ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳ ಜಯಭೇರಿ ಬಾರಿಸಿದ ಭಾರತ ತಂಡ ಐಸಿಸಿ ಏಕದಿನ ರ್ಯಾಂ ಕಿಂಗ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಹಿಂದಿಕ್ಕಿದೆ.
ಬುಧವಾರ ಬಿಡುಗಡೆ ಆದ ನೂತನ ಏಕದಿನ ರ್ಯಾಂ ಕಿಂಗ್ ನಲ್ಲಿ ಭಾರತ 108 ಅಂಕ ಕಲೆ ಹಾಕುವ ಮೂಲಕ 3ನೇ ಸ್ಥಾನಕ್ಕೆ ಜಿಗಿತ ಕಂಡರೆ, ಪಾಕಿಸ್ತಾನ 106 ಅಂಕದೊಂದಿಗೆ ೪ನೇ ಸ್ಥಾನಕ್ಕೆ ಕುಸಿದಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಭಾರತ 105 ಅಂಕದೊಂದಿಗೆ ಪಾಕಿಸ್ತಾನಕ್ಕಿಂತ ಕೆಳಗಿನ ಸ್ಥಾನದಲ್ಲಿತ್ತು. ಆದರೆ ಭಾರತ ಭಾರೀ ಅಂತರದಿಂದ ಗೆದ್ದು ರ್ಯಾಂ ಕಿಂಗ್ ನಲ್ಲಿ ಬಡ್ತಿ ಪಡೆದಿದೆ.
126 ಅಂಕ ಗಳಿಸಿರುವ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದ್ದರೆ, 122 ಅಂಕ ಗಳಿಸಿರುವ ಇಂಗ್ಲೆಂಡ್ 2ನೇ ಸ್ಥಾನದಲ್ಲಿದೆ. ಒಂದು ವೇಳೆ ಭಾರತ ಈ ಸರಣಿಯನ್ನು ಭಾರೀ ಅಂತರದಿಂದ ಗೆದ್ದರೆ ಇಂಗ್ಲೆಂಡ್ ತಂಡವನ್ನು ಕೂಡ ಹಿಂದಿಕ್ಕಿವ ಸಾಧ್ಯತೆ ಇದೆ.