ಚುನಾವಣೆ (Election) ಹೊತ್ತಲ್ಲೇ ರಾಜ್ಯದ ದಶದಿಕ್ಕುಗಳಲ್ಲೂ ಕುರುಡು ಕಾಂಚಾಣ ಕುಣಿಯುತಲಿದೆ. ಚುನಾವಣಾ ಅಧಿಕಾರಿಗಳು (Election officers) ಎಲ್ಲಾ ಕಡೆ ಹದ್ದಿನ ಕಣ್ಣಿಟ್ಟಿದ್ದು ಅಕ್ರಮ ಹಣ ಬೇಟೆಯಾಡ್ತಿದ್ದಾರೆ.ಯುದ್ಧ.. ಇದು ಎಲೆಕ್ಷನ್ ಯುದ್ಧ..ಲೋಕ ಅಖಾಡದಲ್ಲಿ ಹಣದ ಹೊಳೆ.. ಕಂತೆಕಂತೆ ನೋಟು.. ಚುನಾವಣೆ ಘೋಷಣೆಯಾದ ದಿನದಿಂದ ಎಲ್ಲೆಲ್ಲೂ ಸದ್ದು ಮಾಡ್ತಿದೆ ಝಣಝಣ ಕಾಂಚಾಣ.

ಧಾರವಾಡದಲ್ಲಿ (Dharawada) ಐಟಿ ಅಧಿಕಾರಿಗಳು (IT officers) ದೊಡ್ಡ ಬೇಟೆಯಾಡಿದ್ದಾರೆ. ಸಂತೋಷ್ ಲಾಡ್ (Santhosh laud) ಆಪ್ತ ಬಸವರಾಜ್ ದತ್ತುನವರ್ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ (18 crores) ಪತ್ತೆಯಾಗಿದೆ. ಚುನಾವಣೆಗಾಗಿ ಮದ್ಯ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಿ ಶೋಧ ನಡೆಸಿದಾಗ ಹಣ ಪತ್ತೆಯಾಗಿದೆ. ಇನ್ನು ಧಾರವಾಡದ ದಾಸನಕೊಪ್ಪದ ಅರ್ನಾ ಅಪಾರ್ಟ್‌ಮೆಂಟ್‌ನ ಫ್ಲಾಟ್ ನಂ.303ರಲ್ಲಿ ಬಸವರಾಜ್ ವಾಸವಿದ್ದು ಮನೆಯ ಲಾಕರ್‌ನಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ.

ಮತ್ತೊಂದೆಡೆ ಬಾಗಲಕೋಟೆ (Bagalakote) ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 6.87 ಲಕ್ಷ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನವಲಗುಂದದಿಂದ ಕೆರೂರಿಗೆ ಹೊರಟಿದ್ದ ಕಾರಿನಲ್ಲಿ 2.83 ಲಕ್ಷ ಹಣ ಹಾಗೂ ಗೂಡ್ಸ್ ವಾಹನದಲ್ಲಿ 1 ಲಕ್ಷ ಇನ್ನೊಂದೆಡೆ ಹುಬ್ಬಳ್ಳಿಯಿಂದ ಕೆರೂರಿಗೆ ಹೊರಟಿದ್ದ ಲೈಲ್ಯಾಂಡ್ ವಾಹನದಲ್ಲಿ 2.40 ಲಕ್ಷ ಹಣ ಜಪ್ತಿ ಮಾಡಿದ್ದಾರೆ.
ಕಲಬುರಗಿ (kalaburgi) ಜಿಲ್ಲೆ ಚಿಂಚೋಳಿ ತಾಲೂಕಿನ ಕುಸ್ರಂಪಳ್ಳಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆಯಿಲ್ಲದ 2.29 ಲಕ್ಷ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.. ಬೀದರ್‌ನಿಂದ ಚಿಂಚೋಳಿಗೆ ವಿಕಾಸ್ ಎಂಬಾತ ಬೈಕ್‌ನಲ್ಲಿ ಹಣ ತರುವ ವೇಳೆ ತಪಾಸಣೆ ಮಾಡಿದಾಗ ನಗದು ಪತ್ತೆಯಾಗಿದೆ..