ದೆಹಲಿ: ವೋಟ್ ಬ್ಯಾಂಕ್ ಗಾಗಿ ಇಂಡಿಯಾ ಬಣ (INDIA bloc) ಮುಜ್ರಾ (ನೃತ್ಯ) ಬೇಕಾದರೂ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ಬಿಹಾರದ (Bihar) ಪಾಟಲೀಪುತ್ರದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಇಂಡಿಯಾ ಬಣವು ಮತ ಬ್ಯಾಂಕ್ ನ ಗುಲಾಮಗಿರಿ ಸ್ವೀಕರಸಿಲು ಬಯಸುತ್ತದೆ. ಆದರೆ, ನಮಗೆ ಸಂವಿಧಾನವೇ ಸರ್ವೋಚ್ಛ ಎಂದು ಹೇಳಿದ್ದಾರೆ.
ಬಿಹಾರದ ಎಸ್ಸಿ, ಎಸ್ಟಿ, ಓಬಿಸಿ ಸಮುದಾಯದ ಮೀಸಲಾತಿಯನ್ನು ಕಿತ್ತುಕೊಳ್ಳಲು ನಾನು ಎಂದಿಗೂ ಬಿಡುವುದಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವನೆಗಳು ಸರ್ವೋಚ್ಚ. ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಸಂಬಂಧಿಸಿದ ಕಾನೂನನ್ನು ಬದಲಾಯಿಸಿದೆ ಎಂದು ಆರೋಪಿಸಿದ್ದಾರೆ.
ಲಾಲೂ ಯಾದವ್ ಅವರ ಆರ್‌ಜೆಡಿಯ ಚುನಾವಣಾ ಚಿಹ್ನೆ ಲ್ಯಾಂಟರ್ನ್ ಕುರಿತು ಗೇಲಿ ಮಾಡಿರುವ ಮೋದಿ, ಇದು ಎಲ್‌ಇಡಿ ಬಲ್ಬ್‌ಗಳ ಯುಗ ಮತ್ತು ಬಿಹಾರದಲ್ಲಿ ಜನರು ಲ್ಯಾಂಟರ್ನ್‌ನೊಂದಿಗೆ ತಿರುಗಾಡುತ್ತಿದ್ದಾರೆ. ಇದು ಕೇವಲ ಒಂದು ಮನೆಯನ್ನು ಬೆಳಗಿಸುವ ಲ್ಯಾಂಟರ್ನ್. ಈ ಲ್ಯಾಂಟರ್ನ್ ಬಿಹಾರದಾದ್ಯಂತ ಕತ್ತಲೆ ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ.