ಬರುವ ಉತ್ತರಪ್ರದೇಶ ಚುನಾವಣೆ ನಿಮಿತ್ತ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ದೆಹಲಿಯ ಕೇಂದ್ರ ಕಚೇರಿಯಲ್ಲಿ ಇಂದು ಯುವ ಪ್ರಣಾಳಿಕೆಯನ್ನು ರಾಹುಲ್ ಗಾಂದಿ ಹಾಗೂ ಪ್ರಿಯಾಂಕ ಗಾಂಧಿ ಬಿಡುಗಡೆ ಮಾಡಿದ್ದಾರೆ.
ಬಳಿಕ ಮಾತನಾಡಿದ ಪ್ರಿಯಾಂಕ, ಯುಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯುವಕರಿಗಾಗಿ ಉದ್ಯೋಗ ಕ್ಯಾಲೆಂಡರ್ಅನ್ನು ರಚಿಸಲಾಗುವುದು. ಅದರಲ್ಲಿ ಪರೀಕ್ಷೆ ಹಾಗೂ ಸಂದರ್ಶನದ ವಿವರಗಳು ಇರುತ್ತವೆ ಸದು ಉತ್ತರ ಪ್ರದೇಶದಲ್ಲಿ ಯುವಕರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಇದು ಯುವಕರ ನಿರುದ್ಯೋಗ ಸಮಸ್ಯೆಗಳಿಗೆ ಕಾಂಗ್ರೆಸ್ ಸ್ಪಷ್ಟ ಪರಿಹಾರವನ್ನ ನೀಡಲಿದೆ ಎಂದು ಹೇಳಿದ್ದಾರೆ.
ಮುಂದುವರೆದು, ಆಡಳಿತದಲ್ಲಿ ಪಾರದರ್ಶಕತೆ ಮೆರೆಯಲು ವಿಯಾರ್ಥಿಗಳಿಗೆ ಸಿಂಗಲ್ ವಿಂಡೋ ಸ್ಕಾಲರ್ಶಿಪ್ಅನ್ನು ಪ್ರಾಂಭಿಸಲಾಗುವುದು ಮತ್ತು ರಾಜ್ಯದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಗ್ರಂಥಾಲಯ, ವಿದ್ಯಾರ್ಥಿಗಳ ಹಾಸ್ಟೆಲ್, ಉಚಿತ ವೈಫೈ ಹಾಗೂ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಮೀಸಲಾತಿ ಹಾಗೂ ಸಾಮಾನ್ಯ ಅರ್ಹತಾ ಪರೀಕ್ಷೆಗಳಲ್ಲಿ ನಡೆದಿರುವ ಹಗರಣ ಸಂಬಂಧ ತನಿಖೆಗೆ ಆದೇಶಿಸಲಾಗುವುದು̤ ಹಾಲಿ ಬಿಜೆಪಿ ಸರ್ಕಾರವು ಶಿಕ್ಷಣದ ಮೇಲಿನ ವೆಚ್ಚವನ್ನು ಕಡಿತಗೊಳಿಸಿದೆ ಅದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ವೆಚ್ಚವನ್ನು ಹೆಚ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ರಾಹುಲ್ ಗಾಂಧಿ ಪ್ರಣಾಳಿಕೆ ಕುರಿತಾಗಿ ಕಾಂಗ್ರೆಸ್ ಉತ್ತರಪ್ರದೇಶದ ಯುವ ಮತದಾರರೊಂದಿಗೆ ಚರ್ಚಿಸಿದೆ ಮತ್ತು ಬಿಡುಗಡೆಯಾಗಿರುವ ಪ್ರಣಾಳಿಕೆಯಲ್ಲಿ ಯುವಕರ ಧ್ವನಿ ಆದಷ್ಟು ಬೇಗ ಪ್ರತಿಫಲಿಸುತ್ತದೆ ಇದು ಬಿಜೆಪಿಯವರ ತರಹ ಪೊಳ್ಳು ಭರವಸೆಯಲ್ಲ. ಉತ್ತರ ಪ್ರದೇಶದ ಯುವಕರಿಗೆ ನವೀನ ದೃಷ್ಟಿಕೋನ ಬೇಕು ಅದು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ರಾಹುಲ್ ಎಂದು ಹೇಳಿದ್ದಾರೆ.