ಲೋಕಸಭಾ ಚುನಾವಣೆ ಫಲಿತಾಂಶ ಅತಂತ್ರ ಆಗಿದ್ದು, NDA ಮೈತ್ರಿಕೂಟ ಸರ್ಕಾರ ರಚನೆ ಮಾಡುವಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಬಿಜೆಪಿ ವೈಯಕ್ತಿಕವಾಗಿ 240 ಸ್ಥಾನಗಳಲ್ಲಿ ಮಾತ್ರವೇ ಗೆಲುವು ಸಾಧಿಸಿದ್ದು, ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೂ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆ ಆಗುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ ಎನ್ಡಿಎ ಮೈತ್ರಿಕೂಟದಲ್ಲಿ ಇಬ್ಬರು ಘಟಾನುಘಟಿ ನಾಯಕರಿದ್ದು, ಬಿಜೆಪಿ ಜೊತೆಗೆ ಮೈತ್ರಿ ಮುಂದುವರಿಸ್ತಾರಾ..? ಅಥವಾ ಇಂದಿನ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಆಗುತ್ತಾ ಅನ್ನೋ ಶಂಕೆ ವ್ಯಕ್ತವಾಗಿದೆ.
ಇಂದು ಇಂಡಿಯಾ ಒಕ್ಕೂಟದಲ್ಲೂ ಸಭೆ ನಡೆಯುತ್ತಿದ್ದು ನಿತೀಶ್ ಕುಮಾರ್ ಹಾಗು ಚಂದ್ರಬಾಬು ನಾಯ್ಡು ಬೆಂಬಲದಿಂದ ಸರ್ಕಾರ ರಚನೆ ಮಾಡುವ ಬಗ್ಗೆ ಸಭೆ ನಡೆಸಲಾಗ್ತಿದೆ. ಇನ್ನು ಚಂದ್ರಬಾಬು ನಾಯ್ಡು ಹಾಗು ನಿತೀಶ್ ಕುಮಾರ್ ಕೂಡ ಎನ್ಡಿಎ ಮೈತ್ರಿಕೂಟದ ಸಭೆಯಲ್ಲಿ ಹಾಜರಾಗಿದ್ದು, ಅಲ್ಲಿನ ಸಭೆಯಲ್ಲಿ ಕೆಲವು ಡಿಮ್ಯಾಂಡ್ ಇಡುತ್ತಾರೆ ಎನ್ನಲಾಗ್ತಿದೆ. ಈ ನಡುವೆ ಇಂಡಿಯಾ ಒಕ್ಕೂಟದಲ್ಲಿರುವ RJD ನಾಯಕ Thejaswi Yadav ಹಾಗು ನಿತೀಶ್ ಕುಮಾರ್ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿರುವುದು ಸಾಕಷ್ಟು ಗುಮಾನಿಗಳಿಗೂ ಕಾರಣ ಆಗಿದೆ. Nithish Kumar ಹಾಗು Chandra babu Naidu ಅವರ ಬೆಂಬಲ ಯಾರಿಗೆ ಸಿಗುತ್ತದೆಯೋ ಅವರು ಸರ್ಕಾರ ರಚನೆ ಮಾಡಲು ಸಾಧ್ಯ ಇದೆ.
ಈ ಹಿಂದೆ ಈಗಾಗಲೇ ಚಂದ್ರಬಾಬು ನಾಯ್ಡು ಹಾಗು ನಿತೀಶ್ ಕುಮಾರ್ ಕಾಂಗ್ರೆಸ್ ಜೊತೆಗೂ ಮೈತ್ರಿ ಮಾಡಿಕೊಂಡಿದ್ದರು. ಬಿಜೆಪಿ ಜೊತೆಗೂ ಮೈತ್ರಿ ಮಾಡಿಕೊಂಡಿದ್ದರು. ಹೀಗಾಗಿ ಯಾರೊಂದಿಗೆ ಮೈತ್ರಿ ಮಾಡಿಕೊಂಡರೆ ಅಧಿಕಾರ ಬಲ ಹೆಚ್ಚು ಅನ್ನೋದನ್ನು ಇಬ್ಬರೂ ನಾಯಕರು ಲೆಕ್ಕಾಚಾರ ಹಾಕಿಯೇ ಹಾಕುತ್ತಾರೆ. ಬಿಜೆಪಿ ಜೊತೆಗೆ ಸೇರಿ ಅಧಿಕಾರ ಮಾಡಿದರೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗುತ್ತದೆ. ರಾಜ್ಯಕ್ಕೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳಬಹುದು. ಇದೇ ಕಾರಣದಿಂದ ಈಗಾಗಲೇ ಇಬ್ಬರೂ ನಾಯಕರು NDA ಸಭೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಆದರೆ ಎಲ್ಲವೂ INDIA ಒಕ್ಕೂಟದ ಸಭೆ ನಿರ್ಣಯದ ಮೇಲೆ ಅವಲಂಬಿತ ಆಗಿದೆ.
ಇಂಡಿಯಾ ಒಕ್ಕೂಟದ ಬಹುಮುಖ್ಯ ಆಶಯ ಎಂದರೆ ಬಿಜೆಪಿ ಸರ್ಕಾರವನ್ನು ತೊಲಗಿಸುವುದು. ಇಂಡಿಯಾ ಒಕ್ಕೂಟ ಸ್ಥಾಪನೆ ಆಗಿದ್ದೇ ಮೋದಿ ಸರ್ಕಾರದ ವಿರುದ್ಧ ಹೊರಾಟ ಮಾಡುವುದಕ್ಕಾಗಿ, ಜೊತೆಗೆ ಇಂಡಿಯಾ ಒಕ್ಕೂಟ ಸ್ಥಾಪನೆ ಮಾಡಲು ಅಡಿಗಲ್ಲು ಇಟ್ಟಿದ್ದೇ ನಿತೀಶ್ ಕುಮಾರ್. ಹೀಗಿರುವಾಗ ಇಂಡಿಯಾ ಒಕ್ಕೂಟದಲ್ಲಿ ಪ್ರಧಾನಿ ಹಾಗು ಉಪ ಪ್ರಧಾನಿ ಪೋಸ್ಟ್ ಜೊತೆಗೆ ಪ್ರಮುಖ ಅವಕಾಶ ಕೊಡಲಾಗುವುದು ಎನ್ನುವ ಸಂದೇಶ ಹೊರಬಿದ್ದರೆ..! ನಿತೀಶ್ ಕುಮಾರ್ ಹಾಗು ಚಂದ್ರಬಾಬು ನಾಯ್ಡು ದಾಳ ಉರುಳಿಸುವ ಸಾಧ್ಯತೆ ಇದೆ. ಮೋದಿ ಅಡಿ ಕೆಲಸ ಮಾಡುವ ಬದಲು ನಿರ್ಧಾರ ತೆಗೆದುಕೊಳ್ಳುವ ಸ್ಥಾನ ಬಂದರೆ ಯಾರು ತಾನೆ ಬಿಟ್ಟಾರು..? ಅಲ್ಲವೇ..? ಹೀಗಾಗಿ INDIA ಒಕ್ಕೂಟದ ಸಭೆ ನಿರ್ಧಾರದ ಮೇಲೆ ಸರ್ಕಾರ ರಚನೆ ಭವಿಷ್ಯ ನಿಂತಿದೆ ಎನ್ನಬಹುದು.
ಕೃಷ್ಣಮಣಿ