
ಧನ್ಬಾದ್: ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಗೆ ಸೋಮವಾರ ರಾತ್ರಿ ಆಗಮಿಸಿದ ಸಿಬಿಐ ತಂಡವು ಹೌಸಿಂಗ್ ಕಾಲೋನಿಯಲ್ಲಿರುವ ವೈದ್ಯ ಪ್ರಣವ್ ಪುರ್ವೆ, ಬ್ಯಾಂಕ್ ಮೋರ್‌ನಲ್ಲಿರುವ ಟ್ರಾನ್ಸ್‌ಪೋರ್ಟರ್ ಮತ್ತು ಕಲ್ಲಿದ್ದಲು ವ್ಯಾಪಾರಿ ಗುರ್ಪಾಲ್ ಸಿಂಗ್ ಮತ್ತು ಬಿಪಿನ್ ಪ್ರಿಂಟಿಂಗ್ ಪ್ರೆಸ್ ಆಪರೇಟರ್ ಅಶೋಕ್ ಚೌರಾಸಿಯಾ ಅವರ ನಿವಾಸಗಳ ಮೇಲೆ ದಾಳಿ ನಡೆಸಿತು. ಸಿಬಿಐ ತಂಡ ಸೋಮವಾರ ರಾತ್ರಿ ಮೂವರನ್ನು ಕಸ್ಟಡಿಗೆ ತೆಗೆದುಕೊಂಡು ಬಿಪಿನ್ ಪ್ರಿಂಟಿಂಗ್ ಪ್ರೆಸ್‌ನಲ್ಲಿ ರಾತ್ರಿಯಿಡೀ ವಿಚಾರಣೆ ನಡೆಸಿತು.

ಮಂಗಳವಾರ ಬೆಳಗ್ಗೆ ಸಿಬಿಐ ತಂಡ ಮೂವರನ್ನು ಸದರ್ ಆಸ್ಪತ್ರೆಗೆ ಕರೆದೊಯ್ದಿತ್ತು. ಅಲ್ಲಿ ಮೂವರ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಬಳಿಕ ಸಿಬಿಐ ತಂಡ ಮೂವರನ್ನೂ ಬಂಧಿಸಿ ಪಾಟ್ನಾಗೆ ಕರೆದೊಯ್ದಿದೆ.ಈ ಹಿಂದೆ ಪಟ್ನಾದಲ್ಲಿ 10 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಬಿಐ ತಂಡ ಆದಾಯ ತೆರಿಗೆ ಆಯುಕ್ತ ಸಂತೋಷ್ ಕುಮಾರ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿತ್ತು.
ಆದಾಯ ತೆರಿಗೆ ಆಯುಕ್ತರಿಗೆ ಹಣ ನೀಡಿದ ಚಿಕು ಎಂಬ ವ್ಯಕ್ತಿಯನ್ನೂ ಸಿಬಿಐ ಬಂಧಿಸಿತ್ತು. ಸಿಬಿಐ ತಂಡ ಇಬ್ಬರನ್ನೂ ವಿಚಾರಣೆ ನಡೆಸಿದೆ. ನಂತರ ಅವರು ಸಿಬಿಐ ಮುಂದೆ ಧನ್‌ಬಾದ್‌ನ ಉದ್ಯಮಿಗಳು ಮತ್ತು ವೈದ್ಯರನ್ನು ಹೆಸರನ್ನು ಬಾಯಿ ಬಿಟ್ಟರು.. ಅವರ ಮಾಹಿತಿ ಮೇರೆಗೆ ಸಿಬಿಐ ತಂಡ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಧನಬಾದ್ ತಲುಪಿದೆ.
ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ಐವರನ್ನು ಬಂಧಿಸಲಾಗಿದೆ. ಸಂತೋಷ್ ಕುಮಾರ್ ಅವರು ಪಾಟ್ನಾ ಆದಾಯ ತೆರಿಗೆ ಆಯುಕ್ತರೊಂದಿಗೆ ಧನ್ಬಾದ್ ಆದಾಯ ತೆರಿಗೆ ಆಯುಕ್ತರ ಉಸ್ತುವಾರಿಯಲ್ಲಿ ಕೆಲಸ ಮಾಡುತ್ತಿದ್ದರು.ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಡಾ.ಪ್ರಣವ್ ಪುರ್ವೆ ಮತ್ತು ಅಶೋಕ್ ಚೌರಾಸಿಯಾ ಅವರು ಐಟಿ ಕಮಿಷನರ್ ಮತ್ತು ಉದ್ಯಮಿಗಳ ನಡುವೆ ಸಂಪರ್ಕ ಸಾಧಿಸುತ್ತಿದ್ದರು. ಬಹುಶಃ, ಅವರು ಆದಾಯ ತೆರಿಗೆ ಮತ್ತು ಜಿಎಸ್‌ಟಿಗೆ ಸಂಬಂಧಿಸಿದಂತೆ ಸಂಪರ್ಕವನ್ನು ಮಾಡುತ್ತಿದ್ದರು.
ಡೀಲ್ ಕುದುರಿಸಿದ ನಂತರ, ಬಂಧಿತ ಚಿಕು ಎಂಬ ವ್ಯಕ್ತಿ ಆದಾಯ ತೆರಿಗೆ ಆಯುಕ್ತರಿಗೆ ಹಣವನ್ನು ತಲುಪಿಸುತ್ತಿದ್ದನು.ದೆಹಲಿಯ ಸಿಬಿಐ ತಂಡಕ್ಕೆ ಹಲವು ತಿಂಗಳ ಹಿಂದೆಯೇ ಈ ವಂಚನೆಯ ಸುಳಿವು ಸಿಕ್ಕಿತ್ತು. ನಂತರ, ದೆಹಲಿ ಸಿಬಿಐ ತಂಡವು ಈ ವಿಷಯದ ಮೇಲೆ ನಿಗಾ ಇಡುವಂತೆ ಪಾಟ್ನಾ ಸಿಬಿಐಗೆ ಸೂಚಿಸಿತ್ತು. ಪಾಟ್ನಾ ಸಿಬಿಐ ಆದಾಯ ತೆರಿಗೆ ಆಯುಕ್ತರ ಮೇಲೆ ತೀವ್ರ ನಿಗಾ ಇರಿಸಿತ್ತು.ಕಳೆದ ಹಲವು ತಿಂಗಳುಗಳಿಂದ ಸಿಬಿಐ ಐಟಿ ಕಮಿಷನರ್‌ಗೆ ಬಲೆ ಬೀಸಿತ್ತು.