ಆಲ್ರೌಂಡರ್(All-Rounder) ರವೀಂದ್ರ ಜಡೇಜಾ(5/41) ಹಾಗೂ ಯಶಸ್ವಿ ಜೈಸ್ವಾಲ್(214*) ಅವರುಗಳ ಬೊಂಬಾಟ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್(England) ವಿರುದ್ಧದ 3ನೇ ಟೆಸ್ಟ್ನಲ್ಲಿ ಭಾರತ 434 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿ(Test Series)ಯಲ್ಲಿ ಭಾರತ 2-1ರ ಮುನ್ನಡೆ ಸಾಧಿಸಿದೆ.
ರಾಜ್ಕೋಟ್ನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ(Team India) ಆಟಗಾರರು ಸಂಘಟಿತ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್ನಲ್ಲಿ 445 ರನ್ಗಳಿಸಿದ ಭಾರತ, ಪ್ರವಾಸಿ ಇಂಗ್ಲೆಂಡ್ ತಂಡವನ್ನ 319 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಬಳಿಕ 2ನೇ ಇನ್ನಿಂಗ್ಸ್ನಲ್ಲಿ 430/4 ರನ್ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ರೋಹಿತ್ ಪಡೆ, ಎದುರಾಳಿ ತಂಡಕ್ಕೆ 557 ರನ್ಗಳ ಬೃಹತ್ ಟಾರ್ಗೆಟ್(Target) ನೀಡಿತು.
![](https://pratidhvani.com/wp-content/uploads/2024/02/111-3-1024x683.webp)
ಭಾರತ ನೀಡಿದ ಕಠಿಣ ಸವಾಲು ಬೆನ್ನತ್ತಿದ ಇಂಗ್ಲೆಂಡ್ ಪಂದ್ಯದ 4ನೇ ದಿನದಾಟದಂದೇ 122 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಇನ್ನೂ ಒಂದು ದಿನ ಬಾಕಿಯಿರುವಂತೆಯೇ ಗೆದ್ದುಬೀಗಿದ ಭಾರತದ ಪರ 2ನೇ ಇನ್ನಿಂಗ್ಸ್ನಲ್ಲಿ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ(Ravindra Jadeja) 5 ವಿಕೆಟ್ ಪಡೆದು ಮಿಂಚಿದರೆ. ಕುಲ್ದೀಪ್ ಯಾದವ್ 2, ಅಶ್ವಿನ್ ಹಾಗೂ ಬುಮ್ರಾ ತಲಾ 1 ವಿಕೆಟ್ ಪಡೆದುಕೊಂಡರು.
![](https://pratidhvani.com/wp-content/uploads/2024/02/Jaisval.png)
3ನೇ ಟೆಸ್ಟ್ನಲ್ಲಿ ದೊರೆತ 434 ರನ್ಗಳ ಅಂತರದ ಗೆಲುವು ಭಾರತ ಅತ್ಯಧಿಕ ರನ್ಗಳ ಅಂತರದ ಗೆಲುವಾಗಿದೆ. ಈ ಹಿಂದೆ 2021ರಲ್ಲಿ ನ್ಯೂಜಿ಼ಲೆಂಡ್ ವಿರುದ್ಧ 372 ರನ್ಗಳ ಅಂತರದ ಗೆಲುವು ಸಾಧಿಸಿದ್ದು ದಾಖಲೆಯಾಗಿತ್ತು. ಭಾರತದ ಪರ ಮೊದಲ ಇನ್ನಿಂಗ್ಸ್ನಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಅವರುಗಳು ಶತಕ ಬಾರಿಸಿದರೆ. 2ನೇ ಇನ್ನಿಂಗ್ಸ್ ಯಶಸ್ವಿ ಜೈಸ್ವಾಲ್(214*) ಭರ್ಜರಿ ದ್ವಿಶತಕ ಬಾರಿಸಿ ಮಿಂಚಿದರೆ. ಶುಭ್ಮನ್ ಗಿಲ್(91) ಕೂಡ ಉತ್ತಮ ಪ್ರದರ್ಶನ ನೀಡಿದರು. ಇನ್ನೂ 3ನೇ ಟೆಸ್ಟ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ಎರಡೂ ಇನ್ನಿಂಗ್ಸ್ಗಳಲ್ಲಿ ಅರ್ಧಶತಕ ಸಿಡಿಸಿ ಗಮನ ಸೆಳೆದರು.
#TeamIndia #TestCricket #England #RavindraJadeja #YashaswiJaisval #WTC2025