ದೇಶದಲ್ಲೇ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನ ಹೊಂದಿರುವ ರಾಜ್ಯ ಉತ್ತರ ಪ್ರದೇಶ (uttar pradesh). ಬರೋಬ್ಬರಿ 80 ಲೋಕಸಭಾ ಕ್ಷೇತ್ರಗಳನ್ನ (80 constituencies) ಹೊಂದಿರುವ ಉತ್ತರ ಪ್ರದೇಶವನ್ನು ಯಾರು ಗೆಲ್ತಾರೋ, ಅವರೇ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದು ಪ್ರತೀತಿ. ಕಳೆದ ಬಾರಿ ಬಿಜೆಪಿ (Bjp) ಇಲ್ಲಿ ಬಹುತೇಕ ಕ್ಲೀನ್ ಸ್ವೀಪ್ ಮಾಡಿತ್ತು. ಆದ್ರೆ ಈ ಬಾರಿ ಯೋಗಿ ರಾಜ್ಯದಲ್ಲೆ ಬಿಜೆಪಿ ಭರ್ಜರಿ ಹೊಡೆತ ತಿಂದಿದೆ.

ಈ ಬಾರಿ ಉತ್ತರ ಪ್ರದೇಶದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳನ್ನೂ ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿಯಿತ್ತು. ಒಂದು ಅಯೋಧ್ಯೆಯ (Ayodhya) ರಾಮಮಂದಿರದ (ram mandir) ವಿಚಾರ ಮತ್ತೊಂದು ಯೋಗಿಜಿ (yogi adityanath) ಅಗ್ರೆಸ್ಸಿವ್ ಆಡಳಿತ. ಆದ್ರೆ ಈ ಎರಡೂ ಕೂಡ ಉತ್ತರ ಪ್ರದೇಶದ ಮತದಾರರ ಮೇಲೆ ಪರಿಣಾಮ ಬೀರುವಲ್ಲಿ ವಿಫಲವಾಗಿದೆ. ಅದು ಫಲಿಂತಾಶದಿಂದ ಖಾತ್ರಿಯಾಗಿದೆ.

ಎಸ್.ಪಿ (S.P) ಮತ್ತು ಕಾಂಗ್ರೆಸ್ (Congress) ಒಕ್ಕೂಟ ಇಲ್ಲಿ ಕಮಾಲ್ ಮಾಡಿದ್ದು, ಬಿಜೆಪಿಗೆ ಸೆಡ್ಡು ಹೊಡೆದಿದೆ. ಇಂಡಿ (INDI) ಮೈತ್ರಿ ಕೂಟ ಇಲ್ಲಿ 45ಕ್ಕಿಂತಲೂ ಹೆಚ್ಚು ಸ್ಥಾನದಲ್ಲಿ ಗೆಲುವಿನ ನಗೆ ಬೀರಿದ್ದು, ಬಿಜೆಪಿ 35ರ ಆಸುಪಾಸಿನ ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಇದು ಇಡೀ ಬಿಜೆಪಿ ಪಾಳಯಕ್ಕೆ ಆಘಾತವನ್ನ ಉಂಟು ಮಾಡಿದೆ. ಈ ಸೋಲಿಗೆ ಕಾರಣವೇನು ಎಂಬುದು ಬಿಜೆಪಿಯನ್ನ ಪ್ರಶ್ನೆಗಳ ಕಡಲಲ್ಲಿ ತೇಲುವಂತೆ ಮಾಡಿದೆ.











