ಸದನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul gandhi) ಭಾಷಣಕ್ಕೆ ಉತ್ತರವಾಗಿ ಸದನದ ನಾಯಕ ಪ್ರಧಾನಿ ನರೇಂದ್ರ ಮೋದಿ (Pm Narendra modi) ಸಖತ್ ಟಕ್ಕರ್ ಕೊಟ್ಟಿದ್ದಾರೆ. ಸದನಕ್ಕೆ ಶಿವನ (Lord shiva) ಫೋಟೋ ತಂದು ಹಿಂದೂ ಧರ್ಮದ(Hindu religion) ಬಗ್ಗೆ ಮಾತನಾಡಿ ತಮ್ಮ ಪದ ಬಳಕೆಯ ಮೂಲಕ ಬಿಜೆಪಿ ಮತ್ತು ಪ್ರಧಾನಿ ಮೋದಿಯನ್ನ ರಾಹುಲ್ ಗಾಂಧಿ ಕೆರಳಿಸಿದ್ದರು ಇದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದ್ದಾರೆ.
ಬರೋಬ್ಬರಿ 136 ನಿಮಿಷಗಳ ಕಾಲ ಭಾಷಣ ಮಾಡಿದ ನಮೋ ಶಿವನ ರೂಪ ದರ್ಶನಕ್ಕೆ ಹೊರತು ಪ್ರದರ್ಶನ ಕಲ್ಲ ಕಾಂಗ್ರೆಸ್ಸಿಗರ ಹಿಂದೂ ವಿರೋಧಿ ಹೇಳಿಕೆಗಳನ್ನು ಇಡೀ ದೇಶ ನೆನಪಿಟ್ಟುಕೊಳ್ಳಲಿದೆ ಎಂದು ಹರಿಹಾಯ್ದರು.
ಇನ್ನು ಕಾಂಗ್ರೆಸ್ (Congress) 99 ಸ್ಥಾನಗಳನ್ನ ಗೆದ್ದಿರುವುದು ಸತ್ಯ ಆದರೆ ಕಾಂಗ್ರೆಸ್ ನೂರಕ್ಕೆ 99 ಸ್ಥಾನಗಳನ್ನು ಪಡೆದಿರುವುದಲ್ಲ 543ಕ್ಕೆ 99 ಅಂಕ ಪಡೆದಿರುವುದು ಎಂಬುದನ್ನ ನೆನಪಿಸಬೇಕಿದೆ ಅಂತ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಾಳಯ್ಯವನ್ನ ಕಿಚ್ಚು ಹಾಯಿಸಿದರು.
ಅಂತಿಮವಾಗಿ ಚಿಕ್ಕ ಬಾಲಕನೊಬ್ಬ ಬಿದ್ದಾಗ ಆತನನ್ನು ಸಮಾಧಾನ ಮಾಡಲು, ನೀನು ಬಿದ್ದೆ ಇಲ್ಲ ,ಗಾಯ ಆಗಿಯೇ ಇಲ್ಲ ,ನೋವಾಗುತ್ತಿಲ್ಲ ಎಂದು ಸಂತೈಸಲು ಖುಷಿಯ ಮಾತುಗಳನ್ನು ಹೇಳುವ ರೀತಿ ,ಇಲ್ಲಿ ಒಬ್ಬ ಬಾಲಕನನ್ನ ಸಂತೈಸಲಾಗುತ್ತಿದೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯನ್ನು ಬಚ್ಚಾ ಎಂದು ಪ್ರಧಾನಿ ನರೇಂದ್ರ ಮೋದಿ ರಾಗಾ ಹೇಳಿಕೆಗಳಿಕೆ ಆಕ್ರೋಶ ಮತ್ತು ಹಾಸ್ಯಭರಿತವಾಗಿ ಉತ್ತರಿಸಿದ್ದಾರೆ.