ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮಗದೊಮ್ಮೆ ಭಾರತ ಮತ್ತು ಪಾಕಿಸ್ತಾನ ನಡುವಣ ರೋಚಕ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ಅಕ್ಟೋಬರ್ 24 ಭಾನುವಾರ ದುಬೈಯಲ್ಲಿ ನಡೆಯಲಿರುವ ಹೈವೋಲ್ಟೆಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗವು ಬಾಬರ್ ಆಜಂ ಪಡೆಯ ಸವಾಲನ್ನು ಎದುರಿಸಲಿದೆ.
ಆದರೆ ಎಲ್ಲಾ ಅಭಿಮಾನಿಗಳ ಕಣ್ಣು ಅ.24ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ಬಿದ್ದಿದ್ದೆ. ಹೌದು..ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಕದನ ಎಂದರೆ ಅದೊಂದು ನಿಜವಾದ ಯುದ್ದದಂತೆ ಇರುತ್ತದೆ.
ಎಲ್ಲರೂ ಭಾರೀ ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಭಾರತ-ಪಾಕಿಸ್ತಾನ ಪಂದ್ಯ ರವಿವಾರ ದುಬೈಯಲ್ಲಿ ನಡೆಯಲಿದೆ. ಸೂಪರ್ 12 ಹಂತದ ಈ ಪಂದ್ಯವು, ಯುಎಇ ಮತ್ತು ಒಮಾನ್‌ನಲ್ಲಿ ನಡೆಯುತ್ತಿರುವ ಟ್ವೆಂಟಿ-20ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಮೊದಲ ಪಂದ್ಯವಾಗಿದೆ.
2007ರಲ್ಲಿ ಟ್ವೆಂಟಿ-20 ವಿಶ್ವಕಪ್ ಆರಂಭ ಗೊಂಡಂ ದಿನಿಂದ ಪಾಕಿಸ್ತಾನ ವಿರುದ್ಧದ ಎಲ್ಲ 5 ಪಂದ್ಯಗಳನ್ನು ಗೆದ್ದಿರುವ ದಾಖಲೆಯನ್ನು ಭಾರತ ಹೊಂದಿದೆ. ಈ ಎಲ್ಲ ಪಂದ್ಯಗಳನ್ನು ಭಾರತವು ಮಹೇಂದ್ರ ಸಿಂಗ್ ಧೋನಿಯ ನಾಯಕತ್ವದಲ್ಲಿ ಗೆದ್ದಿದೆ. ಈ ಬಾರಿ ಧೋನಿ ತಂಡದಲ್ಲಿಲ್ಲ ದಿದ್ದರೂ ಮಾರ್ಗದರ್ಶಕರಾಗಿ ನಾಯಕ ವಿರಾಟ್ ಕೊಹ್ಲಿಗೆ ತನ್ನ ಅನುಭವವನ್ನು ಧಾರೆಯೆರೆಯಲಿದ್ದಾರೆ.
‘ಹಳೆಯ ಕತೆ ಮುಗಿದು ಹೋಗಿದೆ. ಹಿಂದಿನ ಸೋಲು-ಗೆಲುವು ಈಗ ಲೆಕ್ಕಕ್ಕೆ ಬರಲ್ಲ. ಇದರ ಬಗ್ಗೆ ಯೋಚಿಸುವ ಬದಲು ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇವೆ. ಭಾರತ ವಿರುದ್ಧದ ಪಂದ್ಯಕ್ಕೆ ನಾವು ಉತ್ತಮವಾಗಿ ತಯಾರಿ ನಡೆಸಿದ್ದೇವೆ ಹಾಗೂ ಉತ್ತಮ ಕ್ರಿಕೆಟ್ ಆಡುತ್ತೇವೆಂಬ ಬಗ್ಗೆ ನಂಬಿಕೆ ಇದೆ. ದೊಡ್ಡ ಟೂರ್ನಿಗೆ ನೀವು ತೆರಳಿದಾಗ, ನಿಮ್ಮ ಮೇಲಿನ ನಂಬಿಕೆ ಹಾಗೂ ತಂಡದ ಆಟಗಾರರಲ್ಲಿನ ವಿಶ್ವಾಸ ಪ್ರಮುಖ ಸಂಗತಿಯಾಗಿರುತ್ತದೆ. ಒಂದು ತಂಡವಾಗಿ ನಮ್ಮ ವಿಶ್ವಾಸ ಹಾಗೂ ಮನೋಸ್ಥೈರ್ಯ ಅಗ್ರ ಸ್ಥಾನದಲ್ಲಿದೆ’ ಎಂದು ಬಾಬರ್ ಹೇಳಿದ್ದಾರೆ.