ನಗರ್ತಪೇಟೆಯಲ್ಲಿ ಹನುಮಾನ್ ಚಾಲೀಸಾ (Hanuman chalisa) ಹಾಕಿದ್ದಕ್ಕೆ ಹಿಂದೂ (Hindu)ಯುವಕನ ಮೇಲೆ ಮುಸ್ಲಿಂ (Muslim) ಪುಂಡರು ದಾಳಿ ನಡೆಸಿದ್ದನ್ನು ವಿರೋಧಿಸಿ ಮಂಗಳವಾರ ಬಿಜೆಪಿ(BJP) ತೀವ್ರ ಪ್ರತಿಭಟನೆಗೆ ಮುಂದಾಗಿತ್ತು. ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ (Shobha karandlaje) ಆಡಿದ ಅದೊಂದು ಮಾತು ತೀವ್ರ ವಿವಾದದ ಸ್ವರೂಪ ಪಡೆದುಕೊಳ್ತಿದೆ. ರಾಮೇಶ್ವರಂ ಕೆಫೆ (Rameshwaram cafe) ಬಾಂಬ್ ಬ್ಲಾಸ್ಟ್ ಪ್ರಕರಣದ ಬಗ್ಗೆ ಮಾತನಾಡುವ ಭರದಲ್ಲಿ ಕೇಂದ್ರ ಸಚಿವೆ ಯಡವಟ್ಟು ಮಾಡಿಕೊಂಡಿದ್ದಾರೆ.

ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಗೂ ತಮಿಳುನಾಡಿನ (Tamilmadu) ವ್ಯಕ್ತಿಗಳಿಗೂ ಸಂಭಂದ ಇದೆ , ಈ ಬ್ಲಾಸ್ಟ್ ನಲ್ಲಿ ತಮಿಳುನಾಡಿನ ವ್ಯಕ್ತಿಗಳ ಕೈವಾಡವಿದೆ ಎಂದು ಹೇಳಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (mp election) ಬಿಜೆಪಿ ತಮಿಳುನಾಡಿನಲ್ಲಿ ಒಳ್ಳೆ ಫಲಿತಾಂಶ ಗಳಿಸುವ ನಿರೀಕ್ಷೆಯಲ್ಲಿತ್ತು. ಅಣ್ಣ ಮಲೈ (anna malai) ಮಿಂಚಿನ ಸಂಚಾರದಿಂದ ಬಿಜೆಪಿ ಭಾರೀ ಸದ್ದು ಮಾಡಿತ್ತು. ಆದ್ರೆ ಇದೀಗ ಶೋಭಾ ಕರಂದ್ಲಾಜೆ ಮಾತುಗಳು ಬಿಜೆಪಿಗೆ ತಮಿಳುನಾಡಲ್ಲಿ (Tamilnadu) ಮುಳುವಾಗುವ ಎಲ್ಲಾ ಸಾಧ್ಯತೆಗಳಿವೆ

ಈಗಾಗಲೇ ಶೋಭಾ ಅವರ ಈ ಹೇಳಿಕೆಗೆ ತಮಿಳುನಾಡಿನ ಸಿಎಂ ಸ್ಟಾಲಿನ್ (cm Stalin) ಕಿಡಿಕಾರಿದ್ದಾರೆ. ಮತ್ತೊಂದು ಕಡೆ ರಾಹುಲ್ ಗಾಂಧಿ (Rahul gandhi) ಇದೇ ವಿಚಾರವನ್ನು ಮುಂದಿಟ್ಟುಕೊಂಡು ನಾವು ಟೆರರಿಸ್ಟ್ (Terrorist) ಅಲ್ಲ ತಮಿಳರು ಎಂಬ ಕ್ಯಾಂಪೇನ್ ನಡೆಸುವ ಪ್ಲಾನ್ ಮಾಡಿದ್ದಾರೆ. ಆ ಮೂಲಕ ಅಣ್ಣ ಮಲೈ ಶ್ರಮವೆಲ್ಲಾ ಶೋಭಾ ಕರಂದ್ಲಾಜೆಯ ಒಂದು ಹೇಳಿಕೆಯಿಂದ ವ್ಯರ್ಥವಾಗಿಬಿಡುತ್ತಾ ಎಂಬ ಟೆನ್ಶನ್ (Tension ) ಬಿಜೆಪಿಯಲ್ಲಿ ಮನೆ ಮಾಡಿದೆ