ ಎಂದು ವರದಿ ತಿಳಿಸಿದೆ. ದೇಶದಲ್ಲಿ 1,02,601 ಸಕ್ರಿಯ ಪ್ರ ಕರಣಗಳಿವೆ. ದೈನಂದಿನ ಪಾಸಿಟಿವಿಟಿ ರೇಟ್ ಶೇ 1.11ರಷ್ಟು ಇದೆ. ಒಟ್ಟಾರೆ ಸಾವಿನ ಸಂಖ್ಯೆ 5,13,843ಕ್ಕೆ ತಲುಪಿದ್ದು , ಈ ವರೆಗೆ ದೇಶದಲ್ಲಿ 177 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.